For Quick Alerts
ALLOW NOTIFICATIONS  
For Daily Alerts

ಈ ವರ್ಷ ಭಾರತದ ಜಿಡಿಪಿ 0 ಪರ್ಸೆಂಟ್: ಮೂಡಿಸ್

|

ಕೊರೊನಾವೈರಸ್ ಲಾಕ್‌ಡೌನ್‌ ಪರಿಣಾಮ ಪ್ರಸಕ್ತ ಹಣಕಾಸು ವರ್ಷ 2020-21ರಲ್ಲಿ ದೇಶದ ಜಿಡಿಪಿ ಯಾವುದೇ ಬೆಳವಣಿಗೆ ಕಾಣದೇ, ಶೂನ್ಯಕ್ಕೆ ಕುಸಿಯಲಿದೆ ಎಂದು ಅಮೆರಿಕಾ ಮೂಲದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯ ಮೌಲ್ಯಮಾಪನ ಸಂಸ್ಥೆಯಾದ ಮೂಡಿಸ್ ಹೇಳಿದೆ.

ಜಾಗತಿಕ ರೇಟಿಂಗ್ ನೀಡುವ ಸಂಸ್ಥೆಯಾದ ಮೂಡಿಸ್ ಈ ವರ್ಷ ಭಾರತದ ಜಿಡಿಪಿ 0 ಪರ್ಸೆಂಟ್ ಕಂಡರೂ, ಮುಂದಿನ ಹಣಕಾಸು ವರ್ಷ 2021-22ರಲ್ಲಿ 6.6 ಪರ್ಸೆಂಟ್‌ಗೆ ಜಿಗಿಯಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.

ಈ ವರ್ಷ ಭಾರತದ ಜಿಡಿಪಿ 0 ಪರ್ಸೆಂಟ್: ಮೂಡಿಸ್

ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಭಾರತದ ವಿತ್ತೀಯ ಕೊರತೆ ಹಿಗ್ಗಲಿದೆ. ಸರಕಾರದ ಸಾಲಗಳು ಮತ್ತು ಖರ್ಚುಗಳು ಹೆಚ್ಚಲಿವೆ. ಮೂಲ ಸೌಕರ್ಯ ಮತ್ತು ಇತರೆ ವಲಯಗಳು ನೆಲಕಚ್ಚಲಿದ್ದು, ಹಣಕಾಸು ವಲಯ ತತ್ತರಿಸಲಿದೆ ಎಂದು ಮೂಡಿಸ್‌ ಅಭಿಪ್ರಾಯಪಟ್ಟಿದೆ.

ಭಾರತದ ಆರ್ಥಿಕ ಪ್ರಗತಿ ಇತ್ತೀಚಿನ ವರ್ಷಗಳಲ್ಲಿ ಇಳಿಕೆಯಾಗುತ್ತಲೇ ಇದೆ. ಉತ್ಪಾದನೆ ಕಡಿಮೆಯಾಗಿದ್ದು, ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ ಎಂದು ಮೂಡಿಸ್‌ ವರದಿಯಲ್ಲಿ ಹೇಳಲಾಗಿದೆ.

English summary

Corona Impact India's GDP 0% In 2020-21 Says Moody's

India's economic growth, with the country expected to see 0 per cent expansion in the current fiscal year, analysts at Moody's said on Friday.
Story first published: Saturday, May 9, 2020, 18:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X