ಸಾರ್ವಕಾಲಿಕ ಗರಿಷ್ಠ ತಲುಪಿದ ಡೀಸೆಲ್ ದೆಹಲಿಯಲ್ಲಿ ರು. 77.06

ನವದೆಹಲಿಯಲ್ಲಿ ಲೀಟರ್ ಡೀಸೆಲ್ ಬೆಲೆ ಶುಕ್ರವಾರದಂದು (ಜೂನ್ 19, 2020) ಸಾರ್ವಕಾಲಿಕ ಗರಿಷ್ಠ ಮಟ್ಟವಾದ 77.06 ರುಪಾಯಿಯನ್ನು ಮುಟ್ಟಿದೆ. ಒಂದು ಕಡೆ ಪೆಟ್ರೋಲ್ 19 ತಿಂಗಳ ಗರಿಷ್ಠ ಮಟ್ಟವಾದ 78.37 ರು.ನಲ್ಲಿದೆ. ಶುಕ್ರವಾರದಂದು ಪೆಟ್ರೋಲ್ ದರ ಲೀಟರ್ ಗೆ 56 ಪೈಸೆ ಹೆಚ್ಚಳವಾಗಿದ್ದರೆ, ಡೀಸೆಲ್ 63 ಪೈಸೆ ಏರಿದೆ. ಸತತ ಹದಿಮೂರನೇ ದಿನ ಡೀಸೆಲ್- ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಆಗಿದೆ.

ಡೀಸೆಲ್ ಈ ಹಿಂದೆ ಸಾರ್ವಕಾಲಿಕ ದಾಖಲೆಯ ಬೆಲೆಗೆ ಏರಿಕೆ ಆಗಿದ್ದು ಅಕ್ಟೋಬರ್ 16, 2018ರಲ್ಲಿ. ಆಗ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 80 ಡಾಲರ್ ಇತ್ತು. ಆದರೆ ಈಗ ಕಚ್ಚಾ ತೈಲದ ಬೆಲೆ ಅದರ ಅರ್ಧದಷ್ಟು, ಅಂದರೆ 40 ಡಾಲರ್ ಗೆ ಇಳಿಕೆ ಆಗಿದೆ. ಆದರೂ ಬೆಲೆ ಈ ಮಟ್ಟದಲ್ಲಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರವು ಲೀಟರ್ ಡೀಸೆಲ್ ಗೆ 13 ರುಪಾಯಿ ಹಾಗೂ ಪೆಟ್ರೋಲ್ ಗೆ 10 ರುಪಾಯಿ ಅಬಕಾರಿ ಸುಂಕ ಏರಿಸಿತ್ತು. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 20 ಅಮೆರಿಕನ್ ಡಾಲರ್ ಗೆ ಕುಸಿದಿತ್ತು. ಆದರೆ ಅದರ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸದೆ ಸುಂಕ ಏರಿಕೆ ಮಾಡಿತ್ತು,

ಸಾರ್ವಕಾಲಿಕ ಗರಿಷ್ಠ ತಲುಪಿದ ಡೀಸೆಲ್ ದೆಹಲಿಯಲ್ಲಿ ರು. 77.06

ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರ
ನವದೆಹಲಿ: ಪೆಟ್ರೋಲ್ 78.37- ಡೀಸೆಲ್ 77.06

ಗುರ್ ಗಾಂವ್: ಪೆಟ್ರೋಲ್ 76.46 ಡೀಸೆಲ್ 69.40

ಮುಂಬೈ: ಪೆಟ್ರೋಲ್ 85.21- ಡೀಸೆಲ್ 75.53

ಚೆನ್ನೈ: ಪೆಟ್ರೋಲ್ 81.82- ಡೀಸೆಲ್ 74.77

ಹೈದರಾಬಾದ್: ಪೆಟ್ರೋಲ್ 81.36- ಡೀಸೆಲ್ 75.31

ಬೆಂಗಳೂರು: ಪೆಟ್ರೋಲ್ 80.91 - ಡೀಸೆಲ್ 73.28

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+