For Quick Alerts
ALLOW NOTIFICATIONS  
For Daily Alerts

ವಾಹನ ಸವಾರರಿಗೆ ಗುಡ್‌ ನ್ಯೂಸ್‌ : ಕಚ್ಚಾತೈಲ ಬೆಲೆ ಇಳಿಕೆ: ಇಂಧನ ದರ 14 ರೂ ಕಡಿತ?

|

ಕೋವಿಡ್ ಬಳಿಕ ಹಾಗೂ ಉಕ್ರೇನ್-ರಷ್ಯಾ ಯುದ್ಧದ ನಡುವೆ ಜಾಗತಿಕವಾಗಿ ಹಣದುಬ್ಬರ ಭಾರೀ ಅಧಿಕವಾಗಿದೆ. ಯುದ್ಧ ಆರಂಭದ ಬಳಿಕ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ ಅನ್ನು ದಾಟಿದೆ. ಆದರೆ ಇತ್ತೀಚೆಗೆ ಕಚ್ಚಾತೈಲ ದರ ಭಾರೀ ಇಳಿಕೆಯಾಗಿದೆ. ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಪ್ರತಿ ಲೀಟರ್‌ಗೆ ಸುಮಾರು 14 ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾಗಿದೆ. ಆದರೂ ಭಾರತದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ನವೆಂಬರ್ 30ರವರೆಗೂ ಬೆಲೆ ಪರಿಷ್ಕರಣೆ ನಡೆದಿಲ್ಲ. ನಿನ್ನೆ 190ನೇ ದಿನ ದೇಶದಲ್ಲಿ ಇಂಧನ ದರದಲ್ಲಿ ಬದಲಾವಣೆಯಾಗಿಲ್ಲ. ಇನ್ನು ಕಚ್ಚಾತೈಲ ದರವು ಬಹುತೇಕ ದಿನಗಳಿಂದ ಹೆಚ್ಚು ಏರಿಳಿತವಾಗಿಲ್ಲ. ಡಬ್ಲ್ಯೂಟಿಐ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 78 ಡಾಲರ್ ಆಗಿದೆ, ಬ್ರೆಂಟ್ ಕಚ್ಚಾತೈಲ ದರವು ಪ್ರತಿ ಬ್ಯಾರೆಲ್‌ಗೆ 85 ಡಾಲರ್ ಆಗಿದೆ.

ಪೆಟ್ರೋಲ್ ಬೆಲೆ 40 ಪೈಸೆ ಇಳಿಸುವ ನಿರ್ಧಾರ ವಾಪಸ್; ವಿವಿಧ ನಗರಗಳಲ್ಲಿ ದರ ಎಷ್ಟಿದೆ ಪರಿಶೀಲಿಸಿಪೆಟ್ರೋಲ್ ಬೆಲೆ 40 ಪೈಸೆ ಇಳಿಸುವ ನಿರ್ಧಾರ ವಾಪಸ್; ವಿವಿಧ ನಗರಗಳಲ್ಲಿ ದರ ಎಷ್ಟಿದೆ ಪರಿಶೀಲಿಸಿ

ಇನ್ನು ಮೇ 21ರಂದು ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಅನ್ನು ಕಡಿತ ಮಾಡಿದ್ದಾರೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 8 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 6 ರೂಪಾಯಿ ಕಡಿತಗೊಳಿಸಿದೆ. ಅದಾದ ಬಳಿಕ ಪೆಟ್ರೋಲ್ ಬೆಲೆ 9.50 ರೂಪಾಯಿ ಹಾಗೂ ಡೀಸೆಲ್ ಬೆಲೆ 7 ರೂಪಾಯಿ ಇಳಿಕೆಯಾಗಿದೆ. ಅದಾದ ಬಳಿಕ ಕೇರಳ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳು ಇಂಧನದ ಮೇಲಿನ ವ್ಯಾಟ್ ಕಡಿತ ಮಾಡಿದೆ. ಆದರೆ ಭಾರತದಲ್ಲಿ ಯಾಕೆ ಇಂಧನ ದುಬಾರಿ?, ಹೇಗೆ ನಿರ್ಧಾರ ಮಾಡಲಾಗುತ್ತದೆ, ಈಗ ಪೆಟ್ರೋಲ್ ದರ ಯಾಕಾಗಿ ಇಳಿಕೆ ಮಾಡಬೇಕು, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

 ಭಾರತದಲ್ಲಿ ಯಾಕೆ ಇಂಧನ ದುಬಾರಿ?

ಭಾರತದಲ್ಲಿ ಯಾಕೆ ಇಂಧನ ದುಬಾರಿ?

ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರವನ್ನು ಆಧರಿಸಿ ಹಾಗೂ ವಿದೇಶ ವಿನಿಮಯ ದರವನ್ನು ಆಧರಿಸಿ ಪೆಟ್ರೋಲ್, ಡೀಸೆಲ್ ದರ ಏರಿಳಿತವಾಗುತ್ತದೆ. ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಬದಲಾವಣೆಯಾಗುತ್ತದೆ. ಭಾರತದಲ್ಲಿ ಇಂಧನ ದರವು ಪ್ರಮುಖವಾಗಿ ನಾಲ್ಕು ಪ್ರಮುಖ ಅಂಶಗಳನ್ನು ಆಧರಿಸಿದೆ.
1) ಭಾರತವು ಪ್ರಮುಖವಾಗಿ ಶೇಕಡ 85ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ.
2) ರೂಪಾಯಿ ಎದುರು ಯುಎಸ್‌ ಡಾಲರ್ ಮೌಲ್ಯ
3) ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಗ್ರಹ ಮಾಡುವ ತೆರಿಗೆ
4) ದೇಶದಲ್ಲಿರುವ ಇಂಧನ ಬೇಡಿಕೆ

 ಭಾರತದಲ್ಲಿ ಇಂಧನ ದರ ನಿರ್ಧಾರ?

ಭಾರತದಲ್ಲಿ ಇಂಧನ ದರ ನಿರ್ಧಾರ?

2010ರ ಜೂನ್‌ವರೆಗೂ ಸರ್ಕಾರ ಪೆಟ್ರೋಲ್ ದರವನ್ನು ನಿರ್ಧಾರ ಮಾಡುತ್ತಿತ್ತು. ಹಾಗೆಯೇ ಈ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಜೂನ್ 26, 2010ರ ಬಳಿಕ ಸರ್ಕಾರವು ದರ ಪರಿಷ್ಕರಣೆ ಮಾಡುವ ಕಾರ್ಯವನ್ನು ತೈಲ ಸಂಸ್ಥೆಗಳಿಗೆ ವಹಿಸಿತು. ಅಕ್ಟೋಬರ್ 2014ರವರೆಗೆ ಸರ್ಕಾರವೇ ಪೆಟ್ರೋಲ್, ಡೀಸೆಲ್ ದರವನ್ನು ನಿರ್ಧಾರ ಮಾಡುತ್ತದೆ. ಅಕ್ಟೋಬರ್ 19, 2014ರ ಬಳಿಕ ಸರ್ಕಾರವು ತೈಲ ಪರಿಷ್ಕರಣೆ ಜವಾಬ್ದಾರಿಯನ್ನು ತೈಲ ಸಂಸ್ಥೆಗಳಿಗೆ ಹಸ್ತಾಂತರಿಸಿದೆ. ಪ್ರಸ್ತುತ ತೈಲ ಸಂಸ್ಥೆಗಳು ಪ್ರತಿ ದಿನ ಜಾಗತಿಕ ತೈಲದರವನ್ನು ನೋಡಿಕೊಂಡು, ವಿನಿಮಯ ದರ, ತೆರಿಗೆ, ಸಾರಿಗೆ ವೆಚ್ಚ ಎಲ್ಲವನ್ನು ಲೆಕ್ಕಹಾಕಿಕೊಂಡು ಭಾರತದಲ್ಲಿ ಇಂಧನ ದರವನ್ನು ನಿರ್ಧಾರ ಮಾಡಲಾಗುತ್ತದೆ.

 ಇಂಧನ ದರ ಕಡಿತ ಯಾಕೆ ಮಾಡಬೇಕು?

ಇಂಧನ ದರ ಕಡಿತ ಯಾಕೆ ಮಾಡಬೇಕು?

ಇಂಧನ ದರವನ್ನು ಪ್ರಮುಖವಾಗಿ ಎರಡು ಕಾರಣದಿಂದಾಗಿ ಕಡಿಮೆ ಮಾಡಬೇಕಾಗುತ್ತದೆ.
1) ಪ್ರತಿ ಬ್ಯಾರೆಲ್‌ಗೆ 245 ರೂಪಾಯಿ ಉಳಿತಾಯ ಮಾಡುತ್ತಿರುವ ತೈಲ ಸಂಸ್ಥೆ: ಭಾರತದಲ್ಲಿ ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನೋಡಿದಾಗ ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ಇರಬೇಕು. ಆದರೆ ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 83 ಡಾಲರ್ ಇದೆ. ಈ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಪ್ರಸ್ತುತ ಇಂಧನ ಸಂಸ್ಥೆಗಳು ಪ್ರತಿ ಬ್ಯಾರೆಲ್‌ಗೆ 245 ರೂಪಾಯಿ ಉಳಿತಾಯ ಮಾಡುತ್ತದೆ. ಪ್ರತಿ ಬ್ಯಾರೆಲ್‌ಗೆ 159 ಲೀಟರ್ ಆಗಿದೆ.
2) ತೈಲ ಸಂಸ್ಥೆಗಳು ಈಗ ನಷ್ಟದಲ್ಲಿಲ್ಲ: ಹೌದು ಪ್ರಸ್ತುತ ತೈಲ ಕಂಪನಿಗಳು ನಷ್ಟದಲ್ಲಿಲ್ಲ. ಪೆಟ್ರೋಲ್ ಮಾರಾಟದಿಂದಾಗಿ ಸರ್ಕಾರಿ ಸಂಸ್ಥೆಗಳು ಲಾಭದಲ್ಲಿ ಇದೆ. ಆದರೆ ಡೀಸೆಲ್ ಮಾರಾಟದಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ನಷ್ಟವಾಗುತ್ತಿದೆ. ಬ್ರೆಂಟ್ ಕಚ್ಚಾತೈಲ ಶೇಕಡ 10ರಷ್ಟು ಅಗ್ಗವಾಗಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಗಳು ಡೀಸೆಲ್‌ನಿಂದಾಗಿ ಲಾಭವನ್ನು ಕಂಡಿದೆ.

 ಮೆಟ್ರೋ ನಗರದಲ್ಲಿ ಇಂಧನ ದರ ಎಷ್ಟಿದೆ?

ಮೆಟ್ರೋ ನಗರದಲ್ಲಿ ಇಂಧನ ದರ ಎಷ್ಟಿದೆ?

ಬೆಂಗಳೂರು: ಪೆಟ್ರೋಲ್ ದರ 101.94 ರೂಪಾಯಿ, ಡೀಸೆಲ್ ದರ 87.89 ರೂಪಾಯಿ
ನವದೆಹಲಿ: ಪೆಟ್ರೋಲ್ ದರ 96.72 ರೂಪಾಯಿ, ಡೀಸೆಲ್ ದರ 89.62 ರೂಪಾಯಿ
ಕೋಲ್ಕತ್ತಾ: ಪೆಟ್ರೋಲ್ ದರ 106.03 ರೂಪಾಯಿ, ಡೀಸೆಲ್ ದರ 92.76 ರೂಪಾಯಿ
ಮುಂಬೈ: ಪೆಟ್ರೋಲ್ ದರ 106.31 ರೂಪಾಯಿ, ಡೀಸೆಲ್ ದರ 94.27 ರೂಪಾಯಿ
ಚೆನ್ನೈ: ಪೆಟ್ರೋಲ್ ದರ 102.63 ರೂಪಾಯಿ, ಡೀಸೆಲ್ ದರ 94.24 ರೂಪಾಯಿ

English summary

Crude Oil Price Decreased: Rates of Petrol, Diesel May Drop by Rs 14 Per Litre

Reduction in price of crude oil: Rates of petrol, diesel likely to drop by Rs 14 per litre; check details here in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X