For Quick Alerts
ALLOW NOTIFICATIONS  
For Daily Alerts

ಅದಾನಿ ಗ್ರೂಪ್‌ನೊಂದಿಗೆ ಫ್ಲಿಪ್‌ಕಾರ್ಟ್‌ ಒಪ್ಪಂದ: 2,500 ಉದ್ಯೋಗ ಸೃಷ್ಟಿ

|

ಲಾಜಿಸ್ಟಿಕ್ ಮತ್ತು ಡೇಟಾ ಸೆಂಟರ್‌ಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಹಾಗೂ 2,500ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಅದಾನಿ ಗ್ರೂಪ್‌ನೊಂದಿಗೆ ಕೈ ಜೋಡಿಸಿದೆ.

 

ಚಿನ್ನದ ಬೆಲೆ ಏರಿಳಿತ: ಏಪ್ರಿಲ್ 12ರ ಬೆಲೆ ಹೀಗಿದೆ

ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಪೂರೈಸುವ ಉದ್ದೇಶದಿಂದ ಅದಾನಿ ಲಾಜಿಸ್ಟಿಕ್ಸ್‌ ಲಿಮಿಟೆಡ್‌ನೊಂದಿಗೆ ಫ್ಲಿಪ್‌ಕಾರ್ಟ್‌, ಅದಾನಿ ಗ್ರೂಪ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಅದಾನಿ ಗ್ರೂಪ್‌ನೊಂದಿಗೆ ಫ್ಲಿಪ್‌ಕಾರ್ಟ್‌ ಲಾಜಿಸ್ಟಿಕ್ ಒಪ್ಪಂದ

ಈ ಪಾಲುದಾರಿಕೆಯ ಭಾಗವಾಗಿ, ಅದಾನಿ ಲಾಜಿಸ್ಟಿಕ್ಸ್ ಮುಂಬಯಿಯಲ್ಲಿರುವ ತನ್ನ ಮುಂಬರುವ ಲಾಜಿಸ್ಟಿಕ್ಸ್ ಹಬ್‌ನಲ್ಲಿ 5,34,000 ಚದರ ಅಡಿ ಪೂರೈಸುವ ಕೇಂದ್ರವನ್ನು ನಿರ್ಮಿಸಲಿದ್ದು, ಪಶ್ಚಿಮ ಭಾರತದಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್‌ಗೆ ಬೇಡಿಕೆಯನ್ನು ಪೂರೈಸುವ ಫ್ಲಿಪ್‌ಕಾರ್ಟ್‌ಗೆ ಗುತ್ತಿಗೆ ನೀಡಲಾಗುವುದು. ಹೊಸ ಉದ್ಯಮವು ಸಣ್ಣ, ಮಧ್ಯಮ ವರ್ಗ ಹಾಗೂ ಸಾವಿರಾರು ಮಾರಾಟಗಾರರಿಗೆ ಬೆಂಬಲಿಸಲಿದೆ.

ಇನ್ನು ಚೆನ್ನೈನಲ್ಲಿರುವ ಅದಾನಿಕಾನೆಕ್ಸ್‌ನಲ್ಲಿ ಫ್ಲಿಪ್‌ಕಾರ್ಟ್ ತನ್ನ ಮೂರನೇ ಡೇಟಾ ಸೆಂಟರ್ ಅನ್ನು ಕೂಡ ನಿರ್ಮಿಸಲಿದೆ. ಅದಾನಿಕಾನೆಕ್ಸ್ ಎಡ್ಜ್‌ಕಾನೆಕ್ಸ್‌ ಮತ್ತು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ನಡುವಿನ ಹೊಸ ಜಂಟಿ ಉದ್ಯಮವಾಗಿದೆ.

English summary

Flipkart Partners Adani Group For Data Centre And Logistics Hub

Flipkart has entered into a strategic and commercial partnership with infrastructure company Adani Group to set up a data centre as well as a fulfilment centre
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X