For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿದಾರರಿಗೆ ಉತ್ತಮ ಅವಕಾಶ

|

ಅಕ್ಷಯ ತೃತೀಯ ಬಂತೆದರೆ ಆಭರಣದ ವ್ಯಾಪಾರಿಗಳಿಗೆ ಒಳ್ಳೆಯ ಬಿಜಿನೆಸ್ ಇರುತ್ತದೆ. ಆದರೆ ಈ ಬಾರಿ ಕಳೆದ ವರ್ಷದಂತೆ ಕೊರೊನಾ ಕರಿಛಾಯೆ ಇರುವುದರಿಂದ ಚಿನ್ನದ ವ್ಯಾಪಾರ-ವಹಿವಾಟು ಭಾರೀ ಪ್ರಮಾಣದಲ್ಲಿ ತಗ್ಗಿದೆ. ಇಷ್ಟಾದರೂ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸದಿದ್ದರೇ ಹೇಗೆ ಎನ್ನುವವರಿಗೆ ಗುಡ್‌ನ್ಯೂಸ್ ಇಲ್ಲಿದೆ.

 

ಅಕ್ಷಯ ತೃತೀಯ ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬರುತ್ತದೆ. ಅದರಂತೆ ಈ ಬಾರಿಯ ಅಕ್ಷಯ ತೃತೀಯವು ನಾಳೆ ಅಂದರೆ 2021ರ ಮೇ 14ರ ಶುಕ್ರವಾರದಂದು ಬಂದಿದೆ. ಭಾರತದಲ್ಲಿ, ಚಿನ್ನವನ್ನು ಖರೀದಿಸಲು (ಭೌತಿಕ ಮತ್ತು ಎಲೆಕ್ಟ್ರಾನಿಕ್ ಎರಡೂ) ಶುಭ ದಿನವಾಗಿದೆ. ಆದ್ದರಿಂದ, ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿದಾರರಿಗೆ, ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ (ಎಂಸಿಎಕ್ಸ್‌) ನಲ್ಲಿನ ಚಿನ್ನದ ಬೆಲೆ ಬುಧವಾರ 10 ಗ್ರಾಂಗೆ 161 ರೂಪಾಯಿ ಇಳಿದ 47,472 ರೂಪಾಯಿಗೆ ತಲುಪಿದೆ.

ಚಿನ್ನ ಖರೀದಿಗೆ ಉತ್ತಮ ಅವಕಾಶ

ಚಿನ್ನ ಖರೀದಿಗೆ ಉತ್ತಮ ಅವಕಾಶ

ಕಮೋಡಿಟಿ ತಜ್ಞರ ಪ್ರಕಾರ, ಅಕ್ಷಯ ತೃತೀಯದಲ್ಲಿ ಅಮೂಲ್ಯವಾದ ಲೋಹದ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ. ಏಕೆಂದರೆ ಅಲ್ಪಾವಧಿಯ, ಮಧ್ಯಕಾಲೀನ ಮತ್ತು ದೀರ್ಘಾವಧಿಯ ಚಿನ್ನದ ಬೆಲೆಯ ದೃಷ್ಟಿಕೋನವು ಸಕಾರಾತ್ಮಕವಾಗಿ ಕಾಣುತ್ತಿದೆ ಮತ್ತು ಹೂಡಿಕೆದಾರರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಸಲಹೆ ನೀಡಿದ್ದಾರೆ.

"ನಿನ್ನೆ, ಪ್ರಮುಖ ಜಾಗತಿಕ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಏರಿಕೆಯನ್ನು ಬೆಂಬಲಿಸುತ್ತಿರುವುದರಿಂದ ಚಿನ್ನದ ಬೆಲೆ ಕುಸಿದಿದ್ದು, ಇದು ಮುಂದುವರಿಯಲಿದೆ'' ಎಂದು ಐಐಎಫ್‌ಎಲ್ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ವ್ಯಾಪಾರದ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿದ್ದಾರೆ.

 

ಪ್ರತಿ ಔನ್ಸ್‌ಗೆ ಚಿನ್ನದ ಬೆಲೆ ಎಷ್ಟು?

ಪ್ರತಿ ಔನ್ಸ್‌ಗೆ ಚಿನ್ನದ ಬೆಲೆ ಎಷ್ಟು?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 1,822 ರ ಡಾಲರ್ ವಹಿವಾಟು ನಡೆಸುತ್ತಿದೆ ಮತ್ತು ಎಂಸಿಎಕ್ಸ್ ಪರಿಭಾಷೆಯಲ್ಲಿ, ಧನಾತ್ಮಕ ದೃಷ್ಟಿಕೋನದೊಂದಿಗೆ ಚಿನ್ನದ ಬೆಲೆ ಪ್ರತಿ ಗ್ರಾಂಗೆ 46,800 ರಿಂದ 48,000 ರೂಪಾಯಿವರೆಗೆ ಇರುತ್ತದೆ.

ಹೀಗಾಗಿ ಅಕ್ಷಯ ತೃತೀಯದಲ್ಲಿ ಚಿನ್ನವನ್ನು ಖರೀದಿಸಲು ಬಯಸುವ ಹೂಡಿಕೆದಾರರಿಗೆ ಒಂದು ಉತ್ತಮ 'ಅವಕಾಶ' ಎಂಬುದು ತಜ್ಞರ ಅಭಿಪ್ರಾಯವಾಗಿದೆ.

 

ದೀರ್ಘಾವಧಿಯಲ್ಲಿ ಹಳದಿ ಲೋಹದ ಬೆಲೆ ಏರಿಕೆ
 

ದೀರ್ಘಾವಧಿಯಲ್ಲಿ ಹಳದಿ ಲೋಹದ ಬೆಲೆ ಏರಿಕೆ

ಹಳದಿ ಲೋಹದ ಬೆಲೆ 10 ಗ್ರಾಂಗೆ 52,000 ರೂಪಾಯಿವರೆಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಮ ಅವಧಿಯಲ್ಲಿ, ದೀರ್ಘಾವಧಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 55,000 ರಿಂದ, 60,000 ರೂಪಾಯಿವರೆಗೆ ಏರಿಕೆಯಾಗಲಿದೆ.

ಅಕ್ಷಯ ತೃತೀಯ 2021: ಚಿನ್ನ ಖರೀದಿಗೆ ಉತ್ತಮ ಮುಹೂರ್ತ ಯಾವುದು?ಅಕ್ಷಯ ತೃತೀಯ 2021: ಚಿನ್ನ ಖರೀದಿಗೆ ಉತ್ತಮ ಮುಹೂರ್ತ ಯಾವುದು?

2021ರ ಅಂತ್ಯಕ್ಕೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ?

2021ರ ಅಂತ್ಯಕ್ಕೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ?

ರಿಲಿಗೇರ್ ಬ್ರೋಕಿಂಗ್‌ನ ಸುಗಂಧ ಸಚ್‌ದೇವ ಅವರ ಪ್ರಕಾರ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಬೆಳ್ಳಿ ಬೆಲೆಯು ಸಕಾರಾತ್ಮಕ ದೃಷ್ಟಿಕೋನದಲ್ಲಿದ್ದು, ಬೆಲೆ ಏರಿಕೆ ಸಾಧ್ಯತೆಯಿದೆ. ಖರೀದಿದಾರರಿಗೆ ಮಧ್ಯಮ ಅವಧಿಯಲ್ಲಿ ಪ್ರತಿ ಕೆಜಿ 75,500 ರಿಂದ, 76,000 ರವರೆಗೆ ಖರೀದಿಸಲು ಸಲಹೆ ನೀಡಿದ್ದು, 2021 ರ ಅಂತ್ಯದ ವೇಳೆಗೆ ಪ್ರತಿ ಕೆ.ಜಿ.ಗೆ 85,000 ರೂಪಾಯಿ ತಲುಪುವ ಸಾಧ್ಯತೆಯಿದೆ.

ಅಕ್ಷಯ ತೃತೀಯ ದಿನದಂದು ಚಿನ್ನ ಏಕೆ ಖರೀದಿಸುತ್ತಾರೆ?

ಅಕ್ಷಯ ತೃತೀಯ ದಿನದಂದು ಚಿನ್ನ ಏಕೆ ಖರೀದಿಸುತ್ತಾರೆ?

ಈ ದಿನವನ್ನು ತ್ರೇತಾಯುಗ ಮಾತ್ರವಲ್ಲದೇ ಸತ್ಯ ಯುಗ, ದ್ವಾಪರ ಯುಗ ಹಾಗೂ ಕಲಿಯುಗದಲ್ಲೂ ಈ ದಿನವನ್ನು ವಿಶೇಷವಾಗಿ ಗುರುತಿಸಲಾಗಿದೆ. ಹಾಗಾಗಿ ಯಾವುದೇ ಒಂದು ಕೆಲಸವನ್ನು ಈ ದಿನದಲ್ಲಿ ಆರಂಭಿಸಿದರೆ ಖಂಡಿತವಾಗಿಯೂ ದೈವ ಕೃಪೆಯಿಂದ ಅದು ಯಶಸ್ಸಾಗಬಹುದು ಎಂಬ ನಂಬಿಕೆಯಿದೆ. ಅದರಲ್ಲೂ ಈ ದಿನದಂದು ಚಿನ್ನ ಖರೀದಿಸಿದರೆ ವರ್ಷ ಪೂರ ನಿಮ್ಮ ಆದೃಷ್ಟ ಖುಲಾಯಿಸಿ ಚಿನ್ನವನ್ನು ಮತ್ತೆ ಮತ್ತೆ ಖರೀದಿ ಮಾಡಬಹುದು ಎಂದು ನಂಬಲಾಗಿದೆ. ಅಂದರೆ ಲಕ್ಷ್ಮಿ ಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ ಎಂದರ್ಥ.

English summary

Gold Price Down: Opportunity For Akshaya Tritiya Buyers says Experts

for those yellow metal buyers who are planning to accumulate further on Akshaya Tritiya, there is a piece of good news for them as the gold price at MCX Dipped Rs 161
Story first published: Thursday, May 13, 2021, 12:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X