For Quick Alerts
ALLOW NOTIFICATIONS  
For Daily Alerts

ಮೇ 25ರಿಂದ ವಿಮಾನ ಹಾರಾಟ: ಗರಿಷ್ಟ ಅವಧಿಯ ಪ್ರಯಾಣಕ್ಕೆ 3,500 ರಿಂದ 10,000 ರುಪಾಯಿ ಫಿಕ್ಸ್

|

ದೇಶೀಯ ವಿಮಾನ ಹಾರಾಟ ಕಾರ್ಯಾಚರಣೆಯು ಮೇ 25 ರಿಂದ ಪುನಾರಂಭಗೊಳ್ಳಲಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳಿಗೆ ಟಿಕೆಟ್ ದರ ಮಾರ್ಗಸೂಚಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ಪ್ರಕಟಿಸಿದ್ದು, ಮುಂದಿನ ಮೂರು ತಿಂಗಳವರೆಗೂ ಇದೇ ದರ ಪಟ್ಟಿ ಅನುಸರಿಸುವಂತೆ ಸೂಚಿಸಲಾಗಿದೆ.

 

ವಿಮಾನಗಳ ಹೊಸ ಆದೇಶವು ಮೇ 25 ರಿಂದ ಆಗಸ್ಟ್ 24 ರವರೆಗೆ ಅನ್ವಯವಾಗಲಿದ್ದು, ವಿಮಾನ ಹಾರಾಟ ಅವಧಿಯನ್ನು 7 ವರ್ಗಗಳಾಗಿ ವಿಂಗಡಿಸಲಾಗಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ವಿಮಾನ ಪ್ರಯಾಣದ ಅವಧಿಯ ಮೇಲೆ 7 ವರ್ಗಗಳಾಗಿ ವಿಂಗಡಣೆ

ವಿಮಾನ ಪ್ರಯಾಣದ ಅವಧಿಯ ಮೇಲೆ 7 ವರ್ಗಗಳಾಗಿ ವಿಂಗಡಣೆ

ವಿಮಾನ ಪ್ರಯಾಣದ ಅವಧಿಯ ಮೇರೆಗೆ ಹಾರಾಟದ ಅವಧಿಯನ್ನು 7 ವರ್ಗಗಳಾಗಿ ವಿಂಗಡಿಸಲಾಗಿದೆ. 30 ನಿಮಿಷಗಳ ವರೆಗಿನ ಹಾರಾಟ, 30 ರಿಂದ 60 ನಿಮಿಷಗಳು, 60 ರಿಂದ 90 ನಿಮಿಷಗಳು, 90 ರಿಂದ 120 ನಿಮಿಷಗಳು, 120 ರಿಂದ 150 ನಿಮಿಷಗಳು, 180 ರಿಂದ 210 ನಿಮಿಷಗಳಾಗಿ ವರ್ಗೀಕರಿಸಲಾಗಿದೆ.

ಟಿಕೆಟ್ ದರ ಕನಿಷ್ಟ 3,500, ಗರಿಷ್ಟ 10,000 ರುಪಾಯಿ

ಟಿಕೆಟ್ ದರ ಕನಿಷ್ಟ 3,500, ಗರಿಷ್ಟ 10,000 ರುಪಾಯಿ

ದೀರ್ಘಾವಧಿ ಸಮಯದ ಮೇಲೆ ವಿಮಾನ ಹಾರಾಟ ಪುನಾರಂಭಗೊಳ್ಳಲಿದ್ದು, ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿ ದರ ಏರಿಸಬಾರದೆಂದು ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣದ ಅವಧಿ ಮೇರೆಗೆ ದರವನ್ನೂ ಫಿಕ್ಸ್ ಮಾಡಿದೆ. ಟಿಕೆಟ್ ದರ ಕನಿಷ್ಠ 3500 ರುಪಾಯಿ , ಗರಿಷ್ಠ ಶುಲ್ಕ 10,000 ರುಪಾಯಿ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 ಶೇಕಡಾ 40ರಷ್ಟು ಸೀಟುಗಳಿಗೆ ಮಧ್ಯದ ದರದಲ್ಲಿ ಟಿಕೆಟ್ ನೀಡುವ ಆದೇಶ
 

ಶೇಕಡಾ 40ರಷ್ಟು ಸೀಟುಗಳಿಗೆ ಮಧ್ಯದ ದರದಲ್ಲಿ ಟಿಕೆಟ್ ನೀಡುವ ಆದೇಶ

ವಿಮಾನಯಾನದ ಶೇಕಡಾ 40ರಷ್ಟು ಸೀಟುಗಳಿಗೆ ನಿಗದಿ ಪಡಿಸಿರುವ ಮಧ್ಯದ ದರದಲ್ಲಿ ಟಿಕೆಟ್ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ಹೇಳಿದ್ದಾರೆ.

ಉದಾಹರಣೆಗೆ ದೆಹಲಿ-ಮುಂಬೈ ನಡುವಿನ ಪ್ರಯಾಣಕ್ಕೆ ಕನಿಷ್ಟ 3500 ರುಪಾಯಿ ಹಾಗೂ ಗರಿಷ್ಟ 10,000 ರುಪಾಯಿ ನಿಗದಿಯಾದರೆ, ಇದರಲ್ಲಿ ಮಧ್ಯದ ದರ 6,700 ರುಪಾಯಿ ಆಗುತ್ತದೆ. ಇದೇ ದರದಲ್ಲಿ ಟಿಕೆಟ್ ವಿತರಿಸಬೇಕು ಎಂದು ಸೂಚಿಸಲಾಗಿದೆ.

ಹೆಚ್ಚುವರಿಯಾಗಿ, ಕ್ಯಾಪಿಂಗ್ ಮೂಲ ದರಗಳಿಗೆ ಮಾತ್ರ ಅನ್ವಯಿಸುತ್ತದೆ. ಬಳಕೆದಾರರ ಅಭಿವೃದ್ಧಿ ಶುಲ್ಕ, ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಯಂತಹ ತೆರಿಗೆಗಳನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಮಧ್ಯಮ ಸೀಟುಗಳನ್ನು ಖಾಲಿ ಇಡುವ ಅಗತ್ಯವಿಲ್ಲ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 

English summary

Delhi Mumbai Minimum Fare Rs 3500, Max Rs 10000

Domestic Passenger Fligths To Start From May 25, Delhi to mumbai minimum fare Rs 3500, Max Rs 10000 Said Union Civil Aviation Minister Hardeep singh puri
Story first published: Thursday, May 21, 2020, 18:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X