ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ
ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಜನವರಿ ತಿಂಗಳ ಮೊದಲಾರ್ಧದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 14,866 ಕೋಟಿ ರುಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಕಂಪೆನಿಗಳ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿ ಇಷ್ಟು ಮೊತ್ತದ ಹೂಡಿಕೆ ಹರಿದುಬಂದಿದೆ.
ಡೆಪಾಸಿಟರೀಸ್ ದತ್ತಾಂಶದ ಪ್ರಕಾರ, ಎಫ್ ಪಿಐಗಳು ನಿವ್ವಳವಾಗಿ 18,490 ಕೋಟಿ ರುಪಾಯಿಯನ್ನು ಈಕ್ವಿಟಿಯಲ್ಲಿ ನಿವ್ವಳವಾಗಿ ಹೂಡಿಕೆ ಮಾಡಿದ್ದು, ಆ ಪೈಕಿ ಡೆಟ್ ಸೆಗ್ಮೆಂಟ್ ನಲ್ಲಿ ಜನವರಿ 1ರಿಂದ 15ರ ಮಧ್ಯೆ 3624 ಕೋಟಿ ರುಪಾಯಿಯನ್ನು ಹಿಂತೆಗೆದುಕೊಂಡಿದ್ದಾರೆ. ಈ ಲೆಕ್ಕಾಚಾರದಲ್ಲಿ ಹೇಳಬೇಕೆಂದರೆ, ನಿವ್ವಳ ಹೂಡಿಕೆ 14,866 ಕೋಟಿ ರುಪಾಯಿ ಬಂದಿದೆ.
ದಶಕದಲ್ಲಿ ಮೊದಲ ಬಾರಿ GDP ದಾಟಿದ ಲಿಸ್ಟೆಡ್ ಕಂಪೆನಿ ಮಾರ್ಕೆಟ್ ಬಂಡವಾಳ
ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಗಳಿಕೆ ನಿರೀಕ್ಷೀ, ದೇಶೀಯವಾಗಿ ಕೊರೊನಾ ಪ್ರಕರಣಗಳಲ್ಲಿನ ಇಳಿಕೆ ಮತ್ತಿತರ ಕಾರಣಗಳಿಗೆ ಭಾರತದಂಥ ಬೆಳವಣಿಗೆ ಹಾದಿಯಲ್ಲಿ ಇರುವ ಮಾರುಕಟ್ಟೆಗೆ ಎಫ್ ಪಿಐ ಹರಿದುಬಂದಿದೆ. ಇನ್ನು ಯು.ಎಸ್.ನಲ್ಲಿ ಉತ್ತೇಜನಾ ಘೋಷಣೆ ಮಾಡುವುದು ಸಹ ಎಫ್ ಪಿಐ ಹೂಡಿಕೆಗೆ ಉತ್ತೇಜನ ನೀಡಿದೆ.
ಭಾರತ ಹೊರತುಪಡಿಸಿ ಸಕಾರಾತ್ಮಕ ಎಫ್ ಪಿಐ ಇರುವ ದೇಶಗಳು ಹೀಗಿವೆ: ತೈವಾನ್, ಥಾಯ್ಲೆಂಡ್, ಬ್ರೆಜಿಲ್. ಇನ್ನು ಎಫ್ ಪಿಗಳ ಪಾಲಿಗೆ ಫೇವರಿಟ್ ಆದ ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ನಿಂದ ಹೂಡಿಕೆ ವಾಪಸ್ ಹೋಗಿದೆ.
ಈ ಮಧ್ಯೆ ತಜ್ಞರು ಹೇಳುವ ಪ್ರಕಾರ, ಹೂಡಿಕೆದಾರರು ಲಾರ್ಜ್ ಕ್ಯಾಪ್ ಕಂಪೆನಿಗಳಿಗಿಂತ ಸಣ್ಣ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಉತ್ಸುಕರಾಗಿದ್ದಾರೆ.