For Quick Alerts
ALLOW NOTIFICATIONS  
For Daily Alerts

2020/21 ಹಣಕಾಸು ವರ್ಷದ ವಿತ್ತೀಯ ಕೊರತೆ 7%ಗೂ ಹೆಚ್ಚಾಗುವ ಸಾಧ್ಯತೆ

By ಅನಿಲ್ ಆಚಾರ್
|

2021ರ ಮಾರ್ಚ್ ಕೊನೆ ಹೊತ್ತಿಗೆ ಭಾರತದ ವಿತ್ತೀಯ ಕೊರತೆಯು ಜಿಡಿಪಿಯ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕೃ) 7%ಗೂ ಹೆಚ್ಚಾಗಲಿದೆ ಎಂದು ಮೂರು ಮೂಲಗಳು ಹೇಳುರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೊರೊನಾ ಲಾಕ್ ಡೌನ್ ಮತ್ತು ಕೋವಿಡ್- 19 ನಿಯಂತ್ರಣಕ್ಕಾಗಿ ಹೇರಿದ ನಿರ್ಬಂಧಗಳ ಪರಿಣಾಮ ಇದು ಎನ್ನಲಾಗಿದೆ.

 

ಭಾರತ ಸರ್ಕಾರವು ಈ ಹಿಂದೆ ಅಂದಾಜು ಮಾಡಿದಂತೆ, ಜಿಡಿಪಿಯ 3.5% ವಿತ್ತೀಯ ಕೊರತೆ ಆಗಬಹುದು ಎಂದು ಹೋದ ವರ್ಷದ ಫೆಬ್ರವರಿಯಲ್ಲಿ ಅಂದಾಜಿಸಿತ್ತು. ಇನ್ನು ಸರ್ಕಾರದ ಸಾಲವನ್ನು 7.8 ಲಕ್ಷ ಕೋಟಿ ರುಪಾಯು ಎಂದು ಅಂದಾಜಿಸಿದ್ದನ್ನು ಆ ನಂತರ 12 ಲಕ್ಷ ಕೋಟಿ ರುಪಾಯಿಗೆ ಪರಿಷ್ಕೃತಗೊಳಿಸಿತ್ತು.

 

2020ರಲ್ಲಿ ನೋಟು ಚಲಾವಣೆಯಲ್ಲಿ 5 ಲಕ್ಷ ಕೋಟಿ ರುಪಾಯಿ ಹೆಚ್ಚಳ2020ರಲ್ಲಿ ನೋಟು ಚಲಾವಣೆಯಲ್ಲಿ 5 ಲಕ್ಷ ಕೋಟಿ ರುಪಾಯಿ ಹೆಚ್ಚಳ

7%ಗಿಂತ ಹೆಚ್ಚಿನ ವಿತ್ತೀಯ ಕೊರತೆ ಆದಲ್ಲಿ ಅದು ಕೆಲವು ಖಾಸಗಿ ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನದಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಬಹುದು ಎಂದು ಅಂದಾಜು ಮಾಡಿದ್ದರು. ಆದರೆ ಸರ್ಕಾರಿ ಮೂಲಗಳು ಹೇಳುವಂತೆ, ಈ ಹಿಂದಿನ ನಷ್ಟವನ್ನು ಸರಿತೂಗಿಸಲು ಅದು ಸಾಧ್ಯವಾಗಲ್ಲ.

2020/21 ಹಣಕಾಸು ವರ್ಷದ ವಿತ್ತೀಯ ಕೊರತೆ 7%ಗೂ ಹೆಚ್ಚಾಗುವ ಸಾಧ್ಯತೆ

ಎರಡು ಮೂಲಗಳ ಪ್ರಕಾರ, ತೆರಿಗೆ ಹಾಗೂ ಸರ್ಕಾರಿ ಕಂಪೆನಿಗಳ ಬಂಡವಾಳ ಹಿಂತೆಗೆತದಿಂದ ಆಗುವ ಆದಾಯ ಕೊರತೆಯೇ 7 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಆದರೆ ಹಣಕಾಸು ಸಚಿವಾಲಯದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನು ಯಾವುದೇ ಪರಿಷ್ಕೃತ ವಿತ್ತೀಯ ಕೊರತೆ ಅಂದಾಜು ಬಿಡುಗಡೆಯನ್ನು ಸರ್ಕಾರದಿಂದ ಮಾಡಬೇಕಿದೆ.

2020/21 ಹಣಕಾಸು ವರ್ಷದ ಜಿಡಿಪಿಯ ಮೊದಲ ಮುಂಚಿತ ಅಂದಾಜನ್ನು ಬಿಡುಗಡೆ ಮಾಡಲು ಭಾರತ ಸಿದ್ಧತೆ ನಡೆಸಿದೆ. ಅಂತಿಮವಾದ ವಿತ್ತೀಯ ಕೊರತೆ ಅಂದಾಜನ್ನು ಫೆಬ್ರವರಿ 1ನೇ ತಾರೀಕಿನಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಲಿದ್ದಾರೆ.

English summary

Fiscal Deficit To GDP Estimated To More Than 7 Percent In 2020/ 21

According to sources, fiscal deficit to GDP estimated to more than 7% in 2020/21.
Story first published: Thursday, January 7, 2021, 18:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X