For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ನ ಪರಿಣಾಮ, ನಾವು ಈಗಾಗಲೇ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ್ದೇವೆ: IMF

|

ಕೊರೊನಾವೈರಸ್‌ನಿಂದಾಗಿ ವಿಶ್ವದ ಆರ್ಥಿಕತೆಯು ದಿನೇ ದಿನೇ ಕಳೆಗುಂದುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ವೈರಸ್ ಕಾಟ ತಾಳಲಾಗದೆ ಲಾಕ್‌ಡೌನ್ ಆಗಿದೆ. ಭಾರತ ಕೂಡ ಏಪ್ರಿಲ್ 15ರವರೆಗೆ ಲಾಕ್‌ಡೌನ್ ಆಗಿದೆ.

ಹೀಗೆ ಜಗತ್ತೇ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವುದು ದೊಡ್ಡ ಮಟ್ಟದ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಹೀಗಾಗಿಯೇ ವಿಶ್ವದ ಆರ್ಥಿಕತೆಯು ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ
ತೀವ್ರವಾದ ಹಾನಿಯನ್ನು ಎದುರಿಸುತ್ತಿದ್ದು ಈಗಾಗಲೇ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಕೊರೊನಾವೈರಸ್‌ನ ಪರಿಣಾಮ, ಜಗತ್ತು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ

"ನಾವು 2020 ಮತ್ತು 2021 ರ ಬೆಳವಣಿಗೆಯ ನಿರೀಕ್ಷೆಗಳನ್ನು ಮರು ಮೌಲ್ಯಮಾಪನ ಮಾಡಿದ್ದೇವೆ. ನಾವು 2009 ಕ್ಕೆ ಹೋಲಿಸಿದರೆ ಈ ಬಾರಿ ಇನ್ನೂ ಕೆಟ್ಟ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ್ದೇವೆ ಎಂಬುದು ಈಗ ಸ್ಪಷ್ಟವಾಗಿದೆ. ನಾವು 2021 ರಲ್ಲಿ ಯೋಜನಾ ಚೇತರಿಕೆ ಕಾರ್ಯಕ್ರಮಗಳನ್ನು ಮಾಡುತ್ತೇವೆ" ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐಎಂಎಫ್, ಅಂತರರಾಷ್ಟ್ರೀಯ ಹಣಕಾಸು ಮತ್ತು ಹಣಕಾಸು ಸಮಿತಿಯ ಆಡಳಿತ ಮಂಡಳಿಯ ಸಭೆಯ ನಂತರ ಜಾರ್ಜೀವಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . 189 ಸದಸ್ಯರನ್ನು ಪ್ರತಿನಿಧಿಸುವ ಈ ಕಮಿಟಿಯು COVID-19 ನಿಂದ ಜಗತ್ತಿಗೆ ಎದುರಾದ ಅಭೂತಪೂರ್ವ ಸವಾಲನ್ನು ಚರ್ಚಿಸಲು ನಡೆಸಲಾಯಿತು.

ಜಾಗತಿಕವಾಗಿ ತೀವ್ರವಾದ ಆರ್ಥೀಕ ಹಾನಿಯಿಂದಾಗಿ ಇದು 2009 ಕ್ಕಿಂತಲೂ ಹೆಚ್ಚು ವೆಚ್ಚದಾಯಕವಾಗಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಆದರೆ ಅಂತರರಾಷ್ಟ್ರೀಯ ಸಮುದಾಯವು ಎಲ್ಲೆಡೆ ವೈರಸ್ ಅನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರೆ ಮತ್ತು ದ್ರವ್ಯತೆ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ, 2021 ರಲ್ಲಿ ಚೇತರಿಕೆಯ ಕಾಣುವ ಲಕ್ಷಣಗಳಿವೆ ಎಂದಿದೆ.

English summary

Corona Impact Global Entered Recession Says IMF

The world is in the face of a devastating impact due to the coronavirus pandemic and has clearly entered a recession says IMF
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X