For Quick Alerts
ALLOW NOTIFICATIONS  
For Daily Alerts

ಏಪ್ರಿಲ್‌ನಲ್ಲಿ ಭಾರತದ ರಫ್ತು ಪ್ರಮಾಣ ಮೂರು ಪಟ್ಟು ಏರಿಕೆ: $ 30.21 ಬಿಲಿಯನ್

|

ಕೋವಿಡ್-19 ಸಾಂಕ್ರಾಮಿಕದ ನಡುವೆಯು ಏಪ್ರಿಲ್‌ನಲ್ಲಿ ಭಾರತದ ರಫ್ತು ಪ್ರಮಾಣ ಮೂರು ಪಟ್ಟು ಏರಿಕೆಗೊಂಡಿದೆ. ವಾಣಿಜ್ಯ ಸಚಿವಾಲಯದ ಪ್ರಾಥಮಿಕ ಮಾಹಿತಿಯ ಪ್ರಕಾರ ಆಭರಣಗಳು, ಪೆಟ್ರೋಲಿಯಂ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು ಸೇರಿದಂತೆ ಪ್ರಮುಖ ಉತ್ಪನ್ನಗಳ ಬೆಳವಣಿಗೆಯಿಂದಾಗಿ ರಫ್ತು ಪ್ರಮಾಣ 30.21 ಬಿಲಿಯನ್ ಡಾಲರ್‌ಗೆ ತಲುಪಿದೆ.

 

18 ದಿನಗಳ ಬಳಿಕ ಪೆಟ್ರೋಲ್‌, ಡೀಸೆಲ್ ದರ ಏರಿಕೆ : ಯಾವ ನಗರದಲ್ಲಿ ಎಷ್ಟಿದೆ?

ಅದೇ ಕಳೆದ ವರ್ಷ ಏಪ್ರಿಲ್ 2020 ರಲ್ಲಿ ದೇಶದ ಸರಕು ರಫ್ತು 10.17 ಬಿಲಿಯನ್ ಡಾಲರ್ ಆಗಿತ್ತು. ಆ ತಿಂಗಳಲ್ಲಿ ವ್ಯಾಪಾರ ಕೊರತೆ 6.92 ಬಿಲಿಯನ್ ಡಾಲರ್ ಆಗಿತ್ತು. ರಫ್ತು ಜೊತೆಗೆ ಆಮದು ಕೂಡ ಮೂರು ಪಟ್ಟು ಏರಿಕೆಯಾಗಿ 45.45 ಶತಕೋಟಿಗೆ ತಲುಪಿದೆ. ಆದರೆ ಏಪ್ರಿಲ್ 2020ರಲ್ಲಿ 17.09 ಬಿಲಿಯನ್ ಡಾಲರ್‌ನಷ್ಟಿತ್ತು.

ಏಪ್ರಿಲ್‌ನಲ್ಲಿ ಭಾರತದ ರಫ್ತು ಪ್ರಮಾಣ ಮೂರು ಪಟ್ಟು ಏರಿಕೆ

ಏಪ್ರಿಲ್ 2021 ರಲ್ಲಿ ಭಾರತದ ಸರಕು ರಫ್ತು ಪ್ರಮಾಣ 30.21 ಬಿಲಿಯನ್ ಡಾಲರ್ ಆಗಿದ್ದು, 2020 ರ ಏಪ್ರಿಲ್‌ನಲ್ಲಿ 10.17 ಬಿಲಿಯನ್‌ಗೆ ಹೋಲಿಸಿದರೆ ಶೇಕಡಾ 197.03 ರಷ್ಟು ಹೆಚ್ಚಳವಾಗಿದೆ ಮತ್ತು 2019 ರ ಏಪ್ರಿಲ್‌ನಲ್ಲಿ 26.04 ಬಿಲಿಯನ್ ಡಾಲರ್‌ಗಿಂತ 16.03 ರಷ್ಟು ಹೆಚ್ಚಾಗಿದೆ" ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಕಾರಣ 2020 ರ ಏಪ್ರಿಲ್‌ನಲ್ಲಿ ರಫ್ತು ದಾಖಲೆಯ ಶೇಕಡಾ 60.28 ರಷ್ಟು ಕುಗ್ಗಿತು. ಈ ವರ್ಷದ ಮಾರ್ಚ್‌ನಲ್ಲಿ ರಫ್ತು ಶೇ. 60.29 ರಷ್ಟು ಏರಿಕೆಯಾಗಿ 34.45 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

English summary

India's exports jump to $30.21 billion in April

India’s exports in April jumped nearly three-folds to $30.21 billion on account of a healthy growth in key sectors
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X