For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಮೃತಪಟ್ಟ RIL ಉದ್ಯೋಗಿಗಳ ಕುಟುಂಬಕ್ಕೆ 5 ವರ್ಷ ವೇತನ: ಮಕ್ಕಳಿಗೆ ಉಚಿತ ಶಿಕ್ಷಣ

|

ಕೋವಿಡ್-19 ಸೋಂಕಿನಿಂದ ಮೃತಪಟ್ಟ ತನ್ನ ಉದ್ಯೋಗಿಗಳ ಕುಟುಂಬಕ್ಕೆ ಐದು ವರ್ಷಗಳ ಕಾಲ ವೇತನ ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ ತೆಗೆದುಕೊಂಡಿದೆ. ಈ ಮೂಲಕ ಆರ್‌ಐಎಲ್‌ ತನ್ನೆಲ್ಲಾ ಉದ್ಯೋಗಿಗಳಿಗೆ ಸಾಮಾಜಿಕ ಸುರಕ್ಷತೆ ನೀಡುವ ಜವಾಬ್ದಾರಿಯನ್ನು ಕಂಪನಿ ಹೊತ್ತುಕೊಂಡಿದೆ.

 

ರಿಲಯನ್ಸ್​ ಇಂಡಸ್ಟ್ರೀಸ್ ಉದ್ಯೋಗಿಯು ಕೋವಿಡ್‌ನಿಂದ ಮೃತಪಟ್ಟರೆ, ಆತನ ಕೊನೆಯ ಸಂಬಳ ಎಷ್ಟು ಪಡೆಯುತ್ತಿದ್ದರೋ ಅದೇ ಸಂಬಳವನ್ನು ಮುಂದಿನ 5 ವರ್ಷ ಕಾಲ ಅವರ ಕುಟುಂಬಸ್ಥರಿಗೆ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಮೃತ ಉದ್ಯೋಗಿಯ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನೂ ತಾನೂ ಹೊತ್ತುಕೊಳ್ಳುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್ ತಿಳಿಸಿದೆ.

 
ಕೊರೊನಾದಿಂದ ಮೃತಪಟ್ಟ ರಿಲಯನ್ಸ್ ಉದ್ಯೋಗಿಗಳ ಕುಟುಂಬಕ್ಕೆ 5 ವರ್ಷ ವೇತನ

ಇನ್ನು ರಿಲಯನ್ಸ್​ ಇಂಡಸ್ಟ್ರೀಸ್ ತನ್ನ ಹಾಲಿ ಉದ್ಯೋಗಿಗಳ ಪೈಕಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ಅನುವಾಗಲು ರಜೆ ಸೇರಿದಂತೆ ಅದರ ಖರ್ಚು ವೆಚ್ಚವನ್ನೂ ಭರಿಸುವ ಭರವಸೆ ನೀಡಿದೆ. ಒಂದು ವೇಳೆ, ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ತಕ್ಷಣಕ್ಕೆ 10 ಲಕ್ಷ ರೂ ನಗದು ನೀಡುವುದರ ಜೊತೆಗೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಘೋಷಿಸಿದೆ.

English summary

Covid-19: Reliance Industries announces full salary for 5 years to family of deceased employees and education for children

RIL is helping rebuild the lives of the family members of its employees that lost the Covid battle by providing them the last-drawn salaries for the next five years and supporting the education of their children
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X