For Quick Alerts
ALLOW NOTIFICATIONS  
For Daily Alerts

19,203 ಕೋಟಿ ರುಪಾಯಿ ಎಫ್‌ಪಿಐ ಹೂಡಿಕೆ

|

ವಿದೇಶಿ ಬಂಡವಾಳ ಹೂಡಿಕೆದಾರರು(ಎಫ್‌ಪಿಐ) ನವೆಂಬರ್ ಮೊದಾಲಾರ್ಧದಲ್ಲಿ ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ 19,203 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ.

ದೇಶಿ ಮತ್ತು ಜಾಗತಿಕವಾಗಿ ಸಕಾರಾತ್ಮಕ ಬೆಳವಣಿಗೆಗಳಿಂದಾಗಿ ನವೆಂಬರ್ 1 ರಿಂದ 15ರವರೆಗೆ 19,203 ಕೋಟಿ ರುಪಾಯಿ ಹೂಡಿಕೆ ಮಾಡಲಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. 14,436 ಕೋಟಿ ರುಪಾಯಿ ಷೇರುಗಳನ್ನು ಮತ್ತು 4,767.18 ಕೋಟಿ ರುಪಾಯಿ ಮೌಲ್ಯದ ಸಾಲ ಪತ್ರಗಳನ್ನು ಖರೀದಿಸಿದ್ದಾರೆ.

ಇತ್ತೀಚಿನ ಠೇವಣಿ ಮಾಹಿತಿಯ ಪ್ರಕಾರ ಅಕ್ಟೋಬರ್‌ನಲ್ಲಿ 16,464.6 ಕೋಟಿ ರುಪಾಯಿ ಹಾಗೂ ಸೆಪ್ಟೆಂಬರ್‌ನಲ್ಲಿ 6,557.8 ಕೋಟಿ ರುಪಾಯಿಗಳು ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ.

19,203 ಕೋಟಿ ರುಪಾಯಿ ಎಫ್‌ಪಿಐ ಹೂಡಿಕೆ

''ಎಫ್‌ಪಿಐ ಒಳಹರಿನ ಪ್ರಮಾಣದ ಹೆಚ್ಚಳವು ಹೂಡಿಕೆದಾರರ ವಿಶ್ವಾಸವನ್ನು ಸೂಚಿಸುತ್ತದೆ. ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಬಂಡವಾಳ ಹಿಂತೆಗೆದುಕೊಂಡಿದ್ದರು. ಆ ಬಳಿಕ ಹೂಡಿಕೆ ಮಾಡುತ್ತಿದ್ದಾರೆ. ಗರಿಷ್ಟ ಸರ್ಚಾರ್ಜ್ ಹಿಂದಕ್ಕೆ ಪಡೆದಿರುವುದು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮರುಬಂಡವಾಳದಂತಹ ಸುಧಾರಣಾ ಕ್ರಮಗಳಿಂದಾಗಿ ಎಫ್‌ಪಿಐ ಒಳಹರಿವು ಹೆಚ್ಚಾಗಿದೆ'' ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್ ಅಡ್ವೈಸರ್ ಇಂಡಿಯಾದ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆದೇಶೀಯ ಮಾರುಕಟ್ಟೆಯಲ್ಲಿ 12,000 ಕೋಟಿ ರುಪಾಯಿ ಹೂಡಿಕೆ

ಜಾಗತಿಕ ಮಟ್ಟದಲ್ಲಿ ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರದ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆಯು ಸಕಾರಾತ್ಮಕ ಚಟುವಟಿಕೆಗೆ ಕಾರಣವಾಗಿದೆ ಎಂದು ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ನ ವಿಶ್ಲೇಷಕ ಅರುಣ್ ಮಂತ್ರಿ ಹೇಳಿದ್ದಾರೆ. ಜೊತೆಗೆ ಸದ್ಯ ಭಾರತದ ಆರ್ಥಿಕತೆಯಲ್ಲಿ ನಡೆಯುತ್ತಿರುವ ಮಂದಗತಿಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎಂಬುದರ ಆಧಾರದ ಮೇಲೆ ಮತ್ತಷ್ಟು ಎಫ್‌ಪಿಐ ಹರಿವುಗಳು ಹೆಚ್ಚಾಗಬಹುದು ಎಂದು ವಿಶ್ಲೇಷಕ ಅರುಣ್ ಮಂತ್ರಿ ತಿಳಿಸಿದರು.

English summary

FPI Infuse Rs 19,203 Crore In First half month of November

Foreign portfolio investors (FPIs) pumped in net sum of 19,203 crore into the domestic capital markets in the first of the November
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X