For Quick Alerts
ALLOW NOTIFICATIONS  
For Daily Alerts

24 ಗಂಟೆಗಳಲ್ಲಿ 1000% ಜಿಗಿತಗೊಂಡ ದುಬೈಕಾಯಿನ್: ಎಚ್ಚರಿಕೆ ನೀಡಿದ ದುಬೈ ಸರ್ಕಾರ

|

ಕ್ರಿಪ್ಟೋಕರೆನ್ಸಿಗಳಲ್ಲಿ ಒಂದಾದ ದುಬೈಕಾಯಿನ್ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ಶೇಕಡಾ 1000ರಷ್ಟು ಏರಿಕೆಗೊಂಡಿದೆ. ಹೀಗಾಗಿ ದುಬೈ ಸರ್ಕಾರವು ಈ ಕ್ರಿಪ್ಟೋಕರೆನ್ಸಿ ಕುರಿತು ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದು, ಇದು ಮೋಸದ ಜಾಲಕ್ಕೆ ಬೀಳಿಸುವ ಹಗರಣ ಎಂದಿದೆ.

 

ಈ ಡಿಜಿಟಲ್ ಕರೆನ್ಸಿಯನ್ನು ದುಬೈನ ಅಧಿಕೃತ ಡಿಜಿಟಲ್ ಕರೆನ್ಸಿ ಎಂದು ಹೆಸರಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯ ಹೊರಬಿದ್ದ ನಂತರ ದುಬೈಕಾಯಿನ್ ಮೌಲ್ಯ ಹೆಚ್ಚಾಗಿದೆ. ಕ್ರಿಪ್ಟೋಕರೆನ್ಸಿಯ ಏರಿಕೆಗೆ ಸಂಬಂಧಿಸಿದಂತೆ ಹಲವಾರು ಮಾಧ್ಯಮ ತಾಣಗಳು ವರದಿ ಮಾಡಿವೆ.

 
24 ಗಂಟೆಗಳಲ್ಲಿ 1000% ಜಿಗಿತಗೊಂಡ ದುಬೈಕಾಯಿನ್ ಕ್ರಿಪ್ಟೋಕರೆನ್ಸಿ

ಹೀಗಾಗಿ ದುಬೈ ಸರ್ಕಾರವು ಈ ಕುರಿತು ಎಚ್ಚರಿಸಿದ್ದು, ನಾವು ಯಾವುದೇ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಅನುಮೋದಿಸಿಲ್ಲ ಎಂದು ಹೇಳಿಕೆ ನೀಡಿದೆ. ಇದು ಹೂಡಿಕೆದಾರರ ವೈಯಕ್ತಿಯ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ ಎಂದು ಸರ್ಕಾರ ಎಚ್ಚರಿಸಿದೆ.

ಆದರೆ, ದುಬೈಕೋಯಿನ್ ಅನ್ನು ಯಾವುದೇ ಅಧಿಕೃತ ಪ್ರಾಧಿಕಾರವು ಎಂದಿಗೂ ಅನುಮೋದಿಸಿಲ್ಲ ಎಂದು ದುಬೈ ಸರ್ಕಾರ ಮಾಧ್ಯಮ ಕಚೇರಿ ಶುಕ್ರವಾರ ಹೇಳಿಕೆ ನೀಡಿದೆ. "ನಾಣ್ಯವನ್ನು ಉತ್ತೇಜಿಸುವ ವೆಬ್‌ಸೈಟ್ ವಿಸ್ತಾರವಾದ ಫಿಶಿಂಗ್ ಅಭಿಯಾನವಾಗಿದ್ದು, ಅದರ ಸಂದರ್ಶಕರಿಂದ ವೈಯಕ್ತಿಕ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ" ಎಂದು ಸರ್ಕಾರ ಎಚ್ಚರಿಸಿದೆ.

ಕ್ರಿಪ್ಟೋಕರೆನ್ಸಿ ಬೆಲೆ ಕಳೆದ 24 ಗಂಟೆಗಳಲ್ಲಿ ಶೇಕಡಾ 1,000 ರಷ್ಟು ಏರಿಕೆಯಾಗಿದೆ. ಕ್ರಿಪ್ಟೋ ಡಾಟ್ ಕಾಮ್ ಪ್ರಕಾರ, ದುಬೈಕಾಯಿನ್ ಸುಮಾರು $0.17 ಕ್ಕೆ ವಹಿವಾಟು ನಡೆಸುತ್ತಿತ್ತು, ಆದರೆ ಮೇ 27 ರಂದು $1.13 ಕ್ಕೆ ಏರಿಕೆಗೊಂಡಿದೆ.

English summary

Dubaicoin Cryptocurrency Jumps 1000 Percent In 24 Hours: Dubai Govt Warning

A cryptocurrency called DubaiCoin (DBIX) jumped 1000 per cent in 24 hours. But Dubai government has warned investors against this digital coin and said it was a phishing scam.
Story first published: Saturday, May 29, 2021, 20:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X