For Quick Alerts
ALLOW NOTIFICATIONS  
For Daily Alerts

Drone Subsidy : ರೈತರೇ ಗಮನಿಸಿ; ಸರ್ಕಾರದಿಂದ ಸಿಗುತ್ತೆ 5 ಲಕ್ಷ ರೂ ಡ್ರೋನ್ ಸಬ್ಸಿಡಿ

|

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವು ವಿಧದ ಯೋಜನೆಗಳನ್ನು ರೂಪಿಸಿವೆ. ಅನೇಕ ಸ್ಕೀಮ್‌ಗಳನ್ನು ಬಹಳಷ್ಟು ರೈತರು ಉಪಯೋಗಿಸಿಕೊಳ್ಳುತ್ತಿರುವುದು ಹೌದು. ಪಿಎಂ ಕಿಸಾನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಾವಯವ ಕೃಷಿ ಯೋಜನೆ, ಕೃಷಿ ಭಾಗ್ಯ, ಸಣ್ಣ ನೀರಾವರಿ, ಹನಿ ನೀರಾವರಿ, ಬೆಳೆ ವಿಮೆ, ಕೃಷಿ ಹೊಂಡ ಇತ್ಯಾದಿ ನಾನಾ ಯೋಜನೆಗಳು ರೈತರಿಗೆಂದು ಸರ್ಕಾರಗಳು ರೂಪಿಸಿವೆ.

ಇವೆಲ್ಲವೂ ರೈತರ ಕೃಷಿಗಾರಿಕೆಯ ಕಷ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ ಎಂಬುದು ಹೌದು. ಬೆಳೆ ಬೆಳೆಗೆ ಸರಿಯಾದ ಮಾರುಕಟ್ಟೆ ಮತ್ತು ದರ ಸಿಗುವ ವಿಚಾರದಲ್ಲಿ ಮತ್ತು ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದಾಗ ಸಿಗುವ ಪರಿಹಾರ ವಿಚಾರದಲ್ಲಿ ಅನಿಶ್ಚಿತತೆ ಹೊರತುಪಡಿಸಿದರೆ ರೈತ ತನ್ನ ನೆಲದ ಕಾಯಕದಲ್ಲಿ ನೆಮ್ಮದಿಯಿಂದ ತೊಡಗಿಸಿಕೊಳ್ಳಲು ಅಡ್ಡಿ ಇಲ್ಲ.

ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?ಸೇಲ್‌ಗಿದೆ ಇಡೀ ಊರು; ಬೆಲೆ ಕೇವಲ 2.1 ಕೋಟಿ; ಅದೇನು ದೆವ್ವದ ಗ್ರಾಮವಾ?

ಡ್ರೋನ್‌ಗೆ ಸಬ್ಸಿಡಿ

ಡ್ರೋನ್‌ಗೆ ಸಬ್ಸಿಡಿ

ಇದೇ ವೇಳೆ, ಸರ್ಕಾರ ಕೃಷಿಗಾರಿಕೆಯಲ್ಲಿ ಡ್ರೋನ್ ಬಳಕೆಗೆ ಉತ್ತೇಜನ ಕೊಡಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಭಾರೀ ಸಬ್ಸಿಡಿ ಒದಗಿಸುವ ಯೋಜನೆಯನ್ನು ಹೊರತಂದಿದೆ. ಕೃಷಿಯಲ್ಲಿ ಬಳಸಲು ಡ್ರೋನ್ ಕೊಳ್ಳುವ ರೈತರಿಗೆ ಸರ್ಕಾರ ಭಾರೀ ಸಬ್ಸಿಡಿ ನೀಡುತ್ತದೆ. ಡ್ರೋನ್ ಬೆಲೆಯ ಶೇ. 50ರವರೆಗಿನ ಹಣ ಅಥವಾ ಗರಿಷ್ಠ 5 ಲಕ್ಷ ರೂವರೆಗಿನ ಹಣವನ್ನು ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ.

ಕೃಷಿಯಲ್ಲಿ ಡ್ರೋನ್ ಬಳಕೆ ಯಾಕೆ?

ಕೃಷಿಯಲ್ಲಿ ಡ್ರೋನ್ ಬಳಕೆ ಯಾಕೆ?

ಡ್ರೋನ್‌ಗಳು ಒಂದು ರೀತಿಯಲ್ಲಿ ಮಿನಿ ಕಾಪ್ಟರ್‌ಗಳಿದ್ದಂತೆ. ರಿಮೋಟ್ ಕಂಟ್ರೋಲ್ ಮೂಲಕ ಡ್ರೋನ್‌ಗಳನ್ನು ಮೇಲೆ ಹಾರಾಡಿಸಬಹುದು. ಮಿಲಿಟರಿ, ಕೈಗಾರಿಕಾ ಚಟುವಟಿಕೆಗಳಿಗೆ ಇದು ಸಾಮಾನ್ಯವಾಗಿ ಬಳಕೆಯಾಗುತ್ತಿತ್ತು. ಈಗ ಕೃಷಿಯಲ್ಲಿ ಇದರ ಉಪಯುಕ್ತತೆ ಹೆಚ್ಚಿರುವುದು ಋಜುವಾತಾಗಿದೆ. ಕೃಷಿ ಭೂಮಿಯಲ್ಲಿ ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬಹುದು. ಬೆಳೆಗೆ ಔಷಧ, ರಾಸಾಯನಿಕ ಇತ್ಯಾದಿಯನ್ನು ಸಿಂಪಡಿಸಲು ಡ್ರೋನ್‌ಗಳನ್ನು ಬಳಸಬಹುದು. ಇದರಿಂದ ಬಹಳಷ್ಟು ಮಾನವ ಸಂಪನ್ಮೂಲವನ್ನು ಉಳಿಸಬಹುದು.

ಬೆಳೆ ಹಾನಿ ಪರಿಶೀಲನೆ, ದೊಡ್ಡ ಪ್ರಮಾಣದ ಪಶುಗಳ ನಿರ್ವಹಣೆಗೆ ಇದು ಸಹಕಾರಿ ಆಗುತ್ತದೆ. ಕೃಷಿ ಇಲಾಖೆಗಳು ರೈತರ ಜಮೀನಿನ ಮಣ್ಣಿನ ಪರಿಶೀಲನೆ, ಬೆಳೆ ಅಂದಾಜು ಇತ್ಯಾದಿ ಕಾರ್ಯವನ್ನು ಮಾಡಬಹುದು.

 

ಸಣ್ಣ ರೈತರಿಗೆ ಹೆಚ್ಚು ಸಬ್ಸಿಡಿ

ಸಣ್ಣ ರೈತರಿಗೆ ಹೆಚ್ಚು ಸಬ್ಸಿಡಿ

ಕೃಷಿಗಾಗಿ ಬಳಸಲಾಗುವ ಒಂದು ಡ್ರೋನ್‌ನ ಬೆಲೆ ಅಂದಾಜು 10 ಲಕ್ಷ ರೂ ಇದೆ. ಡ್ರೋನ್ ಸಬ್ಸಿಡಿ ಸ್ಕೀಮ್‌ನಲ್ಲಿ ಎಲ್ಲಾ ರೈತರಿಗೂ 5 ಲಕ್ಷ ರೂ ಅಥವಾ ಶೇ. 50 ಸಬ್ಸಿಡಿ ಸಿಗುತ್ತದೆ ಎಂದಲ್ಲ. ಸಣ್ಣ ಮತ್ತು ಅತಿಸಣ್ಣ ರೈತರು, ಮಹಿಳಾ ಕೃಷಿಕರು ಮತ್ತು ಈಶಾನ್ಯ ರಾಜ್ಯಗಳ ರೈತರಿಗೆ ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದೆ. ಈ ರೈತರು ಡ್ರೋನ್ ಖರೀದಿಸಿದಾಗ ಗರಿಷ್ಠ 5 ಲಕ್ಷ ರೂಪಾಯಿಯವರೆಗೂ ಸಬ್ಸಿಡಿ ಕೊಡಲಾಗುತ್ತದೆ. ಅಥವಾ ಡ್ರೋನ್ ಬೆಲೆಯ ಅರ್ಧದಷ್ಟು ಹಣವನ್ನು ಸಬ್ಸಿಡಿಯಾಗಿ ಸರ್ಕಾರ ಕೊಡುತ್ತದೆ.

ಮೇಲೆ ತಿಳಿಸಿದ ವರ್ಗಕ್ಕೆ ಸೇರದ ಇತರೆಲ್ಲಾ ರೈತರಿಗೂ 5 ಲಕ್ಷ ಬದಲು 4 ಲಕ್ಷ ರೂವರೆಗೂ ಸಬ್ಸಿಡಿ ಕೊಡಲಾಗುತ್ತದೆ. ಅಥವಾ ಡ್ರೋನ್ ಬೆಲೆಯ ಶೇ. 40ರಷ್ಟು ಹಣವನ್ನು ಸಬ್ಸಿಡಿಯಾಗಿ ಕೊಡಲಾಗುತ್ತದೆ.

 

Post Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿPost Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿ

English summary

Farmers Drone Subsidy Scheme: Unto 5 Lakh Subsidy For This Agri Activity

Government is encouraging farmers to use drone for agricultural activities. It is providing subsidies upto maximum Rs 5 lakh or 50% cost of the drone. Small and marginal farmers get maximum benefit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X