ಕೆಲವೇ ಗಂಟೆಗಳಲ್ಲಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಕಳೆದುಕೊಂಡಿದ್ದು ಎಷ್ಟು ಗೊತ್ತಾ?

ಜಾಗತಿಕ ಮಟ್ಟದಲ್ಲಿ ಸೋಮವಾರ (ಅ. 04) ರಾತ್ರಿ ಫೇಸ್‌ಬುಕ್ ಮತ್ತು ವಾಟ್ಸಾಪ್‌ ತಾಂತ್ರಿಕ ದೋಷದಿಂದಾಗಿ ಫೇಸ್‌ಬುಕ್ ಸಹ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಭಾರೀ ನಷ್ಟ ಅನುಭವಿಸಿದ್ದಾರೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ ಜುಕರ್‌ಬರ್ಗ್‌ ಬರೋಬ್ಬರಿ $7 ಬಿಲಿಯನ್ ಸಂಪತ್ತು ನಷ್ಟ ಅನುಭವಿಸಿದ್ದಾರೆ.

ಫೇಸ್‌ಬುಕ್, ವಾಟ್ಸಾಪ್ ನಿಲುಗಡೆಯಿಂದಾಗಿ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ. ಈ ಮೂಲಕ ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಕುಸಿತ ಅನುಭವಿಸಿದ್ದಾರೆ.

ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಷೇರುಗಳು ಸೋಮವಾರ 4.9% ನಷ್ಟು ಕುಸಿದಿದೆ, ಇದು ಸೆಪ್ಟೆಂಬರ್ ಮಧ್ಯಭಾಗದಿಂದ ಸುಮಾರು 15% ನಷ್ಟು ಕುಸಿತವನ್ನು ಕಂಡಿದೆ.

ಕೆಲವೇ ಗಂಟೆಗಳಲ್ಲಿ 7 ಬಿಲಿಯನ್ ಡಾಲರ್ ಕಳೆದುಕೊಂಡ ಜುಕರ್‌ಬರ್ಗ್‌

ಸೋಮವಾರದ ಸ್ಟಾಕ್ ಸ್ಲೈಡ್ ಜುಕರ್‌ಬರ್ಗ್‌ನ ಮೌಲ್ಯವು 121.6 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಈ ಮೂಲಕ ಅವರು ಬಿಲ್ ಗೇಟ್ಸ್‌ಗಿಂತ ಕೆಳಗೆ ಇಳಿಕೆಗೊಂಡಿದ್ದು, ಅವರನ್ನು ನಂ. 5ಗಿಂತ ಕೆಳಗೆ ತಳ್ಳಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅವರು ವಾರಗಳ ಅವಧಿಯಲ್ಲಿ ಸುಮಾರು $ 140 ಶತಕೋಟಿಯಿಂದ ಇಳಿದಿದ್ದಾರೆ.

ಫೇಸ್‌ಬುಕ್, ವಾಟ್ಸಾಪ್ ಸಮಸ್ಯೆ ಏನು?
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರು ತಮ್ಮ ವಾಲ್‌ನಲ್ಲಿ ಹೊಸ ಪೋಸ್ಟ್‌ ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ವಾಟ್ಸಾಪ್ ಬಳಕೆದಾರರಿಗೆ ಯಾವುದೇ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ.

ಈ ಕುರಿತು ಫೇಸ್‌ಬುಕ್ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದೆ. ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಶೀಘ್ರವೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದೆ. ವಾಟ್ಸಪ್‌ ಕೂಡ ಇದೇ ರೀತಿಯಾಗಿ ಟ್ವೀಟ್‌ ಮಾಡಿದೆ.

ಕಂಪನಿಯು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳ ಹಿಂದಿನ ಕಾರಣಗಳನ್ನು ರಹಸ್ಯವಾಗಿಡುತ್ತದೆ. ಅಲ್ಲಿ ಸಮಸ್ಯೆಯನ್ನು ಸರಿಪಡಿಸಿದ ನಂತರವೂ ವಿವರಿಸಲು ಮುಂದೆ ಬರುವುದಿಲ್ಲ. ಈ ಹಿಂದೆ 2019ರಲ್ಲಿ ಇದೇ ರೀತಿಯಲ್ಲಿ ಸಮಸ್ಯೆ ಎದುರಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+