For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಿಕ್ ಕಾರುಗಳಿಗೆ 1.50 ಲಕ್ಷ ತನಕ ಪ್ರೋತ್ಸಾಹಧನ: ಕೇಜ್ರಿವಾಲ್ ಘೋಷಣೆ

|

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಸ್ಟ್ 7ನೇ ತಾರೀಕಿನ ಶುಕ್ರವಾರ ಹೊಸದಾಗಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹೊಸ ನೀತಿ ಅಡಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರು ಖರೀದಿಸುವವರಿಗೆ ಸರ್ಕಾರವು ಹಣಕಾಸು ನೆರವು ನೀಡಬೇಕಾಗುತ್ತದೆ. ಅದರ ಜತೆಗೆ "ಸ್ಕ್ರಾಪಿಂಗ್ ಪ್ರೋತ್ಸಾಹಧನ"ವನ್ನು ಕೊಡಬೇಕಾಗುತ್ತದೆ. ಈ ಹೊಸ ನೀತಿ ಜಾರಿಯಿಂದ ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಹೊಸ ಎಲೆಕ್ಟ್ರಿಕ್ ವಾಹನ ನೋಂದಣಿಯನ್ನು ಸರ್ಕಾರ ನಿರೀಕ್ಷಿಸುತ್ತದೆ ಎಂಬುದನ್ನು ಕೇಜ್ರಿವಾಲ್ ಹೇಳಿದ್ದಾರೆ.

ಎಲೆಕ್ಟ್ರಿಕ್ ದ್ವಿಚಕ್ರ, ಆಟೋ ಹಾಗೂ ಇ ರಿಕ್ಷಾಗಳಿಗೆ 30,000 ರುಪಾಯಿ ತನಕ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ 1.5 ಲಕ್ಷದ ತನಕ ಪ್ರೋತ್ಸಾಹಧನ ದೊರೆಯುತ್ತದೆ. ದೆಹಲಿ ಸರ್ಕಾರದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಒಂದು ವಿಭಾಗವನ್ನೇ ತೆರೆಯುತ್ತದೆ ಮತ್ತು ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ನಿಗಾ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಕಾರುಗಳಿಗೆ 1.50 ಲಕ್ಷ ತನಕ ಪ್ರೋತ್ಸಾಹಧನ: ಕೇಜ್ರಿವಾಲ್

 

ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಇಂದು ಅಧಿಸೂಚನೆ ಹೊರಡಿಸಲಾಗಿದೆ. ಈ ನೀತಿಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲು ರಾಜ್ಯ ಎಲೆಕ್ಟ್ರಿಕ್ ವಾಹನ ಮಂಡಳಿ ಸ್ಥಾಪಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇನ್ನು ಇದನ್ನು "ಪ್ರಗತಿಪರ ನೀತಿ" ಎಂದು ಕರೆದಿರುವ ಕೇಜ್ರಿವಾಲ್, ಮುಂದಿನ ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ 100 ಚಾರ್ಜಿಂಗ್ ಸ್ಟೇಷನ್ ಅನ್ನು ನಗರದಲ್ಲಿ ಶುರು ಮಾಡಲಾಗುವುದು ಎಂದಿದ್ದಾರೆ.

ರಾಜ್ಯವೊಂದಕ್ಕೆ ಹೊರೆಯಾಗದೆ ಒಂದು ನೀತಿಯನ್ನು ಹೇಗೆ ತರಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆ. ದೆಹಲಿಯ EV ನೀತಿ ಇತರ ರಾಜ್ಯಗಳಿಗೆ ನಿದರ್ಶನ ಎಂದು ಸೊಸೈಟಿ ಆಫ್ ಮ್ಯಾನುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (SMEV) ಡೈರೆಕ್ಟರ್ ಜನರಲ್ ಸೊಹಿಂದರ್ ಗಿಲ್ ಹೇಳಿದ್ದಾರೆ.

ಉತ್ತಮ ಆಲೋಚನೆ, ಚಿಂತನೆ ಒಳಗೊಂಡ ಎಲೆಕ್ಟ್ರಿಕ್ ವಾಹನ ನೀತಿಯನ್ನು ಬಹಳ ಶೀಘ್ರವಾಗಿ ಅಧಿಸೂಚನೆ ಹೊರಡಿಸಿದ ದೆಹಲಿ ಮತ್ತು ತೆಲಂಗಾಣ ಸರ್ಕಾರಕ್ಕೆ ಮಹೀಂದ್ರಾ ಎಲೆಕ್ಟ್ರಿಕ್ ಎಂ.ಡಿ. ಹಾಗೂ ಸಿಇಒ ಮಹೇಶ್ ಬಾಬು ಧನ್ಯವಾದ ಹೇಳಿದ್ದಾರೆ.

English summary

EV New Policy Enrolled In Delhi: Upto 1.5 Lakh Incentive For EV Car

New electric vehicle policy announced by Delhi CM Arvind Kejriwal on Friday. Here is the details.
Company Search
COVID-19