For Quick Alerts
ALLOW NOTIFICATIONS  
For Daily Alerts

ಕನ್ನಡ ರಾಜ್ಯೋತ್ಸವದಂದು ಡಿಜಿಟಲ್ ರುಪಾಯಿ ಪ್ರಾಯೋಗಿಕ ಆರಂಭ

|

ನವದೆಹಲಿ, ಅ. 31: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿರುವ ಆರ್‌ಬಿಐನ ಡಿಜಿಟಲ್ ಕರೆನ್ಸಿ ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಚಾಲನೆಗೆ ಬರಲಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆರಂಭಿಕ ಹಂತದಲ್ಲಿ ಸಗಟು (ಹೋಲ್‌ಸೇಲ್) ವಿಭಾಗದಲ್ಲಿ ಚಲಾವಣೆಗೊಳ್ಳಲಿದೆ. ಇದರ ಪರಿಣಾಮ ಮತ್ತು ಫಲಿತಾಂಶದ ಆಧಾರದ ಮೇಲೆ ರೀಟೇಲ್ ಮಾರುಕಟ್ಟೆಗಳಲ್ಲಿ ಡಿಜಿಟಲ್ ರೂಪಾಯಿ ಅಳವಡಿಕೆಯಾಗಲಿದೆ.

ಸದ್ಯ ಮೊದಲ ಪ್ರಾಯೋಗಿಕ ಹಂತದಲ್ಲಿ ಸರ್ಕಾರಿ ಷೇರುಗಳ ವಹಿವಾಟುಗಳನ್ನು ಡಿಜಿಟಲ್ ರುಪೀ ಮೂಲಕ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇತರ ಹೋಲ್‌ಸೇಲ್ ವಹಿವಾಟು, ಅಂತಾರಾಷ್ಟ್ರೀಯ ಪಾವತಿ ಇತ್ಯಾದಿಗಳಲ್ಲಿ ಸಿಬಿಡಿಸಿ ಬಳಕೆಯ ಪ್ರಯೋಗ ನಡೆಯಲಿದೆ ಎಂದು ಆರ್‌ಬಿಐ ಹೇಳಿದೆ.

ರಾತ್ರಿ ಹೊತ್ತು ರೈಲು ಪ್ರಯಾಣ: ಐಆರ್‌ಸಿಟಿಸಿ ಹೊಸ ಗೈಡ್‌ಲೈನ್ಸ್ರಾತ್ರಿ ಹೊತ್ತು ರೈಲು ಪ್ರಯಾಣ: ಐಆರ್‌ಸಿಟಿಸಿ ಹೊಸ ಗೈಡ್‌ಲೈನ್ಸ್

ಆರಂಭಿಕ ಹಂತದ ಪ್ರಯೋಗ

ಆರಂಭಿಕ ಹಂತದ ಪ್ರಯೋಗ

ಈ ಪ್ರಾಯೋಗಿಕ ಯೋಜನೆಯಲ್ಲಿ ಸದ್ಯ ಒಂಬತ್ತು ಬ್ಯಾಂಕುಗಳನ್ನು ಗುರುತಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳು ಮೊದಲ ಹಂತದಲ್ಲಿ ಸಿಬಿಡಿಸಿ ಕರೆನ್ಸಿಯಿಂದ ವಹಿವಾಟಿಗೆ ವ್ಯವಸ್ಥೆ ಮಾಡಲಿವೆ.

"ಡಿಜಿಟಲ್ ರುಪೀ ಚಲಾವಣೆಯಿಂದ ಅಂತರ್-ಬ್ಯಾಂಕ್ ಮಾರುಕಟ್ಟೆ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ವಹಿವಾಟು ವೆಚ್ಚವೂ ತಗ್ಗುತ್ತದೆ" ಎಂದು ಆರ್‌ಬಿಐ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

ಸದ್ಯ ಹೋಲ್‌ಸೇಲ್ ಸೆಗ್ಮೆಂಟ್‌ನಲ್ಲಿ ಪ್ರಯೋಗ

ಸದ್ಯ ಹೋಲ್‌ಸೇಲ್ ಸೆಗ್ಮೆಂಟ್‌ನಲ್ಲಿ ಪ್ರಯೋಗ

ಸದ್ಯ ಹೋಲ್‌ಸೇಲ್ ವಿಭಾಗದಲ್ಲಿ ಡಿಜಿಟಲ್ ರುಪಾಯಿಯ ಪ್ರಯೋಗ ಆಗುತ್ತಿದೆ. ಡಿಸೆಂಬರ್ ತಿಂಗಳು ಆರಂಭವಾಗುವ ಹೊತ್ತಿಗೆ ರೀಟೇಲ್ ಸೆಗ್ಮೆಂಟ್‌ನಲ್ಲೂ ಇದರ ಪ್ರಯೋಗ ಶುರುಗೊಳ್ಳುವ ನಿರೀಕ್ಷೆ ಇದೆ. ರೀಟೇಲ್ ಸೆಗ್ಮೆಂಟ್‌ನಲ್ಲಿ ಇದರ ಪ್ರಯೋಗದಲ್ಲಿ ಕೆಲ ನಿರ್ದಿಷ್ಟ ಗುಂಪಿನ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಬಳಸಿಕೊಳ್ಳಲು ಆರ್‌ಬಿಐ ಯೋಜಿಸಿದೆ.

ಈಗ ಬಿಡುಗಡೆಯಾಗಲಿರುವ ಡಿಜಿಟಲ್ ರೂಪಾಯಿಯು ಎರಡು ವಿಧದ್ದಾಗಿರುತ್ತದೆ. ಹೋಲ್‌ಸೇಲ್ ಸೆಗ್ಮೆಂಟ್‌ಗೆ ಬಿಡುಗಡೆಯಾಗುವ ಸಿಬಿಡಿಸಿಯು ಅಕೌಂಟ್ ಆಧಾರಿತವಾಗಿರುವ ಸಾದ್ಯತೆ ಇದೆ. ರೀಟೇಲ್ ಸೆಗ್ಮೆಂಟ್‌ನಲ್ಲಿ ಟೋಕನ್ ಆಧಾರಿತ ಸಿಬಿಡಿಸಿ ಚಲಾವಣೆಯಾಗುವ ನಿರೀಕ್ಷೆ ಇದೆ.

ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಘೋಷಣೆ ಮಾಡಿದ್ದರು. 2023ರ ಹಣಕಾಸು ವರ್ಷದಲ್ಲಿ ಇದನ್ನು ಜಾರಿಗೆ ತರುವ ಗುರಿ ಇಟ್ಟಿದ್ದಾರೆ. ವಿವಿಧ ಹಂತಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿ ಮಾಡುತ್ತಾ, ಅಂತಿಮವಾಗಿ ಇದನ್ನು ಅನುಷ್ಠಾನಕ್ಕೆ ತರಲು ಆರ್‌ಬಿಐ ಕಾರ್ಯನಿರತವಾಗಿದೆ.

 

ಸಿಬಿಡಿಸಿ ಹೇಗಿರುತ್ತದೆ?

ಸಿಬಿಡಿಸಿ ಹೇಗಿರುತ್ತದೆ?

ಕೆಲ ವಾರಗಳ ಹಿಂದೆ ಆರ್‌ಬಿಐ ಡಿಜಿಟಲ್ ರೂಪಾಯಿ ಜಾರಿಗೆ ಕಾನ್ಸೆಪ್ಟ್ ನೋಟ್ ಬಿಡುಗಡೆ ಮಾಡಿತ್ತು. ಈಗಿನ ಹಣಕಾಸು ವ್ಯವಸ್ಥೆಗೆ ಹೆಚ್ಚು ವ್ಯತ್ಯಯವಾಗದ ರೀತಿಯಲ್ಲಿ ಡಿಜಿಟಲ್ ಕರೆನ್ಸಿ ಚಾಲನೆಗೆ ಕ್ರಮಗಳನ್ನು ಅವಲೋಕಿಸುತ್ತಿದ್ದೇವೆ ಎಂದು ಆ ಟಿಪ್ಪಣಿಯಲ್ಲಿ ಹೇಳಿತ್ತು.

ನಮ್ಮ ಹಣಕಾಸು ವ್ಯವಸ್ಥೆಯಲ್ಲಿ ಹಲವು ರೀತಿಯ ವಹಿವಾಟು ವ್ಯವಸ್ಥೆ ಇದೆ. ಅದರಲ್ಲಿ ಆರ್‌ಬಿಐ ಪ್ರಿಂಟ್ ಮಾಡುವ ಕ್ಯಾಷ್ ಕೂಡ ಒಂದು. ಇನ್ನು ಯುಪಿಐ ಪೇಮೆಂಟ್ ವ್ಯವಸ್ಥೆ ಇದೆ. ಈಗ ಡಿಜಿಟಲ್ ರೂಪದ ಹಣ ಬಂದಿದೆ. ಕ್ಯಾಷ್ ಹಣಕ್ಕೂ ಡಿಜಿಟಲ್ ಹಣಕ್ಕೂ ಡಿಜಿಟಲ್ ಎನ್ನುವುದು ಬಿಟ್ಟರೆ ಅಂಥೇನು ವ್ಯತ್ಯಾಸ ಇಲ್ಲ. ಡಿಜಿಟಲ್ ರೂಪಾಯಿಯಿಂದ ಬಹಳ ಸುಲಭವಾಗಿ, ವೇಗವಾಗಿ, ವೆಚ್ಚರಹಿತವಾಗಿ ಹಣದ ವಹಿವಾಟು ನಡೆಸಲು ಸಾಧ್ಯ.

ಡಿಜಿಟಲ್ ರೂಪಾಯಿಯ ಪಾತ್ರ ಹೇಗಿರುತ್ತದೆ ಎಂದು ಆರ್‌ಬಿಐ ಸ್ವಲ್ಪ ಸ್ಪಷ್ಟವಾಗಿ ಹೇಳಿದೆ. ಸಿಬಿಡಿಸಿ ಎಂಬುದು ಆರ್‌ಬಿಐ ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿರುವ ಕಾನೂನಾತ್ಮಕ ಹಣವಾಗಿರುತ್ತದೆ. ಸದ್ಯ ಇರುವ ವಿವಿಧ ರೂಪದ ಹಣದ ಚಲಾವಣೆಗೆ ಯಾವ ಅಡ್ಡಿಯೂ ಇರುವುದಿಲ್ಲ. ಅದಕ್ಕೆ ಪೂರಕವಾಗಿ ಸಿಬಿಡಿಸಿ ಇರುತ್ತದೆ. ಒಂದು ರೀತಿಯಲ್ಲಿ ಹಣದ ವ್ಯವಸ್ಥೆಯಲ್ಲಿ ಹೆಚ್ಚುವರಿ ಆಯ್ಕೆ ಸಿಕ್ಕಂತಾಗುತ್ತದೆ.

 

ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

English summary

Digital Rupee Pilot Release In First Phase From November 1st

RBI has piloting digital rupee in wholesale segment in a first phase. A month later retail segment may see experimentation of CBDC. In a phased manner RBI is going to implement digital rupee as an additional form of money.
Story first published: Monday, October 31, 2022, 20:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X