For Quick Alerts
ALLOW NOTIFICATIONS  
For Daily Alerts

ಕೊರೊನಾಗಾಗಿ ವಿಶೇಷ ಇನ್ಷುರೆನ್ಸ್ ಪರಿಚಯಿಸಿದ ಇ-ಕಾಮರ್ಸ್ ಫ್ಲಿಪ್‌ಕಾರ್ಟ್

|

ದೇಶಾದ್ಯಂತ ಕೊರೊನಾವೈರಸ್ ಮಹಾಮಾರಿ ಹಬ್ಬಿರುವ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಇನ್ಷುರೆನ್ಸ್ ಪರಿಚಯಿಸಲು ಮುಂದಾಗಿದೆ. ವಿಮೆ ಕಂಪನಿಗಳಾದ ಐಸಿಐಸಿಐ ಲೊಂಬಾರ್ಡ್ ಮತ್ತು ಡಿಜಿಟ್ ಇನ್ಷುರೆನ್ಸ್ ಸಹಭಾಗಿತ್ವದಲ್ಲಿ ಈ ಹೊಸ ಆರೋಗ್ಯ ವಿಮೆ ಪರಿಚಯಿಸಿದೆ.

ಫ್ಲಿಪ್‌ಕಾರ್ಟ್ ಆರೋಗ್ಯ ವಿಮೆಯನ್ನು ಯಾವುದೇ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲದೆ ಖರೀದಿಸುವ ಅವಕಾಶ ಇದೆ. ವಿಮೆ ಪಾಲಿಸಿದಾರರು ತಕ್ಷಣದಿಂದಲೇ ಇವುಗಳ ಪ್ರಯೋಜನ ಪಡೆಯಬಹುದಾಗಿದೆ. ಈ ಆರೋಗ್ಯ ವಿಮೆ ಸೌಲಭ್ಯಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿನ ಚಿಕಿತ್ಸಾ ವೆಚ್ಚ ಸೇರಿದಂತೆ ಸುಲಭವಾಗಿ ಪರಿಹಾರ (ಕ್ಲೇಮ್) ಪಡೆಯುವ ಸೌಲಭ್ಯ ಹೊಂದಿದೆ ಎಂದು ಫ್ಲಿಪ್‌ಕಾರ್ಟ್ ವಕ್ತಾರರು ತಿಳಿಸಿದ್ದಾರೆ.

ಕೊರೊನಾಗಾಗಿ ವಿಶೇಷ ಇನ್ಷುರೆನ್ಸ್ ಪರಿಚಯಿಸಿದ ಫ್ಲಿಪ್‌ಕಾರ್ಟ್

ಐಸಿಐಸಿಐ ಲೊಂಬಾರ್ಡ್‌ನ 'ಕೋವಿಡ್-19 ಪ್ರೊಟೆಕ್ಷನ್ ಕವರ್' ಪಾಲಿಸಿ ಖರೀದಿಸುವ ಗ್ರಾಹಕರಿಗೆ ಕೋವಿಡ್-19 ಪಾಸಿಟಿವ್ ಇದೆ ಎಂದು ದೃಢವಾಗುತ್ತಿದ್ದಂತೆಯೇ 25 ಸಾವಿರ ಪರಿಹಾರ ನೀಡಲಿದೆ. ಈ ಪಾಲಿಸಿಯ ವಾರ್ಷಿಕ ಪ್ರೀಮಿಯಂ 159 ರುಪಾಯಿ ಇರಲಿದೆ.

ಹೆಚ್ಚುವರಿಯಾಗಿ ಈ ಪಾಲಿಸಿಯು ಆರೋಗ್ಯ ನೆರವಿನ ಪ್ರಯೋಜನ ನೀಡಲಿದ್ದು, ಆ್ಯಂಬುಲೆನ್ಸ್ ಸಹಾಯವನ್ನು ಒದಗಿಸುತ್ತದೆ. ಗ್ರಾಹಕರು ವಿಮೆ ಕಂಪನಿಗೆ ಡಿಜಿಟಲ್ ಸ್ವರೂಪದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು.

ಡಿಜಿಟ್ ಇನ್ಷುರೆನ್ಸ್ ಕಂಪನಿಯ 'ಡಿಜಿಟ್ ಇಲ್‌ನೆಸ್ ಗ್ರೂಪ್ ಇನ್ಷರೆನ್ಸ್' ಪಾಲಿಸಿಯು ಆಸ್ಪತ್ರೆಗೆ ದಾಖಲಾದಾಗ ಆಗುವ ಚಿಕಿತ್ಸಾ ವೆಚ್ಚ ಭರಿಸುವ ನೆರವಾಗುವ ದೃಷ್ಟಿಯಿಂದ 1 ಲಕ್ಷ ವಿಮೆ ಪರಿಹಾರ ನೀಡಲಿದೆ. ಇದರ ವಾರ್ಷಿಕ ಪ್ರೀಮಿಯಂ ದರ 511 ರುಪಾಯಿ ಇದೆ. ಈ ವಿಮೆಯು ಆಸ್ಪತ್ರೆಗೆ ದಾಖಲಾಗುವ 30 ದಿನಗಳ ಮುನ್ನ ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ 60 ದಿನಗಳವರೆಗೆ ಆಸ್ಪತ್ರೆ ಶುಲ್ಕಕ್ಕೂ ಪರಿಹಾರ ನೀಡಲಿದೆ. ಕೊಠಡಿ ಬಾಡಿಗೆ ಅಥವಾ ಐಸಿಯುಗೆ ಯಾವುದೇ ಮಿತಿಯಿಲ್ಲ.

ಫ್ಲಿಪ್‌ಕಾರ್ಟ್ ಪರಿಚಯಿಸಿರುವ ಈ ಎರಡೂ ಇನ್ಷುರೆನ್ಸ್ ಪಾಲಿಸಿಗಳು ಈಗಾಗಲೇ ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.

English summary

Flipkart Introduced Covid-19 Insurance Policies

E-commerce marketplace Flipkart, in partnership with ICICI Lombard and Go Digit General Insurance, has launched health insurance policies
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X