For Quick Alerts
ALLOW NOTIFICATIONS  
For Daily Alerts

2021ರ ಆರಂಭದ ಹೊತ್ತಿಗೆ ಭಾರತೀಯರ ಕೈಗೆ ಇ- ಪಾಸ್ ಪೋರ್ಟ್

|

ಎಲ್ಲ ನಾಗರಿಕರಿಗೆ ಇ- ಪಾಸ್ ಪೋರ್ಟ್ ವಿತರಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಸಿದ್ಧತೆ ಆರಂಭಿಸಿದೆ. ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಐಟಿ ಮೂಲಸೌಕರ್ಯ ಸ್ಥಾಪನೆಗೆ ಸಂಸ್ಥೆಯೊಂದನ್ನು ಆಯ್ಕೆ ಮಾಡುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. 2021ರ ಆರಂಭದ ಹೊತ್ತಿಗೆ ಭಾರತೀಯ ನಾಗರಿಕರು ಇ- ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.

ಸದ್ಯಕ್ಕೆ ಮುದ್ರಿತ ಪಾಸ್ ಪೋರ್ಟ್ ಗಳನ್ನೇ ವಿತರಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ಪ್ರಾಯೋಗಿಕವಾಗಿ 20 ಸಾವಿರ ಇ ಪಾಸ್ ಪೋರ್ಟ್ ವಿತರಿಸಲಾಗಿದೆ. ಇದರಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಇರುತ್ತದೆ. ಈ ನಡೆಯಿಂದಾಗಿ ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಮಾಡುವುದು ಕಷ್ಟವಾಗುತ್ತದೆ. ಇನ್ನು ಪ್ರಯಾಣಿಕರ ವಲಸಿಗ ನಿಯಮಾವಳಿಗಳು ಸಲೀಸಾಗಿ ಮುಗಿಯುತ್ತವೆ.

ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಗುಣಮಟ್ಟಕ್ಕೆ ತಕ್ಕಂತೆ ಇ- ಪಾಸ್ ಪೋರ್ಟ್ ಗಳು ಇರುತ್ತವೆ. ಒಂದು ಸಲ ಎಲ್ಲ ಸಿದ್ಧತೆ ಮುಗಿದು, ಪೂರ್ತಿಯಾಗಿ ತಯಾರಾದ ಮೇಲೆ ಭಾರತದ ಎಲ್ಲ 36 ಪಾಸ್ ಪೋರ್ಟ್ ಕಚೇರಿಯಲ್ಲೂ ಇ ಪಾಸ್ ಪೋರ್ಟ್ ವಿತರಣೆ ಮಾಡಲಾಗುತ್ತದೆ.

2021ರ ಆರಂಭದ ಹೊತ್ತಿಗೆ ಭಾರತೀಯರ ಕೈಗೆ ಇ- ಪಾಸ್ ಪೋರ್ಟ್

ಚಿಪ್ ಒಳಗೊಂಡಂಥ ಇ ಪಾಸ್ ಪೋರ್ಟ್ ನಲ್ಲಿ ಅತ್ಯಾಧುನಿಕ ಭದ್ರತಾ ಫೀಚರ್ ಗಳು ಇರುತ್ತವೆ. ಇಂಡಿಯನ್ ಸೆಕ್ಯೂರಿಟಿ ಪ್ರೆಸ್, ನಾಸಿಕ್ ಹಾಗೂ ನ್ಯಾಷನಲ್ ಇನ್ಫರ್ಮೆಟಿಕ್ಸ್ ಸೆಂಟರ್ ಗಳಲ್ಲಿ ಪಾಸ್ ಪೋರ್ಟ್ ಮುದ್ರಣಕ್ಕೆ ತಯಾರಿ ನಡೆಯುತ್ತಿದೆ. ಇನ್ನು ದೆಹಲಿ, ಚೆನ್ನೈ ನಲ್ಲಿ ಐ.ಟಿ. ವ್ಯವಸ್ಥೆಯನ್ನು ಮಾಡಿ, ಒಂದು ಗಂಟೆಗೆ 10ರಿಂದ 20 ಸಾವಿರ ಇ ಪಾಸ್ ಪೋರ್ಟ್ ವಿತರಣೆಗೆ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.

English summary

E- Passports To Indians From Early 2021

Central government planning to issue e passport to Indians from early 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X