For Quick Alerts
ALLOW NOTIFICATIONS  
For Daily Alerts

ದೆಹಲಿಯಲ್ಲಿ ಡೀಸೆಲ್ ದರ ಆಗಲಿದೆ 8 ರು.ಗೂ ಹೆಚ್ಚು ಇಳಿಕೆ

|

ದೆಹಲಿಯಲ್ಲಿ ಡೀಸೆಲ್ ದರದಲ್ಲಿ ಭರ್ಜರಿ ಇಳಿಕೆ ಆಗಲಿದೆ. ಅಲ್ಲಿನ ಸಂಪುಟ ಸಭೆಯಲ್ಲಿ ಗುರುವಾರ ಡೀಸೆಲ್ ಮೇಲಿನ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (VAT) ಅನ್ನು 30ರಿಂದ 16.75 ಪರ್ಸೆಂಟ್ ಗೆ ಇಳಿಸಲು ತೀರ್ಮಾನಿಸಲಾಯಿತು. ಇದರಿಂದ ಡೀಸೆಲ್ ಪ್ರತಿ ಲೀಟರ್ ಗೆ 8.36 ರುಪಾಯಿ ಬೆಲೆ ಕಡಿಮೆ ಆಗುತ್ತದೆ. ಸದ್ಯಕ್ಕೆ 82 ರುಪಾಯಿಗೆ ಮಾರಾಟ ಆಗುತ್ತಿರುವ ಡೀಸೆಲ್, ಇನ್ನು ಮುಂದೆ 73.64 ರುಪಾಯಿ ಆಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ20ರಿಂದ 25 ಪರ್ಸೆಂಟ್ ಸಾಗಣೆ ವೆಚ್ಚ ಹೆಚ್ಚಳಕ್ಕೆ ನೀ ಕೊಡೆ- ನಾ ಬಿಡೆ

ವಾಹನಗಳ ತೈಲದ ಮೇಲಿನ VAT ಅನ್ನು ಕಳೆದ ಮೇ ತಿಂಗಳಲ್ಲಿ ದೆಹಲಿ ಸರ್ಕಾರ ಏರಿಕೆ ಮಾಡಿತ್ತು. ಕೇಂದ್ರ ಸರ್ಕಾರವು ಪೆಟ್ರೋಲ್- ಡೀಸೆಲ್ ಮೇಲೆ ಅಬಕಾರಿ ಸುಂಕ ಹಾಕುತ್ತದೆ. ಅದು ಕೂಡ ಮೇ ತಿಂಗಳಲ್ಲಿ ಅಬಕಾರಿ ಸುಂಕದಲ್ಲಿ ಭಾರೀ ಏರಿಕೆ ಮಾಡಿತ್ತು. ಸದ್ಯಕ್ಕೆ ದೆಹಲಿಯಲ್ಲಿ ಡೀಸೆಲ್ ಚಿಲ್ಲರೆ ಮಾರಾಟ ದರ ಲೀಟರ್ ಗೆ 81.94 ರುಪಾಯಿ ಇದ್ದರೆ, ಪೆಟ್ರೋಲ್ ಲೀಟರ್ ಗೆ 80.43 ರುಪಾಯಿ ಇದೆ.

ತೈಲ ದರ ನಿಗದಿ ಹೇಗೆ?

ತೈಲ ದರ ನಿಗದಿ ಹೇಗೆ?

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿಗದಿ ಆಗುವುದು ಅಂತರರಾಷ್ಟ್ರೀಯ ಕಚ್ಚಾ ತೈಲ ದರ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಮತ್ತಿತರ ಮಾರುಕಟ್ಟೆ ಅಂಶಗಳ ಮೇಲೆ. ಅಂದ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಬರುವುದಿಲ್ಲ.

ಜುಲೈ 16ನೇ ತಾರೀಕಿನ ದರ ಲೆಕ್ಕಾಚಾರ

ಜುಲೈ 16ನೇ ತಾರೀಕಿನ ದರ ಲೆಕ್ಕಾಚಾರ

ಈ ತೈಲ ದರದಲ್ಲಿ ಅಬಕಾರಿ ಸುಂಕ, ವ್ಯಾಟ್, ಮಾರ್ಕೆಟಿಂಗ್ ವೆಚ್ಚ ಹಾಗೂ ಮಾರ್ಜಿನ್, ಡೀಲರ್ ಗಳ ಕಮಿಷನ್ ಮುಂತಾದವು ಸೇರಿಕೊಂಡಿರುತ್ತವೆ. ಈಗ ಜುಲೈ 16ನೇ ತಾರೀಕಿನ ದೆಹಲಿಯಲ್ಲಿನ ಡೀಸೆಲ್ ಚಿಲ್ಲರೆ ಮಾರಾಟ ದರದ ಉದಾಹರಣೆಯನ್ನು ನೀಡಲಾಗುತ್ತಿದೆ. ಇಂಡಿಯನ್ ಆಯಿಲ್ ವೆಬ್ ಸೈಟ್ ಮಾಹಿತಿ ಪ್ರಕಾರ ಯಾವುದಕ್ಕೆ ಎಷ್ಟು ಎಂಬ ವಿವರ ಹೀಗಿದೆ.

ಯಾವುದಕ್ಕೆ ಎಷ್ಟು?

ಯಾವುದಕ್ಕೆ ಎಷ್ಟು?

ಮೂಲ ಬೆಲೆ (ಲೀಟರ್ ಗೆ) ರು. 27.52

ಸಾಗಣೆ ವೆಚ್ಚೆ ರು. 0.30

ಅಬಕಾರಿ ಸುಂಕ ರು. 31.83

ಡೀಲರ್ ಕಮಿಷನ್ (ಸರಾಸರಿ) ರು. 2.55

VAT (ಡೀಲರ್ ಕಮಿಷನ್ ಗೂ ಸೇರಿಸಿ ವ್ಯಾಟ್ ಹಾಕಲಾಗುತ್ತದೆ) ರು. 18.98

ಅಂತಿಮವಾಗಿ ದೆಹಲಿಯಲ್ಲಿ ಒಂದು ಲೀಟರ್ ಡೀಸೆಲ್ ಗೆ ಗ್ರಾಹಕರು ಪಾವತಿಸುವ ದರ ರು. 81.18

English summary

Diesel Will Become Cheaper In Delhi; Government Reduced VAT

Arvind Kejriwal led Delhi government will reduce VAT on Diesel. So, diesel rate will reduce by more than 8 rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X