For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿಗೆ ಸೇರಿದ 329.66 ಕೋಟಿ ರುಪಾಯಿ ಆಸ್ತಿ ಜಪ್ತಿ

|

ದೇಶಭ್ರಷ್ಟ ಆರ್ಥಿಕ ಅಪರಾಧ ಕಾನೂನು ಅಡಿಯಲ್ಲಿ ವಜ್ರಗಳ ವ್ಯಾಪಾರಿ ನೀರವ್ ಮೋದಿಯಿಂದ 329.66 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಬುಧವಾರ ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂಬೈ ಶಾಖೆಯಲ್ಲಿ ನಡೆದ ಎರಡು ಬಿಲಿಯನ್ ಯುಎಸ್ ಡಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಮತ್ತಿತರರ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ.

 

ಮುಂಬೈನ ವೊರ್ಲಿಯ ಸಮುದ್ರ ಮಹಲ್ ನಲ್ಲಿ ನಾಲ್ಕು ಫ್ಲ್ಯಾಟ್ ಗಳು, ಸಮುದ್ರಕ್ಕೆ ಮುಖ ಮಾಡಿ ನಿಂತಿರುವ ಫಾರ್ಮ್ ಹೌಸ್ ಮತ್ತು ಆಲಿಬಾಗ್ ನಲ್ಲಿ ಭೂಮಿ, ಜೈಸಲ್ಮೇರ್ ನಲ್ಲಿ ವಿಂಡ್ ಮಿಲ್, ಲಂಡನ್ ನಲ್ಲಿ ಫ್ಲ್ಯಾಟ್, ಯುಎಇಯಲ್ಲಿ ವಸತಿ ಫ್ಲ್ಯಾಟ್, ಷೇರುಗಳು ಹಾಗೂ ಬ್ಯಾಂಕ್ ಡೆಪಾಸಿಟ್ ಗಳನ್ನು ಜಪ್ತಿ ಮಾಡಲಾಗಿದೆ.

 

ಬಹುಕೋಟಿ ಹಗರಣಗಳ ಆರೋಪಿ ನೀರವ್‌ ಮೋದಿಯ ಈ ವಸ್ತುಗಳು ಕೋಟಿ ಬೆಲೆಗೆ ಹರಾಜಾಯ್ತು!ಬಹುಕೋಟಿ ಹಗರಣಗಳ ಆರೋಪಿ ನೀರವ್‌ ಮೋದಿಯ ಈ ವಸ್ತುಗಳು ಕೋಟಿ ಬೆಲೆಗೆ ಹರಾಜಾಯ್ತು!

ಆಸ್ತಿ ವಶಕ್ಕೆ ಪಡೆಯುವುದಕ್ಕೆ ಜೂನ್ 8ನೇ ತಾರೀಕಿನಿಂದ ಮುಂಬೈನ ವಿಶೇಷ ಕೋರ್ಟ್ ನಿಂದ ಇ.ಡಿ.ಗೆ ಅಧಿಕಾರ ನೀಡಲಾಗಿತ್ತು. ಇದೇ ಕೋರ್ಟ್ ನಿಂದ ಕಳೆದ ವರ್ಷದ ಡಿಸೆಂಬರ್ 5ನೇ ತಾರೀಕಿನಂದು ನೀರವ್ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು.

ನೀರವ್ ಮೋದಿಗೆ ಸೇರಿದ 329.66 ಕೋಟಿ ರುಪಾಯಿ ಆಸ್ತಿ ಜಪ್ತಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಈ ವರೆಗೆ ನೀರವ್ ಮೋದಿಗೆ ಸೇರಿದ 2,348 ಕೋಟಿ ರುಪಾಯಿ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 49 ವರ್ಷದ ನೀರವ್ ಮೋದಿ ಸದ್ಯಕ್ಕೆ ಯು.ಕೆ. ಜೈಲಿನಲ್ಲಿದ್ದು, 2019ರ ಮಾರ್ಚ್ ನಲ್ಲಿ ಲಂಡನ್ ನಲ್ಲಿ ಬಂಧಿಸಲಾಗಿತ್ತು. ಆತನನ್ನು ಭಾರತಕ್ಕೆ ಹಸ್ತಾಂತರ ಮಾಡದಿರುವಂತೆ ಆತ ಕಾನೂನು ಹೋರಾಟ ನಡೆಸುತ್ತಿದ್ದಾನೆ.

English summary

Fugitive Economic Offender Nirav Modi's 329 Crore Worth Of Property Attached By ED

Fugitive economic offender, diamond businessman Nirav Modi's 329.66 crore worth of property attached by E.D. said by agency.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X