For Quick Alerts
ALLOW NOTIFICATIONS  
For Daily Alerts

ಮೇ 17ರವರೆಗೆ ವಿಮಾನ ಹಾರಾಟಕ್ಕೆ ಬ್ರೇಕ್: ಡಿಜಿಸಿಎ ನಿರ್ಧಾರ

|

ದೇಶದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸುವ ಹಿನ್ನೆಲೆಯಲ್ಲಿ ಎಲ್ಲಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟಗಳ ಕಾರ್ಯಾಚರಣೆಯನ್ನು ಮೇ 17ರ ವರೆಗೆ ಸ್ಥಗಿತಗೊಳಿಸಲು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ನಿರ್ಧರಿಸಿದೆ. ಅಲ್ಲದೆ ಈ ಕುರಿತು ಪ್ರಕಟಣೆ ಹೊರಡಿಸಿದೆ.

 

ಮಾರ್ಚ್ 25ರಂದು ಮೊದಲ ಬಾರಿಗೆ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಎಲ್ಲಾಲ ವಿಮಾನಯಾನಗಳು ರದ್ದುಗೊಂಡಿರುವ ಪರಿಣಾಮ ದೇಶದ ವಿಮಾನಯಾನ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಇದೀಗ ಮತ್ತೆ ಈ ನಿರ್ಧಾರದಿಂದಾಗಿ ಸಾವಿರಾರು ಕೋಟಿ ರುಪಾಯಿ ಮತ್ತಷ್ಟು ನಷ್ಟವಾಗಲಿದೆ.

 
ಮೇ 17ರವರೆಗೆ ವಿಮಾನ ಹಾರಾಟಕ್ಕೆ ಬ್ರೇಕ್: ಡಿಜಿಸಿಎ ನಿರ್ಧಾರ

ಇನ್ನು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಬ್ರೇಕ್ ಹಾಕಿರುವ ಡಿಜಿಸಿಎ ಅನುಮೋದನೆಯೊಂದಿಗೆ ಸರಕು ವಿಮಾನಯಾನಗಳು ಯಥವತ್ತಾಗಿ ತನ್ನ ಸೇವೆಯನ್ನು ಮುಂದುವರಿಸಲಿದೆ.

ಈ ಮಧ್ಯೆ ಕೊರೊನಾ ಬಿಕ್ಕಟ್ಟಿನಿಂದ ಭಾರಿ ನಷ್ಟ ಅನುಭವಿಸಿರುವ ವಿಮಾನಯಾ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಿರಿಯ ಸಚಿವರೊಂದಿಗೆ ಶುಕ್ರವಾರ ಚರ್ಚೆ ನಡೆಸಿದ್ದಾರೆ. ದೇಶದ ವಾಯುಮಾರ್ಗವನ್ನು ಪರಿಣಾಮಕಾರಿ ಬಳಸಿಕೊಳ್ಳುವ ಮೂಲಕ ನಗರಗಳ ಮಧ್ಯೆ ಪ್ರಯಾಣದ ಅವಧಿಯನ್ನು ತಗ್ಗಿಸುವುದರೊಂದಿಗೆ ಇಂಧನ ಹಣ ಉಳಿತಾಯವಾಗುವಂತಹ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

English summary

DGCA Suspends Commercial Flight Operations Till May 17

After Lockdown Extension DGCA saturday Issued a circular to extend the suspension of domestic and international flight upto may 17
Story first published: Saturday, May 2, 2020, 17:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X