For Quick Alerts
ALLOW NOTIFICATIONS  
For Daily Alerts

ಅಪಾರ್ಟ್ ಮೆಂಟ್ ಖರೀದಿಸುವವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್

|

ಕೈಗೆಟುಕುವ ಬೆಲೆಯಲ್ಲಿನ ಮನೆಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಸರ್ಕಾರವು ನೋಂದಣಿ- ಮುದ್ರಾಂಕ ಶುಲ್ಕವನ್ನು(ಸ್ಟ್ಯಾಂಪ್ ಡ್ಯೂಟಿ) ಇಳಿಕೆ ಮಾಡಲು ನಿರ್ಧರಿಸಿದೆ. ಇದು ಹೊಸ ಅಪಾರ್ಟ್ ಮೆಂಟ್ ಗಳು, ಅದರಲ್ಲೂ 35 ಲಕ್ಷ ರುಪಾಯಿಯೊಳಗೆ ಬೆಲೆ ಇರುವಂಥದ್ದಕ್ಕೆ ಅನ್ವಯಿಸುತ್ತದೆ. ಸಂಬಂಧಪಟ್ಟ ಇಲಾಖೆ ಜತೆ ಮುಖ್ಯಮಂತ್ರಿ ಸಭೆ ನಡೆಸುವ ವೇಳೆ ಈ ತೀರ್ಮಾನ ಕೈಗೊಳ್ಳಲಾಯಿತು.

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

ಇಪ್ಪತ್ತು ಲಕ್ಷ ರುಪಾಯಿಯೊಳಗಿನ ಅಪಾರ್ಟ್ ಮೆಂಟ್ ಗಳಿಗೆ, ಮೊದಲ ಬಾರಿಗೆ ನೋಂದಣಿ ಮಾಡಿಸುತ್ತಿದ್ದಲ್ಲಿ ನೋಂದಣಿ ಶುಲ್ಕವು ಸದ್ಯಕ್ಕೆ ಇರುವ 5 ಪರ್ಸೆಂಟ್ ನಿಂದ 2 ಪರ್ಸೆಂಟ್ ಗೆ ಇಳಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಇನ್ನು 21ರಿಂದ 35 ಲಕ್ಷ ರುಪಾಯಿಯೊಳಗಿನ ಅಪಾರ್ಟ್ ಮೆಂಟ್ ಗಳ ನೋಂದಣಿ ಶುಲ್ಕವನ್ನು 5 ಪರ್ಸೆಂಟ್ ನಿಂದ 3 ಪರ್ಸೆಂಟ್ ಗೆ ಇಳಿಸಲಾಗಿದೆ.

ಅಪಾರ್ಟ್ ಮೆಂಟ್ ಖರೀದಿಸುವವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್

ಕೊರೊನಾದ ಕಾರಣಕ್ಕೆ 2020- 21ನೇ ಸಾಲಿನಲ್ಲಿ ನೋಂದಣಿ- ಮುದ್ರಾಂಕ ಇಲಾಖೆ ಆದಾಯದಲ್ಲಿ ಇಳಿಕೆ ಆಗುವ ಅಂದಾಜು ಮಾಡಲಾಗಿದೆ. ಅದು ಕೂಡ ನಿರೀಕ್ಷೆಗಿಂತ 3524 ಕೋಟಿ ರುಪಾಯಿ ಆದಾಯ ಕಡಿಮೆ ಆಗಬಹುದು ಎಂಬ ಅಂದಾಜಿದೆ. ಅಂದ ಹಾಗೆ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ 12,655 ಕೋಟಿ ರುಪಾಯಿ ವರಮಾನದ ನಿರೀಕ್ಷೆ ಮಾಡಿತ್ತು.

English summary

Good News: Karnataka Government Reduced Stamp Duty Of Affordable Housing

Corona effect: Karnataka CM BS Yediyurappa directed to reduce stamp duty of affordable housing.
Story first published: Wednesday, May 27, 2020, 8:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X