For Quick Alerts
ALLOW NOTIFICATIONS  
For Daily Alerts

ಕೊರೊನಾ ಇಂಪ್ಯಾಕ್ಟ್‌: ಜೊಮಾಟೊ 13 ಪರ್ಸೆಂಟ್ ಸಿಬ್ಬಂದಿ ವಜಾ

|

ಕೊರೊನಾವೈರಸ್‌ ಲಾಕ್‌ಡೌನ್ ಪರಿಣಾಮ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ 13 ಪರ್ಸೆಂಟ್‌ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದೆ.

ಕಂಪನಿಯಲ್ಲಿ ಸುಮಾರು 4,000 ಉದ್ಯೋಗಿಗಳು ವಿವಿಧ ಹುದ್ದೆಗಳಲ್ಲಿದ್ದು ಅದರಲ್ಲಿ 520 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಜೊಮಾಟೊ ತೀರ್ಮಾನಿಸಿದೆ. ಈ ಕುರಿತಂತೆ ಜೊಮಾಟೊ ಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಯ ವ್ಯವಹಾರದ ಹಲವು ಅಂಶಗಳು ಕಳೆದ ಎರಡು ತಿಂಗಳುಗಳಲ್ಲಿ ಗಮನಾರ್ಹವಾಗಿ ಬದಲಾಗಿವೆ ಮತ್ತು ಈ ಹಲವು ಬದಲಾವಣೆಗಳು ಶಾಶ್ವತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕೊರೊನಾ ಇಂಪ್ಯಾಕ್ಟ್‌: ಜೊಮಾಟೊ 13 ಪರ್ಸೆಂಟ್ ಸಿಬ್ಬಂದಿ ವಜಾ

"ನಾವು ಜೊಮಾಟೋವನ್ನು ಕೇಂದ್ರೀಕೃತ ಕಂಪನಿಯಾಗಿ ನಿರ್ಮಿಸುವುದನ್ನು ಮುಂದುವರಿಸುತ್ತಿದ್ದರೂ, ನಮ್ಮ ಎಲ್ಲಾ ಉದ್ಯೋಗಿಗಳಿಗೆ ಸಾಕಷ್ಟು ಉದ್ಯೋಗವಿದೆ ಎಂದು ಹೇಳಲು ಬರುವುದಿಲ್ಲ. ನಮ್ಮ ಎಲ್ಲ ಸಹೋದ್ಯೋಗಿಗಳಿಗೆ ಸವಾಲಿನ ವಾತಾವರಣದಲ್ಲಿ ಕೆಲಸ ನಿರ್ವಹಿಸುವುದನ್ನು ತರಬೇತಿ ನೀಡಬೇಕಿದೆ. ಆದರೆ ನಮ್ಮ ಒಟ್ತಾರೆ ಉದ್ಯೋಗಿಗಳ ಪೈಕಿ 13 ಪರ್ಸೆಂಟ್‌ರಷ್ಟು ಜನರಿಗೆ ಅಂತಹಾ ಸವಾಲಿನ ವಾತಾವರಣದ ಕೆಲಸ ನೀಡಲು ನಮ್ಮಿಂದ ಸಾಧ್ಯವಿಲ್ಲ. ಹಾಗಾಗಿ ಯಾರಿಗೆ ಈ ಆದೇಶದಿಂದ ಪರಿಣಾಮ ಬೀರಬಹುದೋ ಅವರಿಗೆ ಮುಂದಿನ 24 ಗಂಟೆಗಳಲ್ಲಿ ಲೀಡರ್ ಶಿಪ್ ಟೀಂ ನೊಂದಿಗೆ ಸಂಪರ್ಕಿಸಲು ಕರೆ ಬರುತ್ತದೆ."

ಕೋವಿಡ್ -19 ತನ್ನ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದ್ದರಿಂದ ಜೊಮಾಟೊದಲ್ಲಿ ಇನ್ನು ಮುಂದೆ ಯಾವುದೇ ಕೆಲಸವಿಲ್ಲದ ನಮ್ಮ ಎಲ್ಲ ಉದ್ಯೋಗಿಗಳು ಮುಂದಿನ 6 ತಿಂಗಳವರೆಗೆ ಉಳಿದ ಸಂಸ್ಥೆಗೆ 50 ಪರ್ಸೆಂಟ್ ವೇತನ ಕಡಿತವನ್ನು ಕೈಗೊಳ್ಳಲಿದೆ ಎಂದು ಹೇಳಿದರು. ವಜಾಗೊಳಿಸುವಿಕೆಯಿಂದ ಬಳಲುತ್ತಿರುವ ಜನರು ಮುಂದಿನ ಆರು ತಿಂಗಳವರೆಗೆ ಆರೋಗ್ಯ ವಿಮೆಯ ಜೊತೆಗೆ ಅವರ ಅರ್ಧದಷ್ಟು ಸಂಬಳವನ್ನು ಪಡೆಯುತ್ತಾರೆ ಅಥವಾ ಅವರ ಮುಂದಿನ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಯಾವುದು ಮೊದಲಿನದು ಅದು ಅನ್ವಯಿಸುತ್ತದೆ.

ಕಳೆದ ಒಂದು ವರ್ಷದಲ್ಲಿ ಜೊಮಾಟೊ ಸಿಬ್ಬಂದಿಯನ್ನು ವಜಾಗೊಳಿಸುವುದು ಇದು ಎರಡನೇ ಬಾರಿ. ಸೆಪ್ಟೆಂಬರ್ 2019 ರಲ್ಲಿ, ಕಂಪನಿಯು ತನ್ನ ಗ್ರಾಹಕ ಬೆಂಬಲ ತಂಡದಿಂದ 540 ಉದ್ಯೋಗಿಗಳನ್ನು ಅಥವಾ ಆ ಸಮಯದಲ್ಲಿ 10% ಉದ್ಯೋಗಿಗಳನ್ನು ವಜಾ ಮಾಡಿದೆ.

English summary

Coronavirus Impact Zomato To Lay Off 13 Percent Of Its Staff

Online food delivery major Zomato said it will let go of 520 people or 13% of its workforce and undertake up to a 50% pay cut for the remainder of the organisation
Story first published: Friday, May 15, 2020, 18:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X