ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಹೊಸ ಹೆಜ್ಜೆ ಇರಿಸಿದ್ದು, ಫೇಸ್‌ಬುಕ್ ಪೇ ಉದ್ಘಾಟನೆ ಮಾಡಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮಾದರಿಯಲ್ಲೇ ಫೇಸ್‌ಬುಕ್ ಪೇ ಕಾರ್ಯ ನಿರ್ವಹಿಸಲಿದ್ದು, ಬಿಲ್ ಪಾವತಿ, ರಿಚಾರ್ಜ್ ಮುಂತಾದ ಸೌಲಭ್ಯವನ್ನು. ತನ್ನೆಲ್ಲಾ ಬಳಕೆದಾರರಿಗೆ ಒದಗಿಸಲಿದೆ.
ಫೇಸ್‌ಬುಕ್ ಪೇ ಹೊಸ ಹಣ ಪಾವತಿ ಆ್ಯಪ್ ಆಗಿ ಹೊರಹೊಮ್ಮುವುದು ಅಷ್ಟೇ ಅಲ್ಲದೆ, ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿರುವ ವಾಟ್ಸ್ಅಪ್ ಹಾಗೂ ಇನ್‌ಸ್ಟಾಗ್ರಾಮ್ ಮೂಲಕವೇ ಹಣ ಪಾವತಿ ಸೇವೆಗಳಿಗೆ ಅವಕಾಶ ಒದಗಿಸಿದೆ.

ಈ ಅಪ್ಲಿಕೇಶನ್‌ನಲ್ಲಿ ಹಣ ಪಾವತಿಯನ್ನು ಪಿನ್ ಆಧಾರಿತ ಆಯ್ಕೆ ಅಥವಾ ಒಬ್ಬರ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಸ್ಕ್ಯಾನ್ ಮಾಡುವ ಮೂಲಕವೂ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಮೊದಲಿಗೆ ಈ ವಾರದಲ್ಲಿ ಅಮೆರಿಕಾದಲ್ಲಿ ಈ ಸೇವೆ ಆರಂಭಗೊಳ್ಳಲಿದ್ದು, ಬಳಿಕ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಫೇಸ್‌ಬುಕ್ ಕಂಪನಿ ತಿಳಿಸಿದೆ.
ಇದರ ಜೊತೆಗೆ ಕಂಪನಿಯು ಬಳಕೆದಾರರ ಅಂಕಿ-ಅಂಶಗಳು, ಹಣ ಪಾವತಿ ವಿಧಾನ, ಬಿಲ್ಲಿಂಗ್ ದಿನಾಂಕ, ಮೊತ್ತ ಮತ್ತು ಸಂಪರ್ಕ ವಿವರಗಳನ್ನು ಸಂಗ್ರಹಿಸುತ್ತಿದೆ. ಇದನ್ನು ಬಳಕೆದಾರರಿಗೆ ಉದ್ದೇಶಿತ ಜಾಹೀರಾತುಗಳನ್ನು ತೋರಿಸಲು ಬಳಸಾಗುವುದು ಎಂದು ಸಾಮಾಜಿಕ ಜಾಲತಾಣ ಸಾಧನ ಫೇಸ್‌ಬುಕ್ ತಿಳಿಸಿದೆ.


Click it and Unblock the Notifications