For Quick Alerts
ALLOW NOTIFICATIONS  
For Daily Alerts

ಅಂತೂ ಬಂತು ಚಿನ್ನದ ಜತೆಗೆ ವಜ್ರಗಳನ್ನು ಕೂಡಿಸಿರುವ ಫೇಸ್ ಮಾಸ್ಕ್: ಬೆಲೆ ಎಷ್ಟು?

|

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಫ್ಯಾಷನ್, ಲಕ್ಷುರಿ ಇವುಗಳಿಗೇನೂ ಕೊರತೆ ಆಗಿಲ್ಲ. ಫೇಸ್ ಮಾಸ್ಕ್ ಕಡ್ಡಾಯ ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಮಾಸ್ಕ್ ತಯಾರಿಸುವವರು ಕೂಡ ಖರೀದಿದಾರರನ್ನು ಸೆಳೆಯುವುದಕ್ಕೆ ನಾನಾ ಐಡಿಯಾಗಳನ್ನು ಮಾಡುತ್ತಿದ್ದಾರೆ. ಮದುವೆಗಳಲ್ಲಿ ವಧು- ವರ ಕೂಡ ಫೇಸ್ ಮಾಸ್ಕ್ ಧರಿಸಿರುವುದನ್ನು ನೋಡಬಹುದು. ಈಗ ಡಿಸೈನರ್ ಮಾಸ್ಕ್ ಗಳು ಮಾರ್ಕೆಟ್ ಗೆ ಬಂದಿವೆ.

ಚಿನ್ನದ ಮಾಸ್ಕ್ ಧರಿಸುವ ಶಂಕರ್ ಕುರಡೆ ಕೊರೊನಾಗಿಂತ ಫೇಮಸ್ !ಚಿನ್ನದ ಮಾಸ್ಕ್ ಧರಿಸುವ ಶಂಕರ್ ಕುರಡೆ ಕೊರೊನಾಗಿಂತ ಫೇಮಸ್ !

ಗುಜರಾತ್ ನ ಸೂರತ್ ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಜ್ರಗಳನ್ನು ಒಳಗೊಂಡಂಥ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ. ಇವುಗಳಿಗೆ 1.5ರಿಂದ 4 ಲಕ್ಷ ರುಪಾಯಿ ತನಕ ಬೆಲೆ ನಿಗದಿ ಮಾಡಲಾಗುತ್ತಿದೆ. "ಗ್ರಾಹಕರೊಬ್ಬರು ತಮ್ಮ ಮನೆಯಲ್ಲಿನ ಮದುವೆಗೆ ವಧು- ವರರಿಗೆ ತುಂಬ ವಿಶಿಷ್ಟವಾದ ಫೇಸ್ ಮಾಸ್ಕ್ ಬೇಕು" ಎಂದು ಕೇಳಿದಾಗ ದೀಪಕ್ ಚೋಕ್ಸಿ ಎಂಬ ಆಭರಣ ಮಳಿಗೆ ವ್ಯಾಪಾರಿಗೆ ಈ ಆಲೋಚನೆ ಬಂದಿದೆ.

ಚಿನ್ನದ ಜತೆಗೆ ವಜ್ರದ ಹರಳು

ಚಿನ್ನದ ಜತೆಗೆ ವಜ್ರದ ಹರಳು

ನಮ್ಮ ಗ್ರಾಹಕರೊಬ್ಬರ ಬೇಡಿಕೆಗೆ ತಕ್ಕಂತೆ ಫೇಸ್ ಮಾಸ್ಕ್ ಮಾಡುವುದಕ್ಕೆ ಡಿಸೈನರ್ ಗೆ ತಿಳಿಸಿದೆವು. ಇದೀಗ ಹಬ್ಬದ ಸೀಸನ್ ಶುರುವಾಗಲಿದೆ. ಆದ್ದರಿಂದ ಇನ್ನೂ ಹೆಚ್ಚೆಚ್ಚು ಮಾಸ್ಕ್ ಗಳನ್ನು ಇದೇ ರೀತಿ ವಜ್ರಗಳನ್ನು ಹರಳನ್ನು ಒಳಗೊಂಡಂತೆ ರೂಪಿಸಲಾಗುವುದು. ಇಂಥ ಮಾಸ್ಕ್ ಗಳಿಗೆ ಜನರಿಂದ ಬೇಡಿಕೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

1.5 ಲಕ್ಷದಿಂದ 4 ಲಕ್ಷ ರುಪಾಯಿ

1.5 ಲಕ್ಷದಿಂದ 4 ಲಕ್ಷ ರುಪಾಯಿ

ಈ ಮಾಸ್ಕ್ ಗಳಿಗೆ ಶುದ್ಧ ವಜ್ರ ಅಥವಾ ಅಮೆರಿಕನ್ ಡೈಮಂಡ್ ಹಾಗೂ ಚಿನ್ನವನ್ನು ಬಳಸಲಾಗುತ್ತದೆ. ಅಮೆರಿಕನ್ ಡೈಮಂಡ್ ಜತೆಗೆ ಚಿನ್ನವನ್ನು ಬಳಸುವ ಮಾಸ್ಕ್ ಗೆ 1.5 ಲಕ್ಷ ರುಪಾಯಿ ಆಗುತ್ತದೆ. ಇನ್ನು ಮತ್ತೊಂದು ಮಾಸ್ಕ್ ವೈಟ್ ಗೋಲ್ಡ್ ಜತೆಗೆ ಅಸಲಿ ವಜ್ರವನ್ನು ಬಳಸಿ ಮಾಡಲಾಗುತ್ತದೆ. ಅದಕ್ಕೆ 4 ಲಕ್ಷ ರುಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಸರ್ಕಾರದ ಸೂಚನೆಯಂತೆಯೇ ತಯಾರಿ

ಸರ್ಕಾರದ ಸೂಚನೆಯಂತೆಯೇ ತಯಾರಿ

ಅಂದ ಹಾಗೆ ಈ ಮಾಸ್ಕ್ ಗಳು ಸರ್ಕಾರದ ಮಾರ್ಗದರ್ಶನದ ರೀತಿಯಲ್ಲೇ ಬಟ್ಟೆಯಲ್ಲಿ ತಯಾರಿಸಲಾಗಿರುತ್ತದೆ. ಅದರ ಮೇಲೆ ಈ ಚಿನ್ನ- ವಜ್ರ ಎಲ್ಲವನ್ನೂ ಹಾಕಲಾಗುತ್ತದೆ. ಇವುಗಳನ್ನು ಆ ಬಟ್ಟೆಯಿಂದ ತೆಗೆದು, ಬೇರೆಯದಕ್ಕೆ ಹಾಕಬಹುದು. ಆಭರಣ ಖರೀದಿಗೆಂದು ಬರುತ್ತಿರುವವರನ್ನು ಈ ವಜ್ರ- ಚಿನ್ನದ ಮಾಸ್ಕ್ ಗಳು ಸೆಳೆಯುತ್ತಿವೆ. ಮದುವೆಗೆ ತಮ್ಮ ದಿರಿಸಿಗೆ ಹೊಂದಾಣಿಕೆ ಆಗುವಂಥ ಬಣ್ಣದ ಬಟ್ಟೆಯಲ್ಲಿ ಮಾಸ್ಕ್ ಖರೀದಿಸುವ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ಆಭರಣ ವ್ಯಾಪಾರಿಗಳು.

ಶಂಕರ್ ಕುರಡೆ ಸುದ್ದಿ ಆಗಿದ್ದರು

ಶಂಕರ್ ಕುರಡೆ ಸುದ್ದಿ ಆಗಿದ್ದರು

ಕಳೆದ ತಿಂಗಳು ಪುಣೆಯ ನಿವಾಸಿ ಶಂಕರ್ ಕುರಡೆ 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಖರೀದಿಸಿ ಸುದ್ದಿಯಾಗಿದ್ದರು. ಬಹುಶಃ ಅದು ಟ್ರೆಂಡ್ ನ ಆರಂಭವಾಗಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಚಿನ್ನದ ಜತೆಗೆ ವಜ್ರ ಕೂಡ ಸೇರ್ಪಡೆಯಾಗುತ್ತಿದೆ. ಕೊರೊನಾ ಕಾರಣಕ್ಕೆ ಬೇಡಿಕೆ ಕುಸಿತವಾಗಿದ್ದ ಚಿನ್ನದ ಆಭರಣಗಳಿಗೆ ಇವುಗಳಿಂದಾದರೂ ಭರವಸೆಯ ಬೆಳ್ಳಿ ಗೀಟು ಕಾಣಿಸಿಕೊಳ್ಳಬಹುದೇನೋ!

English summary

Gold, Diamond Stud Face Mask Manufactured In Surat

Now, gold- diamond stud face mask manufactured in Surat during Corona as fashion trend.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X