For Quick Alerts
ALLOW NOTIFICATIONS  
For Daily Alerts

ಫಿಲಾಟೆಕ್ಸ್ ಸಂಸ್ಥೆಗೆ 600 ಕೋಟಿ ರೂ ಅಧಿಕ ಆದಾಯ ನಿರೀಕ್ಷೆ

|

ಬೆಂಗಳೂರು, ನವೆಂಬರ್ 14, 2019: ಫಿಲಾಟೆಕ್ಸ್ ಇಂಡಿಯಾ ಯಶಸ್ವಿಯಾಗಿ ತನ್ನ ದಹೇಜ್ ಘಟಕವನ್ನು ಕಾರ್ಯಾರಂಭ ಮಾಡಿದ್ದು, ಈ ಮೂಲಕ ಕಂಪನಿಯ ಒಟ್ಟಾರೆ ಸಾಮರ್ಥ್ಯ 3.28 ಲಕ್ಷ ಮೆಟ್ರಿಕ್ ಟನ್‍ನಿಂದ 3.90 ಲಕ್ಷ ಮೆಟ್ರಿಕ್ ಟನ್‍ಗೆ ಹೆಚ್ಚಳವಾಗಿದೆ. ಫಿಲಾಟೆಕ್ಸ್ ತನ್ನ ಸಾಮರ್ಥ್ಯ ವಿಸ್ತರಣೆ ಯೋಜನೆಗಾಗಿ 275 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ಈ ವಿಸ್ತರಿತ ಸಾಮರ್ಥ್ಯದಿಂದಾಗಿ ಹೆಚ್ಚುವರಿ 600 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಿದೆ.

 

ಈ ಸಾಮಥ್ರ್ಯ ಹೆಚ್ಚಳದೊಂದಿಗೆ ಫಿಲಾಟೆಕ್ಸ್, ಈ ವಲಯದಲ್ಲಿ ನಾಲ್ಕನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ಮೂರು ವರ್ಷಗಳಲ್ಲಿ ಕಂಪನಿಯ ಲಾಭ ಶೇಕಡ 84ರಷ್ಟು ಸಿಎಜಿಆರ್ ದರದಲ್ಲಿ ಬೆಳೆಯುತ್ತಿದೆ. ಪ್ರಸ್ತುತ ಕಂಪನಿಯ ಒಟ್ಟಾರೆ ಆದಾಯದಲ್ಲಿ ಶೇಕಡ 20ರಷ್ಟು ಆದಾಯ ರಫ್ತು ಮೂಲದಿಂದ ಬರುತ್ತಿದೆ. ಸಿದ್ಧ ಉಡುಪುಗಳು, ಮಹಿಳಾ ಉಡುಪು, ಒಳ ಉಡುಪು, ಗೃಹ ಜವಳಿ, ಅಲಂಕರಣ ಮತ್ತು ಕ್ರೀಡಾ ಉಡುಪುಗಳ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಪಾಲಿಸ್ಟರ್ ಎಳೆಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

 
ಫಿಲಾಟೆಕ್ಸ್ ಸಂಸ್ಥೆಗೆ 600 ಕೋಟಿ ರೂ ಅಧಿಕ ಆದಾಯ ನಿರೀಕ್ಷೆ

"ಪಾಲಿಸ್ಟರ್ ದಾರಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲು ನಾವು ಸಜ್ಜಾಗಿದ್ದೇವೆ. ಬೇಡಿಕೆ ಹೆಚ್ಚಳಕ್ಕೆ ಪ್ರಮುಖವಾಗಿ ಅಥ್ಲೆಟಿಕ್, ಕ್ರೀಡೆ ಮತ್ತು ಯೋಗ ಉಡುಪುಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿರುವುದು ಕಾರಣ. ಫಿಲಾಟೆಕ್ಸ್ ಪ್ರಸ್ತುತ 40ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದು, ಬ್ರೆಜಿಲ್, ಬಾಂಗ್ಲಾದೇಶ ಮತ್ತು ಈಜಿಪ್ಟ್‍ನಂಥ ದೇಶಗಳಿಂದ ವ್ಯಾಪಕವಾಗಿ ಬೇಡಿಕೆ ಬರುತ್ತಿದೆ" ಎಂದು ಫಿಲಾಟೆಕ್ಸ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧುಸೂಧನ್ ಭಗೇರಿಯಾ ಹೇಳಿದ್ದಾರೆ.

Read more about: india business revenue ಭಾರತ
English summary

Filatex expect additional revenues of Rs. 600 cr with new plant

Filatex to deliver additional revenues of Rs. 600 crores during current year on commissioning of new plant at Dahej.
Story first published: Thursday, November 14, 2019, 20:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X