ಕೊರೊನಾಯಿಂದ ದೇಶದ ವಿಮಾನಯಾನ ಕ್ಷೇತ್ರ ಕನಿಷ್ಟ 5 ವರ್ಷ ಹಿಂದಕ್ಕೆ?

ಕೊರೊನಾವೈರಸ್ ಹರಡುವಿಕೆ ತಡೆಗಟ್ಟಲು ದೇಶವು 21 ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದ್ದು, ಎಲ್ಲಾ ಉದ್ಯಮವು ಸಂಪೂರ್ಣ ಬಂದ್ ಆಗಿದೆ. ವಿಮಾನಗಳ ಹಾರಾಟವೂ ಕೂಡ ಬಂದ್‌ ಆಗಿದ್ದು ಸಾವಿರಾರು ಕೋಟಿ ರುಪಾಯಿ ನಷ್ಟ ಅನುಭವಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ಕೋವಿಡ್-19 ಮತ್ತು ಸ್ಟೇಟ್ ಆಫ್ ದಿ ಇಂಡಿಯನ್ ಎವಿಯೇಷನ್ ಇಂಡಸ್ಟ್ರಿ ವರದಿಯ ಪ್ರಕಾರ ಸ್ಥಳೀಯ ವಿಮಾನ ಪ್ರಯಾಣವು 2019-20 ರ ಸುಮಾರು 14 ಕೋಟಿಯಷ್ಟಿದ್ದು, ಇದು 2020-21ರ ಹಣಕಾಸಿನ ವರ್ಷದಲ್ಲಿ 8-9 ಕೋಟಿಗೆ ತಲುಪಿದೆ ಎಂದು ಅಂದಾಜಿಸಿದೆ.

ಕೊರೊನಾಯಿಂದ ದೇಶದ ವಿಮಾನಯಾನ ಕ್ಷೇತ್ರ  ಕನಿಷ್ಟ 5 ವರ್ಷ ಹಿಂದಕ್ಕೆ?

205-16ರಲ್ಲಿ ಸ್ಥಳೀಯ ವಿಮಾನ ಪ್ರಯಾಣವು 8-9 ಕೋಟಿಯಷ್ಟಿದ್ದು, ಈ ಹಣಕಾಸು ವರ್ಷದಲ್ಲಿ ಅದಕ್ಕೆ ಸಮನಾಗಿರಲಿದೆ. ಈ ಮೂಲಕ ಕೊರೊನಾವೈರಸ್‌ನಿಂದಾಗಿ ವಿಮಾನಯಾನ ಕ್ಷೇತ್ರದ ಮೇಲಿರುವ ಆಘಾತವನ್ನು ಅಂದಾಜಿಸಿ ಕನಿಷ್ಟ 5 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನಲಾಗಿದೆ.

ಜೊತೆಗೆ ಭಾರತದ ವಾಯುಯಾನ ಕ್ಷೇತ್ರ ಕುಸಿತದ ಭೀತಿಯು ಮುಂದುವರಿದಿದೆ. ಸ ಕೊರೊನಾವೈರಸ್ ಲಾಕ್‌ಡೌನ್ ಮುಗಿದು ಸುಮಾರು 12 ತಿಂಗಳವರೆಗೆ ದೇಶದ ಸುಮಾರು 650 ವಿಮಾನಗಳು ಹಾರಾಟ ನಡೆಸದೇ ಇರಬಹುದು. ಅಂತರರಾಷ್ಟ್ರೀಯ ವಾಯು ದಟ್ಟಣೆಯು(ಟ್ರಾಫಿಕ್) 2020 ರ ಹಣಕಾಸು ವರ್ಷದಲ್ಲಿ ಸುಮಾರು 70 ದಶಲಕ್ಷದಿಂದ, 2021 ರಲ್ಲಿ 35 ರಿಂದ 40 ದಶಲಕ್ಷಕ್ಕೆ ಇಳಿಯುವ ನಿರೀಕ್ಷೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+