For Quick Alerts
ALLOW NOTIFICATIONS  
For Daily Alerts

ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಕೇರ್ಕರ್ ಇ.ಡಿ.ಯಿಂದ ಬಂಧನ

By ಅನಿಲ್ ಆಚಾರ್
|

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕರಾದ ಪೀಟರ್ ಕೇರ್ಕರ್ ನನ್ನು ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿಸಲಾಗಿದೆ. ಕಳೆದ ತಿಂಗಳು ಇ.ಡಿ.ಯಿಂದ ಸಂಸ್ಥೆಯ ಮಾಜಿ ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಅಂದ ಹಾಗೆ ಯೆಸ್ ಬ್ಯಾಂಕ್ ಗೆ ಸಾಲ ಪಾವತಿಸಬೇಕಿದ್ದ ಕಂಪೆನಿಗಳ ಪೈಕಿ ಕಾಕ್ಸ್ ಅಂಡ್ ಕಿಂಗ್ಸ್ ಕೂಡ ಒಂದು.

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸುವ ವೇಳೆ ಇ.ಡಿ.ಯಿಂದ ಕಾಕ್ಸ್ ಅಂಡ್ ಕಿಂಗ್ಸ್ ನ ಆಂತರಿಕ ಲೆಕ್ಕಾಧಿಕಾರಿ ನರೇಶ್ ಜೈನ್ ಹಾಗೂ ಸಿಎಫ್ ಒ ಅನಿಲ್ ಖಂಡೇವಾಲ್ ಎಂಬಿಬ್ಬರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಬಂಧಿಸಲಾಗಿತ್ತು.

ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಕೇರ್ಕರ್ ಇ.ಡಿ.ಯಿಂದ ಬಂಧನ

 

ಯೆಸ್ ಬ್ಯಾಂಕ್ ನಿಂದ ಕಾಕ್ಸ್ ಅಂಡ್ ಕಿಂಗ್ಸ್ ಗೆ ಮಂಜೂರು ಮಾಡಿದ್ದ 3642 ಕೋಟಿ ರುಪಾಯಿ ಸಾಲದಲ್ಲಿ ಅಕ್ರಮದ ಆರೋಪ ಪತ್ತೆ ಹಚ್ಚಲಾಗಿತ್ತು. ಆಗಿನಿಂದ ಕಂಪೆನಿಯ ಮೇಲೆ ಇ.ಡಿ. ಕಣ್ಣು ಬಿತ್ತು. ಈಗಲೂ ಕಾಕ್ಸ್ ಅಂಡ್ ಕಿಂಗ್ಸ್ ನಿಂದ ಯೆಸ್ ಬ್ಯಾಂಕ್ ಗೆ ಸಾಲ ಬಾಕಿ ಇದೆ. ಭಾರತದಲ್ಲಿ ಇರುವ ವಿವಿಧ ಅಂಗಸಂಸ್ಥೆಗಳ ಮೂಲಕ ಆ ಮೊತ್ತವನ್ನು ವಿದೇಶಕ್ಕೆ ರವಾನಿಸಲಾಗಿದೆ ಎಂದು ಇ.ಡಿ. ಅನುಮಾನ ಪಡುತ್ತಿದೆ.

ಈ ಹಗರಣದ ಅಂದಾಜು ಇಪ್ಪತ್ತು ಸಾವಿರ ಕೋಟಿಗೂ ಸ್ವಲ್ಪ ಹೆಚ್ಚೇ ಇದೆ. ಭಾರತದಾದ್ಯಂತದ ವಿವಿಧ ಬ್ಯಾಂಕ್ ಗಳು ಸಾಲ ನೀಡಿದ್ದು, ಅದನ್ನು ವಾಪಸ್ ಮಾಡಿಲ್ಲ. ಆಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಗೆ ಕಾಕ್ಸ್ ಅಂಡ್ ಕಿಂಗ್ಸ್ ನಿಂದ ಸಾಲ ವಾಪಸ್ ಆಗಬೇಕಿದೆ.

ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು

ಸದ್ಯಕ್ಕೆ ಕೇರ್ಕರ್ ಬಂಧನ ಆಗಿರುವುದು ಯೆಸ್ ಬ್ಯಾಂಕ್ ನಿಂದ ಕಾಕ್ಸ್ ಅಂಡ್ ಕಿಂಗ್ಸ್ ಪಡೆದ ಸಾಲಕ್ಕೆ ಸಂಬಂಧಿಸಿದ್ದಾಗಿದೆ. ಅಂದ ಹಾಗೆ ಕಾಕ್ಸ್ ಅಂಡ್ ಕಿಂಗ್ಸ್ ಸ್ಥಾಪನೆ ಆಗಿದ್ದು 1758ರಲ್ಲಿ. ಅದರ ಮುಖ್ಯ ಕಚೇರಿ ಯುಕೆ ಹಾಗೂ ಭಾರತದಲ್ಲಿದ್ದು, ಕಾಕ್ಸ್ ಅಂಡ್ ಕಿಂಗ್ಸ್ ಒಂದು ಕಾಲದಲ್ಲಿ ಭಾರತದ ಟಾಪ್ ಟೂರ್ ಮತ್ತು ಟ್ರಾವೆಲ್ ಕಂಪೆನಿಗಳಲ್ಲಿ ಒಂದಾಗಿತ್ತು. ಮೂರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. ಕಳೆದ ವರ್ಷದಿಂದ ಅದರ ಕುಸಿತ ಶುರುವಾಯಿತು. ಸಾಲು ಸಾಲಾಗಿ ಸಾಲ ಮರುಪಾವತಿ ಮಾಡಲಿಲ್ಲ. ಸಿಬ್ಬಂದಿಗೆ ವೇತನ ನೀಡಲಿಲ್ಲ.

English summary

Cox And King's Promotor Peter Kerkar Arrested By Enforcement Directorate

Enforcement Directorate (ED) arrested Cox And King's promotor Peter Kerkar in money laundering case.
Story first published: Thursday, November 26, 2020, 22:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X