For Quick Alerts
ALLOW NOTIFICATIONS  
For Daily Alerts

ಇಲಾನ್ ಮಸ್ಕ್‌ನಿಂದ ಟ್ಟಿಟ್ಟರ್ ಖರೀದಿ ಪೂರ್ಣ; ಕೆಲಸ ಬಿಟ್ಟ ಪರಾಗ್, ವಿಜಯಾ ಗಡ್ಡೆ ಮತ್ತಿತರರು

|

ಸ್ಯಾನ್ ಫ್ರಾನ್ಸಿಸ್ಕೋ, ಅ. 28: ವಿಶ್ವದ ನಂಬರ್ ಒನ್ ಬಿಸಿನೆಸ್‌ಮ್ಯಾನ್ ಎನಿಸಿರುವ ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮೊನ್ನೆಯೇ ತಮ್ಮ ಟ್ವಿಟ್ಟರ್ ಬಯೋನಲ್ಲಿ ಕಂಪನಿಯ ಮುಖ್ಯಸ್ಥನೆಂದು ಬರೆದುಕೊಂಡಿದ್ದ ಇಲಾನ್ ಮಸ್ಕ್ ನಿನ್ನೆ ಗುರುವಾರ ಅಧಿಕೃತವಾಗಿ ಟ್ವಿಟ್ಟರ್ ಖರೀದಿ ಮುಗಿಸಿದ್ದಾರೆ. 44 ಬಿಲಿಯನ್ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಇದೀಗ ಮಸ್ಕ್ ಮಡಿಲಿಗೆ ಸೇರಿದೆ. 44 ಬಿಲಿಯನ್ ಡಾಲರ್ ಈಗಿನ ಭಾರತೀಯ ಕರೆನ್ಸಿಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಆಗುತ್ತದೆ.

ನಿರೀಕ್ಷೆಯಂತೆ ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುತ್ತಲೇ ಮೊದಲು ಮಾಡುತ್ತಿರುವ ಕೆಲಸವೆಂದರೆ ಪ್ರಮುಖ ಆಯಕಟ್ಟಿನಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವುದು. ಮೂಲಗಳ ಪ್ರಕಾರ ಅವರು ಟ್ವಿಟ್ಟರ್‌ನ ಸಿಇಒ ಸೇರಿದಂತೆ ಹಲವು ಉನ್ನತ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಪಿಂಕ್ ಸ್ಲಿಪ್ ಕೊಟ್ಟಿದ್ದಾರೆ,

ಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆ

ಸಿಇಒ ಹೊರಕ್ಕೆ

ಸಿಇಒ ಹೊರಕ್ಕೆ

ಟ್ವಿಟ್ಟರ್‌ನಲ್ಲಿ ಭಾರತೀಯ ಮೂಲದವರು ಆಯಕಟ್ಟಿನ ಜಾಗದಲ್ಲಿದ್ದರು. ಪರಾಗ್ ಅಗರ್ವಾಲ್ ಸಿಇಒ ಆಗಿದ್ದರೆ, ಆಂಧ್ರ ಮೂಲದ ವಿಜಯಾ ಗದ್ದೆ ಟ್ವಿಟ್ಟರ್‌ನ ಕಾನೂನು ಮತ್ತು ನೀತಿ ವಿಭಾಗದ ಮುಖ್ಯಸ್ಥೆಯಾಗಿದ್ದರು. ಇವರಿಬ್ಬರ ಸೇರಿ ಹಲವು ಪ್ರಮುಖರು ಕಂಪನಿ ತೊರೆದಿದ್ದಾರೆ. ಒಂದು ವರದಿ ಪ್ರಕಾರ ಟ್ವಿಟ್ಟರ್ ಡೀಲ್ ಪೂರ್ಣಗೊಂಡ ಸಮಯದಲ್ಲಿ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್ ಮುಖ್ಯ ಕಚೇರಿಯಲ್ಲಿ ಸಿಇಒ ಪರಾಗ್ ಅಗರ್ವಾಲ್ ಮತ್ತು ಸಿಎಫ್‌ಒ ನೆದ್ ಸೇಗಲ್ ಇಬ್ಬರೂ ಇದ್ದರು. ಆ ಸಂದರ್ಭದಲ್ಲಿ ಇಬ್ಬರನ್ನೂ ಕೂಡ ಹೊರಗೆ ಕಳುಹಿಸಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಮೆಟಾವರ್ಸ್‌ಗೆ ಎಂಟ್ರಿ ನೀಡಿದ ಮುಕೇಶ್ ಅಂಬಾನಿ ಸಂಸ್ಥೆಮೆಟಾವರ್ಸ್‌ಗೆ ಎಂಟ್ರಿ ನೀಡಿದ ಮುಕೇಶ್ ಅಂಬಾನಿ ಸಂಸ್ಥೆ

ಪರಾಗ್, ಮಸ್ಕ್ ಜಟಾಪಟಿ

ಪರಾಗ್, ಮಸ್ಕ್ ಜಟಾಪಟಿ

ರಾಜಸ್ಥಾನ ಸಂಜಾತರಾದ ಪರಾಗ್ ಅಗರ್ವಾಲ್ ಮೈಕ್ರೋಸಾಫ್ಟ್, ಯಾಹೂನಲ್ಲಿ ಕೆಲಸ ಮಾಡಿ 2011ರಲ್ಲಿ ಟ್ವಿಟ್ಟರ್ ಸೇರಿದದರು. 2017ರಲ್ಲಿ ಸಿಟಿಒ ಆಗಿ ನೇಮಕವಾಗಿದ್ದರು. 2021 ನವೆಂಬರ್‌ನಲ್ಲಿ ಸಿಇಒ ಆಗಿ ಜವಾಬ್ದಾರಿ ಪಡೆದರು. ಆದರೆ, ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಗೆ ಪ್ರಯತ್ನ ಮಾಡಿದಾಗಿನಿಂದಲೂ ಪರಾಗ್ ಅಗರ್ವಾಲ್ ಮತ್ತು ಮಸ್ಕ್ ಮಧ್ಯೆ ಶೀತಲ ಸಮರದ ರೀತಿಯ ವರಸೆಗಳು ಕಂಡಿದ್ದವು.

ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಗೆ ಆಫರ್ ಮುಂದಿಟ್ಟಾಗಲೇ ಪರಾಗ್ ಅಗರ್ವಾಲ್ ತಾನು ಕಂಪನಿಯಲ್ಲಿ ಇರುವುದಿಲ್ಲ, ಕಂಪನಿಯೂ ಇದೇ ರೀತಿ ಇರುವುದಿಲ್ಲ ಎಂದು ಕಂಪನಿಯ ಉದ್ಯೋಗಿಗಳ ಮೀಟಿಂಗ್‌ವೊಂದರಲ್ಲಿ ಹೇಳಿಕೊಂಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸುವುದು ಅಗರ್ವಾಲ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ, ತಮ್ಮ ಹಣಬಲ ಮತ್ತು ಚಾಣಾಕ್ಷತೆಯಿಂದ ಮಸ್ಕ್ ವಿಶ್ವದ ಪ್ರಮುಖ ಸೋಷಿಯಲ್ ಮೀಡಿಯಾ ತಾಣವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಮಸ್ಕ್ ಅಸಮಾಧಾನಕ್ಕೇನು ಕಾರಣ?

ಮಸ್ಕ್ ಅಸಮಾಧಾನಕ್ಕೇನು ಕಾರಣ?

ಟ್ವಿಟ್ಟರ್‌ನ ಕೆಲ ತಾಂತ್ರಿಕ ಅಂಶಗಳ ಬಗ್ಗೆ ತಾನು ಕೇಳಿದ ಮಾಹಿತಿಗೆ ಸರಿಯಾದ ಉತ್ತರ ಸಿಕ್ಕಿಲ್ಲದಿದ್ದುದು ಇಲಾನ್ ಮಸ್ಕ್‌ಗೆ ಅಸಮಾಧಾನ ತಂದಿತ್ತು. ಅದಕ್ಕಿಂತ ಹೆಚ್ಚಾಗಿ ಡೊನಾಲ್ಡ್ ಟ್ರಂಪ್ ಮೊದಲಾದವರ ಖಾತೆಗಳನ್ನು ಬ್ಲಾಕ್ ಮಾಡಿದ ಕ್ರಮದ ಬಗ್ಗೆಯೂ ಮಸ್ಕ್ ಅಸಮಾಧಾನಗೊಂಡಿದ್ದರೆನ್ನಲಾಗಿದೆ. ಟ್ವಿಟ್ಟರ್‌ನ ನೀತಿಯೇ ತಪ್ಪಾಗಿದೆ. ಅಭಿಪ್ರಾಯ ಸ್ವಾತಂತ್ರ್ಯವನ್ನು ಟ್ವಿಟ್ಟರ್ ಹತ್ತಿಕ್ಕುವ ಕೆಲಸ ಮಾಡಿದೆ ಎಂದೂ ಮಸ್ಕ್ ನೇರವಾಗಿ ಆರೋಪಿಸಿದ್ದರು.

ಹೀಗಾಗಿ, ಅವರು ಸಿಇಒ ಸೇರಿದಂತೆ ಹಲವರನ್ನು ಕೆಲಸದಿಂದ ಕಿತ್ತುಹಾಕುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡಿತ್ತು. ಟ್ವಿಟ್ಟರ್‌ನ ಶೇ. 75ರಷ್ಟು ಉದ್ಯೋಗಿಗಳನ್ನೂ ಕೆಲಸದಿಂದ ಬಿಡಿಸಲಾಗುತ್ತದೆ ಎಂಬಂತಹ ಸುದ್ದಿ ಮೊನ್ನೆಯಿಂದ ಓಡಾಡುತ್ತಿದೆ.

 

ಪರಾಗ್‌ಗೆ ಕೋಟಿಕೋಟಿ ಹಣ

ಪರಾಗ್‌ಗೆ ಕೋಟಿಕೋಟಿ ಹಣ

ಪರಾಗ್ ಅಗರ್ವಾಲ್ ಕೆಲಸ ಕಳೆದುಕೊಂಡರೂ ಭಾರೀ ಪ್ರಮಾಣದ ಹಣವನ್ನು ಚೀಲಕ್ಕೆ ತುಂಬಿಸಿಕೊಳ್ಳಲಿದ್ದಾರೆ. ಅವರ ನೇಮಕಾತಿ ವೇಳೆ ನೀಡಲಾಗಿದ್ದ ಈಕ್ವಿಟಿ ಷೇರು ಮೊದಲಾದವುಗಳಿಂದ ಪರಾಗ್ ಅಗರ್ವಾಲ್‌ಗೆ 42 ಮಿಲಿಯನ್ ಡಾಲರ್ (ಸುಮಾರು 346 ಕೋಟಿ ರೂಪಾಯಿ) ಹಣ ಸೇರಬಹುದು ಎಂದು ಅಂದಾಜು ಮಾಡಲಾಗಿದೆ.

English summary

Elon Musk Completes Twitter Acquisition, Top Executives Departs

World's number one businessman Elon Musk on Thursday said to have completed the process of acquiring Twitter. Reports say CEO Parag Agarwal and other top executives have departed the company following the arrival of Musk.
Story first published: Friday, October 28, 2022, 8:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X