For Quick Alerts
ALLOW NOTIFICATIONS  
For Daily Alerts

ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಕ್ಯೂ ಇದ್ರೆ ಟೋಲ್ ತೆರಿಗೆ ಕಟ್ಟಬೇಕಾಗಿಲ್ಲ!

|

ವಾಹನ ಸವಾರರಿಗೆ ಗುಡ್‌ನ್ಯೂಸ್ ಇಲ್ಲಿದೆ. ಟೋಲ್ ಪ್ಲಾಜಾಗಳಲ್ಲಿ ಕ್ಯೂ ನಿಂತು ಕಿರಿಕಿರಿ ಅನುಭವಿಸುವ ಕಾಲ ದೂರವಾಗುವ ಸೂಚನೆ ಸಿಕ್ಕಿದೆ. ಇನ್ಮುಂದೆ 100 ಮೀಟರ್‌ಗಿಂತ ಹೆಚ್ಚು ದೂರ ವಾಹನಗಳ ಕ್ಯೂ ಇದ್ರೆ ಟೋಲ್ ಪ್ಲಾಜಾಗಳಲ್ಲಿ ಟೋಲ್ ಫೀ ಕಟ್ಟಬೇಕಾಗಿಲ್ಲ.

ಚಿನ್ನದ ಬೆಲೆ ಭಾರೀ ಜಿಗಿತ: ಮೇ 26ರ ಬೆಲೆ ಹೀಗಿದೆಚಿನ್ನದ ಬೆಲೆ ಭಾರೀ ಜಿಗಿತ: ಮೇ 26ರ ಬೆಲೆ ಹೀಗಿದೆ

ಟೋಲ್ ಪ್ಲಾಜಾಗಳಿಂದ 100 ಮೀಟರ್ ದೂರದಲ್ಲಿ ಹಳದಿ ರೇಖೆಯನ್ನು ಎಳೆದಿರಲಾಗುತ್ತದೆ. ಆ ರೇಖೆಗಿಂತಲೂ ಹೆಚ್ಚು ವಾಹನಗಳು ಕ್ಯೂನಲ್ಲಿದ್ದರೆ ಆ ವಾಹನಗಳಿಗೆ ಟೋಲ್‌ನಲ್ಲಿ ತೆರಿಗೆ ಪಾವತಿಸಬೇಕಾಗಿಲ್ಲ. ವಾಹನಗಳು ಸರಾಗವಾಗಿ ಸಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಕ್ಯೂ ಇದ್ರೆ ತೆರಿಗೆ ಕಟ್ಟಬೇಕಾಗಿಲ್ಲ!

ಹಾಗಂದ ಮಾತ್ರಕ್ಕೆ ಈ ನಿಯಮ ಹೊಸತೇನೂ ಅಲ್ಲ. ಎರಡು ವರ್ಷಗಳ ಹಿಂದೆ ಆರ್‌ಟಿಐ ಮೂಲಕ ಕೇಳಲಾದ ಮಾಹಿತಿಯಲ್ಲಿ ಟೋಲ್ ಪ್ಲಾಜಾಗಳಲ್ಲಿ 3 ನಿಮಿಷಕ್ಕಿಂತ ಹೆಚ್ಚು ಕಾಯುವಂತಾಗಬಾರದು ಎಂಬ ನಿಯಮವಿದೆ. ಆದರೆ ಈ ನಿಯಮಗಳು ವಾಸ್ತವದಲ್ಲಿ ಜಾರಿಯಾಗಿಲ್ಲ, ಜನರಿಗೆ ಈ ಬಗ್ಗೆ ಯಾವುದೇ ಅರಿವು ಇಲ್ಲ.

ಇತ್ತೀಚೆಗಷ್ಟೇ ದೇಶಾದ್ಯಂತ ಒಂದು ವರ್ಷದೊಳಗೆ ಎಲ್ಲಾ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಿರುವ ಟೋಲ್ ಬೂತ್‌ಗಳನ್ನು ತೆಗೆದುಹಾಕಿ, ಜಿಪಿಎಸ್‌ ಮೂಲಕ ಟೋಲ್ ಸಂಗ್ರಹ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಮೂಲಕ ರಾ. ಹೆದ್ದಾರಿಗಳಲ್ಲಿ ವಾಹನ ಸಂಚಾರ ಮತ್ತಷ್ಟು ಸರಾಗಗೊಳ್ಳಲಿದೆ.

2016ರಲ್ಲಿ ಮೊದಲ ಬಾರಿಗೆ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಲಾಯಿತು. ಆದರೆ ಫೆಬ್ರವರಿ 16, 2021 ರಿಂದ, ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

English summary

Good News: No Toll Tax If Queue Longer Than 100 Meters

In what would come as a respite for the motorists, they will not have to pay tax at the Toll Plazas if the queue is longer than 100 meters.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X