For Quick Alerts
ALLOW NOTIFICATIONS  
For Daily Alerts

ಬ್ಯಾಂಕ್‌ಗಳ ಸುಧಾರಣೆಗೆ ಮಹತ್ವದ ನಿರ್ಧಾರ: ಬ್ಯಾಡ್‌ ಬ್ಯಾಂಕ್‌ಗಳಿಗೆ 31,000 ಕೋಟಿ ರೂ.ಗಳವರೆಗೆ ಗ್ಯಾರಂಟಿ

|

ವಸೂಲಾಗದ ಸಾಲದಿಂದ ತೊಂದರೆಗೊಳಗಾಗಿರುವ , ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಬ್ಯಾಂಕ್‌ಗಳಿಗೆ (ಬ್ಯಾಡ್ ಬ್ಯಾಂಕ್) ನ್ಯಾಷನಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (NARCL) ಗೆ 31,000 ಕೋಟಿ ರೂ.ಗಳವರೆಗೆ ಗ್ಯಾರಂಟಿ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿದ್ದಾರೆ.

ಕ್ಯಾಬಿನೆಟ್ ನಿನ್ನೆ ಕೇಂದ್ರ ಸರ್ಕಾರದ ಖಾತರಿಯನ್ನು 30,600 ಕೋಟಿ ರೂಪಾಯಿ ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ಲಿಮಿಟೆಡ್ (NARCL) ನಿಂದ ನೀಡಲಾಗುವ ಭದ್ರತಾ ರಸೀದಿಗಳನ್ನು ಬೆಂಬಲಿಸಲು 30,600 ಕೋಟಿಗೆ ಅನುಮೋದನೆ ನೀಡಿತ್ತು.

ಬ್ಯಾಂಕ್‌ಗಳ ಸುಧಾರಣೆಗೆ ನಿರ್ಧಾರ: 31,000 ಕೋಟಿ ರೂ. ಗ್ಯಾರಂಟಿ

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಸುಮಾರು 5 ಲಕ್ಷ ಕೋಟಿ ಸಾಲದ ಹಣವನ್ನು ವಸೂಲು ಮಾಡಲಾಗಿದೆ. ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ನೀಡುವ ಭದ್ರತಾ ರಸೀದಿ ಹಿಂತಿರುಗಿಸಲು ನಿನ್ನೆ ಕೇಂದ್ರ ಸರ್ಕಾರವು 30,600 ಕೋಟಿಗೆ ಅನುಮೋದನೆ ನೀಡಿತು ಎಂದು ಸೀತಾರಾಮನ್ ತಿಳಿಸಿದ್ದಾರೆ.

100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪತ್ತೆಗಾಗಿ ಸರಾಸರಿ 57 ತಿಂಗಳ ವಿಳಂಬ ಸಮಯವನ್ನು ಹೊಂದಿವೆ. ಆದರೆ ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಸೇರಿದಂತೆ ಕೆಲ ಕಂಪನಿಗಳ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ 99 ಸಾವಿರ ಕೋಟಿ ವಸೂಲಿ ಮಾಡಲಾಯಿತು ಎಂದು ಹೇಳಿದರು.

English summary

FM Nirmala Sitharaman Announced that Govt Approved to Provide guarantee of Rs 31,000 crore for the bad bank

Finance minister Nirmala Sitharaman announced that the central government had approved to provide guarantee of up to Rs 31,000 crore for the bad bank. Know more
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X