For Quick Alerts
ALLOW NOTIFICATIONS  
For Daily Alerts

ದೆಹಲಿಯಲ್ಲಿ ಮದ್ಯದ ಮೇಲೆ 70 ಪರ್ಸೆಂಟ್ ತೆರಿಗೆ ಹೆಚ್ಚಳ, ಆಂಧ್ರದಲ್ಲಿ 50 ಪರ್ಸೆಂಟ್ ಏರಿಕೆ

|

ಕೊರೊನಾ ಲಾಕ್‌ಡೌನ್ ಮುಗಿದು ಮದ್ಯದ ಮಾರಾಟ ಶುರುವಾಯ್ತು ಎಂದು ಮದ್ಯಪ್ರಿಯರು ಖುಷಿಪಟ್ಟಿದ್ದ 24 ಗಂಟೆಯೊಳಗೆ ದೆಹಲಿ ಹಾಗೂ ಆಂಧ್ರ ಸರ್ಕಾರ ಶಾಕ್ ನೀಡಿದೆ. ಮದ್ಯದ ಮಾರಾಟ ಹೆಚ್ಚಾಗುತ್ತಿರುವ ಪರಿ ನೋಡಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿವೆ. ಇದಕ್ಕೆ ಅವು ಕಂಡುಕೊಂಡ ಅಸ್ತ್ರ ತೆರಿಗೆ ಏರಿಕೆ

 

ಮದ್ಯದ ತೆರಿಗೆ ಹೆಚ್ಚಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಜನರು ಮದ್ಯಸೇವನೆಯನ್ನು ತಗ್ಗಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ 70 ಪರ್ಸೆಂಟ್ ತೆರಿಗೆ ಏರಿಕೆ

ದೆಹಲಿಯಲ್ಲಿ 70 ಪರ್ಸೆಂಟ್ ತೆರಿಗೆ ಏರಿಕೆ

ಕೊರೊನಾ ಬಿಕ್ಕಟ್ಟಿನಿಂದಾಗಿ ಆರ್ಥಿಕವಾಗಿ ಭಾರೀ ನಷ್ಟದ ಸುಳಿಗೆ ಸಿಲುಕಿರುವ ದೆಹಲಿಯ ಆಪ್‌ ಸರ್ಕಾರ, ಮದ್ಯದ ದರವನ್ನು 70 ಪರ್ಸೆಂಟ್‌ರಷ್ಟು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಹೊಸ ದರ ಮಂಗಳವಾರದಿಂದಲೇ(ಮೇ 05) ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.

ಹಾಲಿ ಮಾರಾಟ ಮಾಡುತ್ತಿರುವ ಎಲ್ಲಾ ಮಾದರಿಯ ಮದ್ಯದ ಗರಿಷ್ಠ ಮಾರಾಟದ ಶುಲ್ಕದ ಮೇಲೆ 70 ಪರ್ಸೆಂಟ್‌ರಷ್ಟು 'ವಿಶೇಷ ಕೊರೋನಾ ಶುಲ್ಕ' ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಂದರೆ ಯಾವುದಾದರೂ ಮದ್ಯದ ಬಾಟಲ್‌ ದರ 1000 ರುಪಾಯಿ ಇದ್ದರೆ ಇನ್ನು ಅದು 1700 ರುಪಾಯಿ ಆಗಲಿದೆ

 

ಜನರನ್ನು ನಿಯಂತ್ರಿಸಲು, ಆದಾಯ ಹೆಚ್ಚಿಸಿಕೊಳ್ಳಲು ತೆರಿಗೆ ಹೆಚ್ಚಳ

ಜನರನ್ನು ನಿಯಂತ್ರಿಸಲು, ಆದಾಯ ಹೆಚ್ಚಿಸಿಕೊಳ್ಳಲು ತೆರಿಗೆ ಹೆಚ್ಚಳ

ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕವಾಗಿ ಸದೃಢವಾಗಲು ಮತ್ತು ಮದ್ಯದ ಅಂಗಡಿಗಳ ಮುಂದೆ ಜನ ಜಂಗುಳಿಯನ್ನು ನಿಯಂತ್ರಿಸಲು ಮುಂದಾಗಿರುವ ದೆಹಲಿ ಸರ್ಕಾರ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಿದೆ.

ಇನ್ನು ಸೋಮವಾರ ದೆಹಲಿಯ 150 ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದ್ಯಪ್ರಿಯರು ದಿನವಿಡೀ ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಿದ್ದರು. ಆದರೆ, ಈ ವೇಳೆ ಹಲವು ಕಡೆಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಯಡವಟ್ಟು ಮಾಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಮದ್ಯಪ್ರಿಯರ ಸಂಖ್ಯೆ ಕಡಿಮೆ ಮಾಡಬೇಕು ಎಂದು ಯೋಚಿಸಿರುವ ದೆಹಲಿ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

 

ಆಂಧ್ರದಲ್ಲಿ 50 ಪರ್ಸೆಂಟ್ ತೆರಿಗೆ ಹೆಚ್ಚಳ
 

ಆಂಧ್ರದಲ್ಲಿ 50 ಪರ್ಸೆಂಟ್ ತೆರಿಗೆ ಹೆಚ್ಚಳ

ಆಂಧ್ರಪ್ರದೇಶ ಸರ್ಕಾರ ಕೂಡ ಸೋಮವಾರ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಿ 25 ಪರ್ಸೆಂಟ್ ತೆರಿಗೆ ದರವನ್ನು ಹೆಚ್ಚಿಸಿತ್ತು. ಆದರೆ ಜನರು ಗಂಟೆಗಟ್ಟಲೇ ಕ್ಯೂ ನಿಂತು ಭಾರೀ ಪ್ರಮಾಣದಲ್ಲಿ ಮದ್ಯ ಖರೀದಿಸುತ್ತಿದ್ದಾರೆ. ಹೀಗಾಗಿ ತೆರಿಗೆಯನ್ನು 25 ರಿಂದ 50 ಪರ್ಸೆಂಟ್‌ಗೆ ಮಂಗಳವಾರ (ಮೇ 05) ಏರಿಕೆ ಮಾಡಿದೆ.

ಕೊರೊನಾ ಸೋಂಕು ಇನ್ನೂ ಜ್ವಲಂತ ಸಮಸ್ಯಯಾಗಿರುವುದರಿಂದ ಜನರು ಸಾಮಾಜಿಕ ಅಂತರ ಮರೆತು, ಹೆಚ್ಚು ಮದ್ಯ ಸೇವನೆಗೆ ಇಳಿಯುತ್ತಿದ್ದಾರೆ ಎಂಬ ಯೋಚನೆ ಮೇರೆಗೆ ತೆರಿಗೆ ದರವನ್ನು ದುಪ್ಪಟ್ಟು ಹೇರಲಾಗಿದೆ.

 

ದೆಹಲಿಯಲ್ಲಿ ಮದ್ಯದ ಬಳಿಕ ಪೆಟ್ರೋಲ್-ಡೀಸೆಲ್ ತೆರಿಗೆಯು ಹೆಚ್ಚಳ

ದೆಹಲಿಯಲ್ಲಿ ಮದ್ಯದ ಬಳಿಕ ಪೆಟ್ರೋಲ್-ಡೀಸೆಲ್ ತೆರಿಗೆಯು ಹೆಚ್ಚಳ

ಮದ್ಯದ ಮೇಲೆ 70 ಪರ್ಸೆಂಟ್ ತೆರಿಗೆ ಹೆಚ್ಚಳದ ಬಳಿಕ ದೆಹಲಿ ಸರ್ಕಾರ ತೈಲ ದರದ ಮೇಲೆ ವ್ಯಾಟ್ ಅನ್ನು 27 ಪರ್ಸೆಂಟ್‌ನಿಂದ 30 ಪರ್ಸೆಂಟ್‌ಗೆ ಏರಿಕೆ ಮಾಡಿದೆ. ಈ ಮೂಲಕ ಪೆಟ್ರೋಲ್ ಪ್ರತಿ ಲೀಟರ್‌ಗೆ 1.67 ರುಪಾಯಿ ಏರಿಕೆಯಾದರೆ, ಡೀಸೆಲ್ 7.10 ರುಪಾಯಿ ಹೆಚ್ಚಳವಾಗಿದೆ.

ಕರ್ನಾಟಕದಲ್ಲೂ ಮದ್ಯದ ಮೇಲಿನ ತೆರಿಗೆ ಏರಿಕೆ ಯೋಚನೆ

ಕರ್ನಾಟಕದಲ್ಲೂ ಮದ್ಯದ ಮೇಲಿನ ತೆರಿಗೆ ಏರಿಕೆ ಯೋಚನೆ

ದೆಹಲಿ ಹಾಗೂ ಆಂಧ್ರ ಸರ್ಕಾರಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮದ್ಯದ ಮೇಲಿನ ತೆರಿಗೆ ಹೆಚ್ಚಳದ ಬಳಿಕ ಕರ್ನಾಟಕ ಸರ್ಕಾರವು ಈ ಕುರಿತು ಚಿಂತನೆ ನಡೆಸಿದೆ. ಕರ್ನಾಟಕದಲ್ಲಿ ಮದ್ಯದ ಮೇಲಿನ ನಿರ್ಬಂಧ ತೆರವಾದ ಮೊದಲೇ ದಿನವೇ 45 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಹೀಗಾಗಿ ಸರ್ಕಾರ ಖಜಾನೆ ತುಂಬಿಸಲು ತೆರಿಗೆ ಏರಿಕೆ ಮಾಡುವ ಚಿಂತನೆ ನಡೆಸಿದೆ.

English summary

Delhi and Andra Govt Increased Tax on Liquor

Delhi government increaded tax on liquor by 70 percent, by following andra govt increased tax 50 Percent.
Story first published: Tuesday, May 5, 2020, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X