For Quick Alerts
ALLOW NOTIFICATIONS  
For Daily Alerts

ಮೇ 25ರಿಂದ ದೇಶೀಯ ವಿಮಾನ ಹಾರಾಟ ಪ್ರಾರಂಭ

|

ಇದೇ ತಿಂಗಳು ಮೇ 25ರಿಂದ ದೇಶೀಯ ವಿಮಾನಯಾನ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದಾರೆ.

 

ಮಾರಣಾಂತಿಕ ಕೊರೋನಾ ವೈರಸ್‌ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಕಳೆದ ಮಾರ್ಚ್ 25 ರಿಂದ ದೇಶದಾದ್ಯಂತ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು. ಹೀಗಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

 
ಮೇ 25ರಿಂದ  ದೇಶೀಯ ವಿಮಾನ ಹಾರಾಟ ಪ್ರಾರಂಭ

ಈ ನಡುವೆ ಎರಡನೇ ಹಂತದ ಲಾಕ್‌ಡೌನ್ ಮುಗಿಯುವ ವೇಳೆ ಸ್ಥಳೀಯ ವಿಮಾನ ಸೇವೆ ಆರಂಭಿಸುವುದಾಗಿ ಏರ್‌ ಇಂಡಿಯಾ ತಿಳಿಸಿತ್ತು. ಆದರೆ, ಕಾರಣಾಂತರಗಳಿಂದ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ನಡುವೆ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ಸಡಿಲಿಕೆ ಮಾಡಲಾಗಿದ್ದು, ಕೇಂದ್ರ ವಿಮಾನಯಾನ ಸಚಿವಾಲಯ ವಿಮಾನ ಸೇವೆ ಆರಂಭಕ್ಕೆ ಮುಂದಾಗಿದೆ.

ಈ ಕುರಿತು ಇಂದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್ ಪುರಿ, "2020 ರ ಮೇ 25 ರಿಂದ ದೇಶೀಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳು ಆರಂಭವಾಗಲಿದ್ದು, ಹಂತ ಹಂತವಾಗಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಹೀಗಾಗಿ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಿಮಾನವಾಹಕ ನೌಕೆಗಳು ಮೇ 25 ರಿಂದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ತಿಳಿಸಲಾಗುತ್ತಿದೆ. ಪ್ರಯಾಣಿಕರ ಸಂಚಾರಕ್ಕಾಗಿ ಎಸ್‌ಒಪಿಗಳನ್ನು ಸಹ ಪ್ರತ್ಯೇಕವಾಗಿ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.

English summary

Domestic Flight Will Resume From 25 May

Domestic Flight Will Resume From 25 May, says civil aviation minister hardeep singh puri on wednesday
Story first published: Wednesday, May 20, 2020, 18:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X