ಸಿಎಎ ಪ್ರತಿಭಟನೆ ಬಿಸಿ, ಸಲ್ಮಾನ್- ಸುದೀಪ್ ಸಿನ್ಮಾ ಓಪನಿಂಗ್ ಡಲ್
ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕಿಚ್ಚ ಸುದೀಪ ಅಭಿನಯದ ''ದಬಾಂಗ್ " ಚಿತ್ರದ ಮೊದಲ ದಿನದ ಗಳಿಕೆ ಮೊತ್ತ ಬಹಿರಂಗವಾಗಿದೆ. ಮಾರುಕಟ್ಟೆ ತಜ್ಞ, ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು ಚಿತ್ರದ ಆರಂಭ ದಿನದ ಗಳಿಕೆ ತಗ್ಗಲು ದೇಶದೆಲ್ಲೆಡೆ ನಡೆದಿರುವ ಪ್ರತಿಭಟನೆಗಳು ಕಾರಣ ಎಂದಿದ್ದಾರೆ. ಇದಲ್ಲದೆ ಚಿತ್ರದ ಅವಧಿ, ಅನಗತ್ಯ ಹಾಡುಗಳು, ಹೊಸತನವಿರದ ಸ್ಕ್ರಿಪ್ಟ್ ಬಗ್ಗೆ ಪ್ರೇಕ್ಷಕರು ಅಪಸ್ವರ ಎದ್ದಿದ್ದಾರೆ. ಹೀಗಾಗಿ, ಎರಡನೇ ದಿನದ ನಂತರ 9 ನಿಮಿಷ ಟ್ರಿಮ್ ಆಗಿ ಚಿತ್ರ ತೆರೆ ಕಾಣುತ್ತಿದೆ.
ಸಲ್ಮಾನ್, ಸುದೀಪ್ ಅಲ್ಲದೆ, ಸೋನಾಕ್ಷಿ, ಮಹೇಶ್ ಮಂಜ್ರೇಕರ್ ಹಾಗೂ ಅವರ ಪುತ್ರಿ ಸಾಯಿ ಮಂಜೇಕ್ರರ್, ಅರ್ ಭಾಜ್ ಖಾನ್ ಅಭಿನಯದ ಈ ಚಿತ್ರಕ್ಕೆ ಪ್ರಭುದೇವ ನಿರ್ದೇಶನವಿದೆ. ಕನ್ನಡದಲ್ಲೂ ಈ ಬಾರಿ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಮೊದಲ ದಿನದ ಗಳಿಕೆ ಮೊತ್ತದ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಪರಿಣಾಮ ಬೀರಿದೆ.
Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'
ದಬಾಂಗ್ ಭರ್ಜರಿ ಓಪನಿಂಗ್ ಗೆ ಸಿಎಎ ಪ್ರತಿಭಟನೆ ಬಿಸಿ ಸಿನಿಮಾ ಪ್ರಿಯರು ಚಿತ್ರಮಂದಿರದತ್ತ ಸುಳಿದಿಲ್ಲ
ದೇಶದ ಹಲವೆಡೆ ಗಲಭೆ, ಪ್ರತಿಭಟನೆ, ಕರ್ಫ್ಯೂ ಇದ್ದಿದ್ದರಿಂದ ಸಿನಿಮಾ ಪ್ರಿಯರು ಚಿತ್ರಮಂದಿರದತ್ತ ಸುಳಿದಿಲ್ಲ. ಹೀಗಾಗಿ, ಚಿತ್ರದ ಮೊದಲ ಮೂರು ದಿನದ ಗಳಿಕೆ ಸ್ವಲ್ಪ ಡಲ್ ಎನಿಸಿದೆ.
ಸಲ್ಮಾನ್ ಅಭಿನಯದ "ಭಾರತ್'' ಚಿತ್ರಕ್ಕೆ ಹೋಲಿಸಿದರೆ ದಬಾಂಗ್ 3 ಗಳಿಕೆ ಡಲ್ ಆಗಿದೆ. ಭಾರತ್ ಚಿತ್ರ ಮೊದಲ ದಿನ 42.30 ಕೋಟಿ ರು ಗಳಿಸಿತ್ತು. ದಬಾಂಗ್ 3 ಚಿತ್ರ 24.5 ಕೋಟಿ ರು ಮಾತ್ರ ಗಳಿಸಿದೆ.
'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಎಲ್ಲಾ ಭಾಷೆಗಳ ಆವೃತ್ತಿ ಸೇರಿಸಿ ಕೂಡಾ ದಬಾಂಗ್ 3 ಚಿತ್ರವು ಮೊದಲೆರಡು ದಿನಗಳಲ್ಲಿ 24.50 + 24.75 ಕೋಟಿ ರು ಒಟ್ಟಾರೆ 49.25 ಕೋಟಿ ರು ಮಾತ್ರ ಗಳಿಸಿದೆ.

ಸಿನಿಮಾ ಪ್ರಿಯರು ಚಿತ್ರಮಂದಿರದತ್ತ ಸುಳಿದಿಲ್ಲ
ದೇಶದ ಹಲವೆಡೆ ಗಲಭೆ, ಪ್ರತಿಭಟನೆ, ಕರ್ಫ್ಯೂ ಇದ್ದಿದ್ದರಿಂದ ಸಿನಿಮಾ ಪ್ರಿಯರು ಚಿತ್ರಮಂದಿರದತ್ತ ಸುಳಿದಿಲ್ಲ. ಹೀಗಾಗಿ, ಚಿತ್ರದ ಮೊದಲ ಮೂರು ದಿನದ ಗಳಿಕೆ ಸ್ವಲ್ಪ ಡಲ್ ಎನಿಸಿದೆ.
ಸಲ್ಮಾನ್ ಅಭಿನಯದ "ಭಾರತ್'' ಚಿತ್ರಕ್ಕೆ ಹೋಲಿಸಿದರೆ ದಬಾಂಗ್ 3 ಗಳಿಕೆ ಡಲ್ ಆಗಿದೆ. ಭಾರತ್ ಚಿತ್ರ ಮೊದಲ ದಿನ 42.30 ಕೋಟಿ ರು ಗಳಿಸಿತ್ತು. ದಬಾಂಗ್ 3 ಚಿತ್ರ 24.5 ಕೋಟಿ ರು ಮಾತ್ರ ಗಳಿಸಿದೆ.
ಎಲ್ಲಾ ಭಾಷೆಗಳ ಆವೃತ್ತಿ ಸೇರಿಸಿ ಕೂಡಾ ದಬಾಂಗ್ 3 ಚಿತ್ರವು ಮೊದಲೆರಡು ದಿನಗಳಲ್ಲಿ 24.50 + 24.75 ಕೋಟಿ ರು ಒಟ್ಟಾರೆ 49.25 ಕೋಟಿ ರು ಮಾತ್ರ ಗಳಿಸಿದೆ.
ಚಿತ್ರದ ಗಳಿಕೆ ಮೊದಲೆರೆಡು ದಿನ ಕಡಿಮೆ
ಚಿತ್ರದ ಗಳಿಕೆ ಎಷ್ಟು ಪ್ರಮಾಣದಲ್ಲಿ ಮೊದಲೆರೆಡು ದಿನ ಕಡಿಮೆಯಾಗಿದೆ ಎಂಬ ಅಂಕಿ ಅಂಶ ಟ್ವೀಟ್ ಮಾಡಿರುವ ವಿಶ್ಲೇಷಕ ತರುಣ್ ಆದರ್ಶ್. ಸಲ್ಮಾನ್ ಖಾನ್ ಅವರ ಭಾರತ್ ಚಿತ್ರಕ್ಕೆ ಹೋಲಿಸಿದರೆ ಹಾಗೂ ದಬಾಂಗ್ ಚಿತ್ರದ ಮೊದಲ ಎರಡು ದಿನಗಳಲ್ಲಿ ಇಷ್ಟು ಗಳಿಸಬಹುದು ಎಂಬ ನಿರೀಕ್ಷೆಗೆ ಹೋಲಿಸಿದರೆ ಎರಡು ದಿನಗಳಲ್ಲಿ ಕನಿಷ್ಠ 7.5 ಕೋಟಿ ರು ಗಳಿಂದ 9 ಕೋಟಿ ರು ಕಡಿಮೆ ಗಳಿಕೆಯಾಗಿದೆ ಎಂದಿದ್ದಾರೆ.
ಕನ್ನಡದಲ್ಲಿ ದಬಾಂಗ್-3 ನೋಡಿದವರಿಗೆ ಒಂದು ವಿಷ್ಯದಲ್ಲಿ ಭಾರಿ ನಿರಾಸೆ!

2010ರಿಂದ 2019ರ ತನಕ ಮೊದಲ ದಿನದ ಗಳಿಕೆ
ಸಲ್ಮಾನ್ ಖಾನ್ ಚಿತ್ರಗಳು 2010ರಿಂದ 2019ರ ತನಕ ಮೊದಲ ದಿನದ ಗಳಿಕೆ(ಭಾರತದಲ್ಲಿ)
ಬಿಡುಗಡೆ ವರ್ಷ-ಚಿತ್ರ-ಗಳಿಕೆ ಮೊತ್ತ(ಕೋಟಿ ರುಗಳಲ್ಲಿ)
2010: ವೀರ್ -7 ಕೋಟಿ ರು
2010: ದಬಾಂಗ್- 14.50
2011: ರೆಡಿ-13.15
2011: ಬಾಡಿಗಾರ್ಡ್- 21.60
2012: ದಬಾಂಗ್ 2-21.10
2013: ಜೈಹೋ 17.75
2014: ಕಿಕ್-26.40

ಸಲ್ಮಾನ್ ಖಾನ್ ಚಿತ್ರಗಳು 2015ರಿಂದ 2019ರ ತನಕ ಮೊದಲ ದಿನದ ಗಳಿಕೆ(ಭಾರತದಲ್ಲಿ)
ಬಿಡುಗಡೆ ವರ್ಷ-ಚಿತ್ರ-ಗಳಿಕೆ ಮೊತ್ತ(ಕೋಟಿ ರುಗಳಲ್ಲಿ)
2015: ಬಜರಂಗಿ ಭಾಯ್ ಜಾನ್-27.25
2016: ಪ್ರೇಮ್ ರತನ್ ಧನ್ ಪಾಯೋ-40.35
2017: ಟ್ಯೂಬ್ ಲೈಟ್-21.15
2017: ಟೈಗರ್ ಜಿಂದಾ ಹೇ- 34.10
2018: ರೇಸ್ 3- 29.17
2019: ಭಾರತ್- 42.30
2019: ದಬಾಂಗ್ 3-24.50 ಕೋಟಿ ರು