For Quick Alerts
ALLOW NOTIFICATIONS  
For Daily Alerts

ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ: ಏಪ್ರಿಲ್‌ನಲ್ಲಿ 8.6 ಪರ್ಸೆಂಟ್ ದಾಖಲು

|

ಕೊರೊನಾವೈರಸ್ ಜಗತ್ತಿನ ಆರ್ಥಿಕತೆಯನ್ನು ಹಿಂಡುತ್ತಿದ್ದು, ಭಾರತದ ಆರ್ಥಿಕತೆಯು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಬಹುತೇಕ ಕೃಷಿ ಕ್ಷೇತ್ರವು ಹಿನ್ನಡೆ ಅನುಭವಿಸಿದ್ರೂ, ಕೃಷಿ ಕ್ಷೇತ್ರವೇ ಭರವಸೆಯ ಬೆಳಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಕೃಷಿ ಕ್ಷೇತ್ರ ಎದ್ದು ನಿಂತಿದ್ದರೂ ದೇಶದಲ್ಲಿ ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ. ಏಪ್ರಿಲ್​ನಲ್ಲಿ 8.6 ಪರ್ಸೆಂಟ್‌ಗೆ ಆಹಾರ ಹಣದುಬ್ಬರ ಮುಟ್ಟಿದೆ ಎಂದರು.

 
ಆಹಾರ ಹಣದುಬ್ಬರ ಹೆಚ್ಚಾಗುತ್ತಿದೆ: ಏಪ್ರಿಲ್‌ನಲ್ಲಿ 8.6 ಪರ್ಸೆಂಟ್

ವಿಶ್ವಾದ್ಯಂತ ವ್ಯವಹಾರದಲ್ಲಿ 13-32 ಪರ್ಸೆಂಟ್‌ರಷ್ಟು ನಷ್ಟವಾಗಬಹುದು. ಭಾರತದ ರೀಟೇಲ್ ವಸ್ತುಗಳ ರಫ್ತು ಪ್ರಮಾಣ ಕಳೆದ 30 ವರ್ಷದಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿದೆ. ಜಿಡಿಪಿ ಅಭಿವೃದ್ಧಿ ದರ ಆಶಾದಾಯಕವಾಗಿಲ್ಲ. ಖಾಸಗಿ ಅನುಭೋಗ ಪಾತಾಳ ಕಚ್ಚಿದೆ. ಔದ್ಯಮಿಕ ಉತ್ಪಾದನೆ ಮತ್ತು ಮುಖ್ಯ ಉದ್ಯಮಗಳ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಶಕ್ತಿಕಾಂತ ದಾಸ್ ಕಳವಳ ವ್ಯಕ್ತಪಡಿಸಿದರು.

ಲಾಕ್​ಡೌನ್ ಸಡಿಲಿಕೆ, ಆರ್ಥಿಕ ಪ್ಯಾಕೇಜ್ ಕ್ರಮಗಳಿಂದ ಮುಂದಿನ ಕೆಲ ತಿಂಗಳ ನಂತರ ಪರಿಸ್ಥಿತಿ ಸುಧಾರಿಸಬಹುದು. ಇದೆಲ್ಲವೂ ಕೊರೊನಾ ವೈರಸ್ ಎಷ್ಟರಮಟ್ಟಿಗೆ ಕಂಟ್ರೋಲ್‌ಗೆ ಬರುತ್ತದೆ ಹಾಗೂ ಹಣದುಬ್ಬರ ಪ್ರಮಾಣ ಎಷ್ಟಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.

English summary

Food Inflation To 8.6 Percent In April Said The RBI Governor

India's Food Inflation To 8.6 Percent In April Said The RBI Governor Shaktikanta das on friday
Story first published: Friday, May 22, 2020, 13:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X