For Quick Alerts
ALLOW NOTIFICATIONS  
For Daily Alerts

ವಾಲ್ ಮಾರ್ಟ್ ಇಂಡಿಯಾವನ್ನು ಖರೀದಿಸಿದ ಫ್ಲಿಪ್ ಕಾರ್ಟ್

|

ವಾಲ್ ಮಾರ್ಟ್ ಇಂಡಿಯಾವನ್ನು ಖರೀದಿ ಮಾಡಿರುವುದಾಗಿ ಗುರುವಾರ ಫ್ಲಿಪ್ ಕಾರ್ಟ್ ಘೋಷಣೆ ಮಾಡಿದೆ. ಆದರೆ ಎಷ್ಟು ಮೊತ್ತಕ್ಕೆ ಎಂಬುದನ್ನು ಬಹಿರಂಗ ಮಾಡಿಲ್ಲ. ಇನ್ನು ಮುಂದಿನ ತಿಂಗಳು 'ಫ್ಲಿಪ್ ಕಾರ್ಟ್ ಹೋಲ್ ಸೇಲ್' ಆರಂಭಿಸುವುದಾಗಿ ಮಾಹಿತಿ ನೀಡಿದೆ. ಆ ಮೂಲಕ 65 ಸಾವಿರ ಕೋಟಿ ಅಮೆರಿಕನ್ ಡಾಲರ್ ಮೌಲ್ಯ ಭಾರತದ B2B (ಬಿಜಿನೆಸ್ ಟು ಬಿಜಿನೆಸ್) ರೀಟೇಲ್ ಮಾರುಕಟ್ಟೆಗೆ ಕಾಲಿಡಲಿದೆ.

 

ದೇಶದಲ್ಲಿ ವಾಲ್ ಮಾರ್ಟ್ ಇಂಡಿಯಾವು 29 ಬೆಸ್ಟ್ ಪ್ರೈಸ್ ಹೋಲ್ ಸೇಲ್ ಸ್ಟೋರ್ಸ್ ನಡೆಸುತ್ತದೆ. ವಾಲ್ ಮಾರ್ಟ್ ನೇತೃತ್ವದ ಹಣಕಾಸು ಹೂಡಿಕೆದಾರ ಗುಂಪಿನ ಮೂಲಕ 120 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದಾಗಿ ವಾರದ ಹಿಂದೆ ಫ್ಲಿಪ್ ಕಾರ್ಟ್ ತಿಳಿಸಿತ್ತು.

 

ಫ್ಲಿಪ್ ಕಾರ್ಟ್ ನಿಂದ 90 ನಿಮಿಷದೊಳಗೆ ದಿನಸಿ ಡೆಲಿವರಿಫ್ಲಿಪ್ ಕಾರ್ಟ್ ನಿಂದ 90 ನಿಮಿಷದೊಳಗೆ ದಿನಸಿ ಡೆಲಿವರಿ

2018ರಲ್ಲಿ 1600 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದ್ದ ವಾಲ್ ಮಾರ್ಟ್, ಗ್ರೂಪ್ ನಲ್ಲಿ 77 ಪರ್ಸೆಂಟ್ ಷೇರಿನ ಪಾಲು ಖರೀದಿಸಿತ್ತು. ಫ್ಲಿಪ್ ಕಾರ್ಟ್ ಹೋಲ್ ಸೇಲ್ ಎಂಬುದು ಹೊಸ ಡಿಜಿಟಲ್ ಮಾರ್ಕೆಟ್ ಪ್ಲೇಸ್. ಭಾರತದಲ್ಲಿ ಬಿಜಿನೆಸ್ ಟು ಬಿಜೆನೆಸ್ ಸೆಗ್ಮೆಂಟ್ ಮೇಲೆ ಗಮನ ಇಟ್ಟುಕೊಂಡಿದೆ.

ವಾಲ್ ಮಾರ್ಟ್ ಇಂಡಿಯಾವನ್ನು ಖರೀದಿಸಿದ ಫ್ಲಿಪ್ ಕಾರ್ಟ್

ಈ ಮಾರ್ಕೆಟ್ ಪ್ಲೇಸ್ ಮೂಲಕ ಒಂದು ಕಡೆ ಉತ್ಪಾದಕರು ಹಾಗೂ ಮಾರಾಟಗಾರರನ್ನು ಪರಿಣಾಮಕಾರಿಯಾಗಿ ಬೆಸೆಯಲಾಗುವುದು. ಮತ್ತೊಂದು ಕಡೆ, ಕಿರಾಣಾ ಮತ್ತು ಕಿರು- ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆ (MSME)ಗಳನ್ನು ಬೆಸೆಯಲಾಗುವುದು ಎಂದು ಫ್ಲಿಪ್ ಕಾರ್ಟ್ ಹಿರಿಯ ಉಪಾಧ್ಯಕ್ಷ ಹಾಗೂ ಫ್ಲಿಪ್ ಕಾರ್ಟ್ ಹೋಲ್ ಸೇಲ್ ಮುಖ್ಯಸ್ಥ ಆದರ್ಶ್ ಮೆನನ್ ತಿಳಿಸಿದ್ದಾರೆ.

B2B ಸೆಗ್ಮೆಂಟ್ ನಲ್ಲಿ ಪ್ರತಿಸ್ಪರ್ಧಿ ಅಮೆಜಾನ್ ಜತೆಗೆ ಕಠಿಣ ಸ್ಪರ್ಧೆ ಒಡ್ಡಲಿದೆ ಫ್ಲಿಪ್ ಕಾರ್ಟ್. ಅಂದ ಹಾಗೆ ವಿಶ್ವದ ಅತಿ ದೊಡ್ಡ ರೀಟೇಲರ್ ವಾಲ್ ಮಾರ್ಟ್. ಭಾರ್ತಿ ಎಂಟರ್ ಪ್ರೈಸಸ್ ಸಹಯೋಗದಲ್ಲಿ ಭಾರತದಲ್ಲಿ ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರಕ್ಕೆ ಪ್ರವೇಶ ಪಡೆಯಿತು. ಕಿರಾಣಾ ಮಳಿಗೆಗಳು, ಹೋಟೆಲ್ ಗಳನ್ನು ನಡೆಸುವವರು ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು.

2013ರಲ್ಲಿ ಎರಡೂ ಕಂಪೆನಿಗಳು ಪ್ರತ್ಯೇಕ ಹಾದಿಯಲ್ಲಿ ಸಾಗಿದವು. ಆಗ ವಾಲ್ ಮಾರ್ಟ್ ಭಾರತದಲ್ಲಿ ತನ್ನಷ್ಟಕ್ಕೆ ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರ ಮುಂದುವರಿಸಿತು. ವಾಲ್ ಮಾರ್ಟ್ ಇಂಡಿಯಾವು ವಾಲ್ ಮಾರ್ಟ್ ನ ಅಂಗಸಂಸ್ಥೆ. ಅಂದಾಜು 3500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary

Flipkart Acquired Walmart India To Launch Wholesale Segment

Flipkart has acquired Walmart India to launch wholesale segment next month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X