For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ಲೀಪ್ : ಅಂತಿಮ ಸುತ್ತಿಗೆ 8 ಸ್ಟಾರ್ಟಪ್ ಆಯ್ಕೆ

|

ಬೆಂಗಳೂರು, ಜನವರಿ 12, 2021: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ತನ್ನ ಸ್ಟಾರ್ಟಪ್ ವೇಗವರ್ಧಕ ಕಾರ್ಯಕ್ರಮವಾದ ಫ್ಲಿಪ್ ಕಾರ್ಟ್ ಲೀಪ್ ಅನ್ನು ಆರಂಭಿಸಿದೆ. ಸರ್ಕಾರದ ಸ್ಟಾರ್ಟಪ್ ಇಂಡಿಯಾ' ಅಭಿಯಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಔದ್ಯಮಿಕ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆರಂಭಿಸಿದೆ.

ಇದರ ಪ್ರಮುಖ ಉದ್ದೇಶ ಮುಂಬರುವ ಸ್ಟಾರ್ಟಪ್ ಗಳ ಬೆಳವಣಿಗೆ, ಅವುಗಳ ಮಟ್ಟ, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾರ್ಗದರ್ಶನ ನೀಡುವುದು ಸೇರಿದಂತೆ ಒಟ್ಟಾರೆ ಸರ್ವಾಂಗೀಣ ಬೆಳವಣಿಗೆಗೆ ನೆರವಾಗುವುದಾಗಿದೆ.

ಈ ಕಾರ್ಯಕ್ರಮಕ್ಕಾಗಿ ಐದು ವಿಭಾಗಗಳಾದ ಡಿಸೈನ್ & ಮೇಕ್ ಫಾರ್ ಇಂಡಿಯಾ, ಇನ್ನೋವೇಶನ್ಸ್ ಇನ್ ಡಿಜಿಟಲ್ ಕಾಮರ್ಸ್, ಟೆಕ್ನಾಲಾಜೀಸ್ ಟು ಎಂಪವರ್ ರೀಟೇಲ್, ಎಸ್ ಸಿಎಂ & ಲಾಜಿಸ್ಟಿಕ್ಸ್ ಹಾಗೂ ಎನೇಬ್ಲಿಂಗ್ ಡೀಪ್ ಟೆಕ್ ಅಪ್ಲಿಕೇಶನ್ಸ್ ನಲ್ಲಿ 920 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು.

ಫ್ಲಿಪ್ ಕಾರ್ಟ್ ಲೀಪ್ : ಅಂತಿಮ ಸುತ್ತಿಗೆ 8 ಸ್ಟಾರ್ಟಪ್ ಆಯ್ಕೆ

ಈ ಪೈಕಿ ಕಠಿಣವಾದ ನಾಲ್ಕು ಪರಿಶೀಲನೆ ಪ್ರಕ್ರಿಯೆಗಳ ನಂತರ 8 ಸ್ಟಾರ್ಟಪ್ ಗಳನ್ನು ಅಂತಿಮಗೊಳಿಸಲಾಗಿದೆ. ಆಯ್ಕೆಯಾಗಿರುವ ಎಂಟು ಸ್ಟಾರ್ಟಪ್ ಗಳೆಂದರೆ ಎಎನ್ಎಸ್ ಕಾಮರ್ಸ್, ಎಂಟ್ರೋಪಿಕ್ ಟೆಕ್, ಫಶಿನ್ಝಾ, ಗಲ್ಲಿ ನೆಟ್ ವರ್ಕ್, ಪಿಗ್ಗಿ, ಟ್ಯಾಗ್ ಬಾಕ್ಸ್ ಸಲೂಶನ್ಸ್, ಅನ್ ಬಾಕ್ಸ್ ರೋಬೋಟಿಕ್ಸ್ ಮತ್ತು ವೋಕುಸ್ ಟೆಕ್ನಾಲಾಜಿ.

ಈ ಅಂತಿಮಗೊಂಡಿರುವ ಸ್ಟಾರ್ಟಪ್ ಗಳಿಗೆ ಸತತ 16 ವಾರಗಳ ಮೆಂಟರ್ ಶಿಪ್ ಕಾರ್ಯಕ್ರಮವನ್ನು ನೀಡಲಾಗುತ್ತದೆ. ಇಲ್ಲಿ ಫ್ಲಿಪ್ ಕಾರ್ಟ್ ನ ನಾಯಕರು ಮತ್ತು ವಿವಿಧ ಉದ್ಯಮಗಳ ಪರಿಣತರು ತರಬೇತಿಯನ್ನು ನೀಡಲಿದ್ದಾರೆ. ವೆಂಚರ್ ಡೆವಲಪ್ ಮೆಂಟ್ ಬಗ್ಗೆ ಸ್ಟಾರ್ಟಪ್ ಗಳಿಗೆ ಜ್ಞಾನವನ್ನು ನೀಡಲಾಗುತ್ತದೆ ಮತ್ತು ಈ ಆಯ್ಕೆಗೊಂಡಿರುವ ಸ್ಟಾರ್ಟಪ್ ಗಳಿಗೆ ಪಾಲುದಾರಿಕೆಗಳನ್ನು ಎರಡು ವಿಭಿನ್ನ ಮಾರ್ಗದಲ್ಲಿ ಖಾತರಿಪಡಿಸಲಾಗುತ್ತದೆ.

ಮೊದಲ ಮಾರ್ಗದಲ್ಲಿ ಒನ್-ಆನ್-ಒನ್ ಬ್ಯುಸಿನೆಸ್ ಮತ್ತು ತಾಂತ್ರಿಕ ಮೆಂಟರ್ ಶಿಪ್, ಮಾಸ್ಟರ್ ಕ್ಲಾಸಸ್ ಹಾಗೂ ವೆಂಚರ್ ಡೆವಲಪ್ ಮೆಂಟ್ ನಲ್ಲಿ ನೆಟ್ ವರ್ಕ್ ಮಾಡುವ ಬಗೆಯನ್ನು ಹೇಳಿಕೊಡಲಾಗುತ್ತದೆ. ಭಾರತದಲ್ಲಿ ಬ್ಯುಸಿನೆಸ್ ಅನ್ನು ಉತ್ತಮ ಮಟ್ಟದಲ್ಲಿ ವೃದ್ಧಿಸಿಕೊಳ್ಳಲು ಪೂರಕವಾಗಿ ಟೂಲ್ಸ್ ಮತ್ತು ಅತ್ಯುತ್ತಮ ಪದ್ಧತಿಗಳನ್ನು ಹೇಳಿಕೊಡಲಾಗುತ್ತದೆ.

ಎರಡನೇ ಮಾರ್ಗದಲ್ಲಿ ಸ್ಟಾರ್ಟಪ್ ಗಳು ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ ಸೂಕ್ತವಾದ ಬ್ಯುಸಿನೆಸ್ ಘಟಕಗಳೊಂದಿಗೆ ಪಾಲುದಾರಿಕೆಯನ್ನು ಯಾವ ರೀತಿ ಸಾಧಿಸಬಹುದು ಎಂಬುದರ ಅವಕಾಶಗಳನ್ನು ಅನ್ವೇಷಿಸಲಾಗುತ್ತದೆ. ಇದಲ್ಲದೇ, ಅಂತಿಮವಾಗಿ ಆಯ್ಕೆಯಾಗುವ ಸ್ಟಾರ್ಟಪ್ ಗಳು 25,000 ಯುಎಸ್ ಡಾಲರ್ ಗಳ ಈಕ್ವಿಟಿ-ಫ್ರೀ ಗ್ರಾಂಟ್ ಅನ್ನು ಗಳಿಸಲಿವೆ.

English summary

Finalists of Flipkart Leap startup accelerator program

Flipkart announces finalists of its first-ever startup accelerator program “Flipkart Leap”.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X