For Quick Alerts
ALLOW NOTIFICATIONS  
For Daily Alerts

2020ರಲ್ಲಿ ಭಾರತದ ಕೃಷಿ ರಫ್ತು ಶೇಕಡಾ 9.8ರಷ್ಟು ಏರಿಕೆ

|

ನವದೆಹಲಿ, ಫೆಬ್ರವರಿ 05: ಕಳೆದ ವರ್ಷಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತದ ಒಟ್ಟು ಸರಕ್ತು ರಫ್ತು ಪ್ರಮಾಣ ಶೇಕಡಾ 15.5ರಷ್ಟು ಏರಿಕೆ ಕಂಡಿದ್ದು, ಕೃಷಿ ರಫ್ತಿನಲ್ಲಿ ಶೇಕಡಾ 9.8ರಷ್ಟು ಹೆಚ್ಚಳಗೊಂಡಿದೆ.

 

ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶದ ಎಲ್ಲಾ ಸರಕುಗಳ ರಫ್ತು 201.30 ಶತಕೋಟಿ ಎಂದು ತೋರಿಸಿದೆ. ಆದರೆ 2019ರ ಏಪ್ರಿಲ್-ಡಿಸೆಂಬರ್ ಲ್ಲಿ 238.27 ಬಿಲಿಯನ್ ನಿಂದ ಕಡಿಮೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಈ ಅವಧಿಯಲ್ಲಿ ಕೃಷಿ ಸರಕುಗಳ ರಫ್ತು 26.34 ಬಿಲಿಯನ್‌ನಿಂದ 28.91 ಬಿಲಿಯನ್‌ಗೆ ಏರಿಕೆಯಾಗಿದೆ.

ಕೃಷಿ ವ್ಯಾಪಾರವು 2019 ರ ಏಪ್ರಿಲ್-ಡಿಸೆಂಬರ್‌ನಲ್ಲಿ 9.57 ಬಿಲಿಯನ್ ಡಾಲರ್‌ನಿಂದ 2020 ಏಪ್ರಿಲ್-ಡಿಸೆಂಬರ್‌ನಲ್ಲಿ 13.07 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

 2020ರಲ್ಲಿ ಭಾರತದ ಕೃಷಿ ರಫ್ತು ಶೇಕಡಾ 9.8ರಷ್ಟು ಏರಿಕೆ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಇತ್ತೀಚಿನ ಆಹಾರ ಬೆಲೆ ಸೂಚ್ಯಂಕವನ್ನು (ಎಫ್‌ಪಿಐ) ಜನವರಿಯಲ್ಲಿ ಬಿಡುಗಡೆ ಮಾಡಿದೆ. ಮೇ 2020 ರಿಂದ ಜನವರಿ 2021 ರ ನಡುವೆ, ಎಫ್‌ಪಿಐ 48 ತಿಂಗಳ ಕನಿಷ್ಠ ಮಟ್ಟದಿಂದ 78 ತಿಂಗಳುಗಳ ಗರಿಷ್ಠ ಮಟ್ಟಕ್ಕೆ ಏರಿದೆ.

ಹೆಚ್ಚಿನ ದೇಶಗಳು ತಮ್ಮ ಆರ್ಥಿಕತೆ ಲಾಕ್‌ಡೌನ್ ಮುಕ್ತಗೊಳಿಸಿದ ಬಳಿಕ ಮೇ ನಂತರ ಬೇಡಿಕೆ ಮತ್ತು ಪೂರೈಕೆ ಹೆಚ್ಚಾಗತೊಡಗಿತು. ಇದರೊಂದಿಗೆ, ಅಂತರರಾಷ್ಟ್ರೀಯ ಬೆಲೆಗಳು ಏರಿಕೆಯಾಗಲು ಪ್ರಾರಂಭಿಸಿದವು. ಭಾರತದಿಂದ ಅನೇಕ ಕೃಷಿ ಉತ್ಪನ್ನಗಳ ರಫ್ತು ಸ್ಪರ್ಧಾತ್ಮಕವಾಗಿದೆ. ಬಾಸ್ಮತಿ ಅಲ್ಲದ ಅಕ್ಕಿ, ಸಕ್ಕರೆ, ಎಣ್ಣೆಬೀಜ, ಮಾಂಸ, ಹತ್ತಿ ಮತ್ತು ಗೋಧಿ ಮತ್ತು ಇತರ ಧಾನ್ಯಗಳು (ಮುಖ್ಯವಾಗಿ ಮೆಕ್ಕೆಜೋಳ) ಸೇರಿದಂತೆ ಹೆಚ್ಚು ಉತ್ಪನ್ನಗಳ ರಫ್ತು ಹೆಚ್ಚಾಗಿದೆ.

English summary

Farm Export Defy Overall Trend In 2020: 9.8% Growth

India’s overall merchandise exports have fallen 15.5% year-on-year during April-December. But the same period has seen its farm exports register 9.8% growth
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X