For Quick Alerts
ALLOW NOTIFICATIONS  
For Daily Alerts

ಕೊರೊನಾ ತಡೆಗೆ ಸಿಂಗಾಪೂರ್ ಏಪ್ರಿಲ್ 7ರಿಂದ ಲಾಕ್ ಡೌನ್

|

ಸಿಂಗಾಪೂರ್ ಸರ್ಕಾರವು ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 7ನೇ ತಾರೀಕಿನಿಂದ ಶಾಲೆ, ಉದ್ಯೋಗ ಸ್ಥಳಗಳನ್ನು ಮುಚ್ಚಲು ನಿರ್ಧರಿಸಿದೆ. ಅಗತ್ಯ ಸೇವೆಗಳು, ಮುಖ್ಯ ಆರ್ಥಿಕ ವಲಯಗಳನ್ನು ಹೊರತುಪಡಿಸಿ ಮಂಗಳವಾರದಿಂದ ಉಳಿದೆಲ್ಲವನ್ನು ಒಂದು ತಿಂಗಳು ಮುಚ್ಚಲಾಗುವುದು.

 

ಈ ಬಗ್ಗೆ ಶುಕ್ರವಾರ ಸಿಂಗಾಪೂರ್ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆಲವು ಕ್ರಮಗಳನ್ನು ಮುಂದಿನ ವಾರ ಘೋಷಿಸುವುದಾಗಿ ತಿಳಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ ಸಿಂಗಾಪೂರ್ ನಲ್ಲಿ ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ಕೊರೊನಾ ತಡೆಗೆ ಸಿಂಗಾಪೂರ್  ಏಪ್ರಿಲ್ 7ರಿಂದ ಲಾಕ್ ಡೌನ್

ಸಿಂಗಾಪೂರ್ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ವಿವರ ಇಲ್ಲಿದೆ:
* ಮುಂದಿನ ವಾರದಿಂದ ಕ್ಯಾಸಿನೋಗಳು, ಥೀಮ್ ಪಾರ್ಕ್ ಗಳು ಮುಚ್ಚಲಾಗುವುದು

* ಆಹಾರ ಮಳಿಗೆ, ಮಾರ್ಕೆಟ್, ಸೂಪರ್ ಮಾರ್ಕೆಟ್, ಕ್ಲಿನಿಕ್, ಆಸ್ಪತ್ರೆ, ಸಂಚಾರ ವ್ಯವಸ್ಥೆ, ಬ್ಯಾಂಕಿಂಗ್ ಮತ್ತಿತರ ಅಗತ್ಯ ಸೇವೆಗಳು ಲಭ್ಯವಿರುತ್ತವೆ.

* ಏಪ್ರಿಲ್ 7ರಿಂದ ಎಲ್ಲ ರೆಸ್ಟೋರೆಂಟ್ ಗಳು, ಕಾಫೀ ಶಾಪ್ ಗಳು, ಫುಡ್ ಕೋರ್ಟ್ ಗಳು, ಇತರ ಆಹಾರ- ಪಾನೀಯ ಮಳಿಗೆಗಳಿಂದ ಡೆಲಿವರಿ ಅಥವಾ ತೆಗೆದುಕೊಂಡು ಹೋಗುವ ಸೇವೆ ಮಾತ್ರ ಇರಲಿದೆ.

* ಜಾಗತಿಕ ಸರಬರಾಜು ಜಾಲಗಳು ಮುಚ್ಚುವುದಿಲ್ಲ.

* ಪ್ರೀ ಸ್ಕೂಲ್ ಮತ್ತು ವಿದ್ಯಾರ್ಥಿಗಳ ಕಾಳಜಿ ಮಾಡೂವ ಕೇಂದ್ರಗಳು ಮುಚ್ಚಲಾಗುತ್ತವೆ. ಆದರೆ ಉದ್ಯೋಗ ಮಾಡುವ ಪೋಷಕರು, ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದವರ ಸಲುವಾಗಿ ನಿಯಮಿತವಾಗಿ ಸೇವೆ ಒದಗಿಸುತ್ತವೆ.

* ಏಪ್ರಿಲ್ 5ನೇ ತಾರೀಕಿನಿಂದ ಮರುಬಳಕೆ ಮಾಡಬಹುದಾದ ಮಾಸ್ಕ್ ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು.

ಅಂದ ಹಾಗೆ, ಸಿಂಗಾಪೂರ್ ಸರ್ಕಾರವು ವ್ಯಾಪಾರ- ವ್ಯವಹಾರ, ಕುಟುಂಬಗಳನ್ನು ಬೆಂಬಲಿಸುವ ಉದ್ದೇಶದಿಂದ ಯೋಜನೆ ಘೋಷಿಸುವ ನಿರೀಕ್ಷೆ ಇದೆ.

English summary

Corona Virus Effect: Singapore Announced 1 Month Lock Down

Singapore announced 1 month lock down from April 7th to avoid spread of Corona virus.
Story first published: Friday, April 3, 2020, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X