For Quick Alerts
ALLOW NOTIFICATIONS  
For Daily Alerts

ಮನಿ ಲಾಂಡರಿಂಗ್‌ ಪ್ರಕರಣ: ಯುನಿಟೆಕ್‌ ಗ್ರೂಪ್‌ನ ಬೇನಾಮಿ ಸಂಸ್ಥೆಗಳ ಆಸ್ತಿ ಜಪ್ತಿ ಮಾಡಿದ ಇಡಿ

|

ಯುನಿಟೆಕ್‌ ಗ್ರೂಪ್‌ನ ಬೇನಾಮಿ ಸಂಸ್ಥೆಗಳಿಗೆ ಸೇರಿದ 18.14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದ ಆಸ್ತಿಗಳಲ್ಲಿ ಗುರುಗ್ರಾಮದಲ್ಲಿ (ಹರಿಯಾಣ) ಇರುವ ಮಲ್ಟಿಪ್ಲೆಕ್ಸ್‌ಗಳು, ಗುರುಗ್ರಾಮ ಹಾಗೂ ಲಕ್ನೋ (ಉತ್ತರ ಪ್ರದೇಶ) ದಲ್ಲಿ ಇರುವ ಆರು ವಾಣಿಜ್ಯ ಆಸ್ತಿಗಳು ಮತ್ತು ಎರಡು ಡಜನ್‌ ಬ್ಯಾಂಕ್‌ ಖಾತೆಗಳನ್ನು ಕೂಡಾ ಜಪ್ತಿ ಮಾಡಿದೆ. ಒಟ್ಟು ಇದರ ಮೌಲ್ಯ 18.14 ಕೋಟಿ ರೂಪಾಯಿ ಆಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯವು, "ಎನೋವಾ ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಫ್‌ಎನ್‌ಎಂ ಪ್ರಾಪರ್ಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ಆಸ್ತಿಯು ಇದೆ. ಈ ಸಂಸ್ಥೆಗಳು ಬೇನಾಮಿ ಸಂಸ್ಥೆಗಳು ಆಗಿದೆ. ಯುನಿಟೆಕ್ ಮುಖ್ಯಸ್ಥ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರರಿಗೆ ಸೇರಿದ ಬೇನಾಮಿ ಆಸ್ತಿ ಇದಾಗಿದೆ," ಎಂದು ತಿಳಿಸಿದೆ.

ಈ ಎರಡು ಬೇನಾಮಿ ಸಂಸ್ಥೆಗಳನ್ನು "ಯುನಿಟೆಕ್ ಮುಖ್ಯಸ್ಥ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರು ತಮ್ಮ ನಿಕಟವರ್ತಿಗಳ ಮೂಲಕ ಈ ಬೇನಾಮಿ ಆಸ್ತಿಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯುನಿಟೆಕ್‌ ಗುಂಪಿನಿಂದ ಆಸ್ತಿಯ ಆದಾಯದಿಂದ ಇದನ್ನು ಸೃಷ್ಟಿಸಲಾಗಿದೆ," ಎಂದು ಕೂಡಾ ಮಾಹಿತಿ ನೀಡಿದೆ.

 ಯುನಿಟೆಕ್‌ ಗ್ರೂಪ್‌ನ ಬೇನಾಮಿ ಸಂಸ್ಥೆಗಳ ಜಪ್ತಿ ಮಾಡಿದ ಇಡಿ

ಈ ಎಲ್ಲಾ ಬೇನಾಮಿ ಆಸ್ತಿಯನ್ನು ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಬೇನಾಮಿ ಆಸ್ತಿಯನ್ನು ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ತಮ್ಮ ಆಪ್ತರ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ.

ಬೇನಾಮಿ ಆಸ್ತಿ ಎಂದರೆ ಓರ್ವ ವ್ಯಕ್ತಿಯು ತನ್ನ ಆಸ್ತಿಯನ್ನು ಬೇರೆಯವರನ್ನು ಬೇನಾಮಿದಾರರಾಗಿಸುತ್ತಾರೆ. ಆ ಆಸ್ತಿಯನ್ನು ಸಂಪೂರ್ಣವಾಗಿ ಬೇನಾಮಿದಾರರಿಗೆ ವರ್ಗಾವಣೆ ಮಾಡುತ್ತಾರೆ. ಆದರೆ ವಾಸ್ತವವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಈ ಆಸ್ತಿ ಇದ್ದರೂ ಕೂಡಾ ಈ ಆಸ್ತಿಯನ್ನು ಆ ವ್ಯಕ್ತಿಯು ಅನುಭವಿಸುತ್ತಾರೆ.

ಈ ಮನಿ ಲಾಂಡರಿಂಗ್‌ ಪ್ರಕರಣವು ಯುನಿಟೆಕ್‌ ಗ್ರೂಪ್‌ ಹಾಗೂ ಅದರ ಪ್ರವರ್ತಕರ ವಿರುದ್ಧ ಮನೆ ಖರೀದಿದಾರರು ದಾಖಲಿಸಿದ ಹಲವಾರು ದೆಹಲಿ ಪೊಲೀಸ್‌ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸಿಬಿಐ ಎಫ್‌ಐಆರ್‌ ಅನ್ನು ಆಧರಿಸಿದೆ.

ಮಾಲೀಕರಾದ ಸಂಜಯ್ ಚಂದ್ರ ಮತ್ತು ಅಜಯ್ ಚಂದ್ರ ಸೈಪ್ರಸ್ ಮತ್ತು ಕೇಮನ್ ದ್ವೀಪಗಳಿಗೆ ಅಕ್ರಮವಾಗಿ 2,000 ಕೋಟಿ ರೂ.ಗಳ ವ್ಯವಹಾರ ನಡೆಸಿದ ಆರೋಪದ ಮೇಲೆ ಯುನಿಟೆಕ್‌ ಗ್ರೂಪ್‌ ಮತ್ತು ಅದರ ನಿರ್ವಹಕರ ವಿರುದ್ಧ ಇಡಿ ಈ ವರ್ಷದ ಆರಂಭದಲ್ಲಿ ಪಿಎಂಎಲ್‌ಎ ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣವನ್ನು ದಾಖಲು ಮಾಡಿದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 690.66 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಯುನಿಟೆಕ್‌ ಸ್ಥಾಪಕ ರಮೇಶ್‌ ಚಂದ್ರರನ್ನು ಕಳೆದ ತಿಂಗಳು ಬಂಧನ ಮಾಡಲಾಗಿದೆ. ಮನಿ ಲಾಂಡರಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಯುನಿಟೆಕ್ ಸ್ಥಾಪಕ ರಮೇಶ್ ಚಂದ್ರ ಮತ್ತು ಅವರ ಸೊಸೆ ಪ್ರೀತಿ ಚಂದ್ರ, ಸಂಜಯ್ ಚಂದ್ರ ಅವರ ಪತ್ನಿಯನ್ನ ಪಿಎಂಎಲ್‌ಎ 2002ರ ಅಡಿಯಲ್ಲಿ ಬಂಧನ ಮಾಡಿದೆ.

ಮನೆ ಖರೀದಿದಾರರಿಗೆ ಹಣ ವಂಚನೆ ಮಾಡಿದ ಆರೋಪವು ಈ ಚಂದ್ರ ಸಹೋದರರಿಗೆ ಇದೆ. ಈ ಸಹೋದರರು ತಿಹಾರಿ ಜೈಲಿನಲ್ಲೇ ಕುಳಿತು ತಮ್ಮ ವ್ಯಾಪಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇಡಿಯು 35 ಪ್ರದೇಶಗಳಲ್ಲಿ ದಾಳಿ ನಡೆಸಿದೆ.

English summary

ED attaches 'benami' entities in Unitech group PMLA case

ED attaches 'benami' entities in Unitech group PMLA case.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X