For Quick Alerts
ALLOW NOTIFICATIONS  
For Daily Alerts

ಫಾಸ್ಟ್‌ಟ್ಯಾಗ್‌ ಕಲೆಕ್ಷನ್ ಒಂದೇ ದಿನಕ್ಕೆ 80 ಕೋಟಿ ರೂಪಾಯಿ

|

ಫಾಸ್ಟ್‌ಟ್ಯಾಗ್‌ಗಳ ಮೂಲಕ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು ದಿನಕ್ಕೆ 80 ಕೋಟಿ ರೂ.ಗಳನ್ನು ದಾಟಿ ದಾಖಲೆಯ 50 ಲಕ್ಷ ವಹಿವಾಟು ನಡೆಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ.

 

ಡಿಸೆಂಬರ್ 24ರಂದು ದಾಖಲೆಯ ಮೊತ್ತದ ಟೋಲ್ ಶುಲ್ಕ ಸಂಗ್ರಹವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜನವರಿ 1, 2021 ರಿಂದ ಕೇಂದ್ರವು ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ.

 

ಯಾವುದೇ ಥರ್ಡ್‌-ಪಾರ್ಟಿ ವಾಹನ ಇನ್ಶೂರೆನ್ಸ್‌ ಖರೀದಿಗೆ 2021ರ ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್‌ ಹೊಂದಿರಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಕಲ ಸಿದ್ಧತೆ ನಡೆಸುತ್ತಿದೆ.

 ಫಾಸ್ಟ್‌ಟ್ಯಾಗ್‌ ಕಲೆಕ್ಷನ್ ಒಂದೇ ದಿನಕ್ಕೆ 80 ಕೋಟಿ ರೂಪಾಯಿ

ದೇಶದಲ್ಲಿ ಇದುವರೆಗೂ 2.2 ಕೋಟಿ ಫಾಸ್ಟ್‌ ಟ್ಯಾಗ್‌ ಬಳಕೆದಾರರಿದ್ದು, ಜನವರಿ 1ರಿಂದ ಈ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆ ಇದೆ. ಫಾಸ್ಟ್‌ ಟ್ಯಾಗ್‌ಗಳು ದೇಶಾದ್ಯಂತ 30000 ಪಿಒಎಸ್‌ ಗಳಲ್ಲಿ, 27ಕ್ಕೂ ಅಧಿಕ ಬ್ಯಾಂಕ್‌ ಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ಲಾಜಾಗಳಲ್ಲಿ ಲಭ್ಯವಿದೆ. ಇದಲ್ಲದೆ ಅಮೆಜಾನ್‌, ಫ್ಲಿಪ್‌ ಕಾರ್ಟ್‌, ಪೇಟಿಎಂ ನಂಥ ಡಿಜಿಟಲ್‌ ವೇದಿಕೆಗಳಲ್ಲೂ ಫಾಸ್ಟ್ಯಾಗ್‌ ಪಾವತಿ ಸಾಧ್ಯವಿದೆ.

ಫಾಸ್ಟ್‌ಟ್ಯಾಗ್ ಕಾರ್ಯನಿರ್ವಹಣೆ ಹೇಗೆ?

ಫಾಸ್ಟ್‌ಟ್ಯಾಗ್‌ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋದ ನಂತರ ಟೋಲ್ ಅನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತದೆ. ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆಯೊಂದಿಗೆ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದೆ. ಟೋಲ್ ಪ್ಲಾಜಾವನ್ನು ತಲುಪಿದಾಗ, ಈ ರೇಡಿಯೊ ಫ್ರೀಕ್ವೆನ್ಸಿ ಗುರುತಿಸುವಿಕೆಯು ಅಲ್ಲಿ ಸ್ಥಾಪಿಸಲಾದ ಸಂವೇದಕದೊಂದಿಗೆ ಸಂಪರ್ಕಕ್ಕೆ ಬರುತ್ತದೆ ಮತ್ತು ಅಲ್ಲಿ ವಿಧಿಸುವ ಶುಲ್ಕವನ್ನು ಕಡಿತಗೊಳಿಸುತ್ತದೆ.

Read more about: fastag toll money ಟೋಲ್ ಹಣ
English summary

FASTag Fee Collection Reaches Rs 80 Crore Per Day: NHAI

Electronic toll collection through FASTags has crossed Rs 80 crore a day with record 50 lakh transactions per day and more than 2.20 crore FASTags issued so far on Friday.
Story first published: Saturday, December 26, 2020, 14:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X