For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಹಾಸ್ಪಿಕ್ಯಾಶ್ ಪ್ರಯೋಜನ: ವೈದ್ಯಕೀಯ ವೆಚ್ಚ ಭರಿಸುವ ವಿಮೆ

|

ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ವಿಮೆಯ ಸೌಲಭ್ಯವನ್ನು ಒದಗಿಸಲು ಗ್ರೂಪ್ ಸೇಫ್ ಗಾರ್ಡ್ ವಿಮೆಯನ್ನು ಜಾರಿಗೆ ತರುವ ದೃಷ್ಟಿಯಿಂದ, ದೇಶದ ಖ್ಯಾತ ವಿಮಾ ಕಂಪನಿಯಾಗಿರುವ ಐಸಿಐಸಿಐ ಲೊಂಬಾರ್ಡ್ ನೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ಇತರೆ ಆರೋಗ್ಯ ವಿಮಾ ಪಾಲಿಸಿಗಳಿಗೆ ಹೋಲಿಸಿದರೆ ಈ ಗ್ರೂಪ್ ಸೇಫ್ ಗಾರ್ಡ್ ನ ಪ್ರಯೋಜನಗಳು ಉತ್ತಮವಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಅನಾರೋಗ್ಯಪೀಡಿತ ಗ್ರಾಹಕರು ಆಸ್ಪತ್ರೆಗೆ ದಾಖಲಾದರೆ ಪ್ರತಿದಿನ ನಗದು ವಿಮೆಯನ್ನು ಪಡೆಯಬಹುದಾಗಿದೆ. ಈ ನಿಗದಿತ ವಿಮಾ ಹಣದಿಂದ ಗ್ರಾಹಕರು ಆಕಸ್ಮಿಕ ವೈದ್ಯಕೀಯ ಅಥವಾ ತುರ್ತು ವೆಚ್ಚಗಳಿಗೆ ಭರಿಸಬಹುದಾಗಿದೆ. ಈ ವಿಮೆಯು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಕಾಗದರಹಿತ ಮತ್ತು ಸರಳವಾಗಿರುತ್ತದೆ. ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವುದು ಅಥವಾ ಯೋಜಿತ ಸರ್ಜರಿಗಳು /ಚಿಕಿತ್ಸೆಗಳಿಗೆ ನೆರವಾಗುತ್ತದೆ.

ಫ್ಲಿಪ್ ಕಾರ್ಟ್‌ನಿಂದ ಗ್ರಾಹಕರಿಗೆ ವೈದ್ಯಕೀಯ ವೆಚ್ಚ ಭರಿಸುವ ವಿಮೆ

ಆಸ್ಪತ್ರೆಗಳಲ್ಲಿ ದಾಖಲಾಗುವ ವೇಳೆ ಭಾರತೀಯರು ಗಣನೀಯ ಪ್ರಮಾಣದಲ್ಲಿ ವೆಚ್ಚ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ವರದಿಯ ಪ್ರಕಾರ, ಭಾರತದಲ್ಲಿ ಆಸ್ಪತ್ರೆಗೆ ದಾಖಲಾಗುವವರಲ್ಲಿ ತಲಾ ಒಬ್ಬರಿಗೆ ಸರಾಸರಿ 4,452 ದಿಂದ 31,845 ರೂಪಾಯಿ ವೆಚ್ಚವಾಗುತ್ತಿದೆ. ಅದೇ ರೀತಿ ಆಸ್ಪತ್ರೆಗೆ ದಾಖಲಾಗುವುದರಿಂದ ಸರಾಸರಿ ಪ್ರತಿದಿನ 8,164 ರೂಪಾಯಿಗಳು ನಷ್ಟವಾಗುತ್ತಿದೆ.

ಐಸಿಐಸಿಐ ಲೊಂಬಾರ್ಡ್ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಹಾಸ್ಪಿಕ್ಯಾಶ್ ಮೂಲಕ ಪ್ರಯೋಜನವನ್ನು ನೀಡುತ್ತದೆ. ಗ್ರಾಹಕರು ತುರ್ತು ವೈದ್ಯಕೀಯ ವೆಚ್ಚಗಳು, ಪ್ರಯಾಣ, ಆಸ್ಪತ್ರೆಯಿಂದ ಡಿಸ್ ಚಾರ್ಜ್ ನಂತರದ ವೆಚ್ಚಗಳು ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಷ್ಟವಾಗುವ ಆದಾಯಕ್ಕೆ ಪರಿಹಾರವನ್ನು ನೀಡುತ್ತದೆ.

English summary

ICICI Lombard Ties Up With Flipkart To Offer 'Hospicash' Benefit To Consumers

Flipkart has partnered with ICICI Lombard to offer Group SafeGuard insurance, a group insurance policy to its consumers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X