For Quick Alerts
ALLOW NOTIFICATIONS  
For Daily Alerts

ಗುಡ್ ಇಯರ್ ನಿಂದ 80 ರುಪಾಯಿ ಡಿವಿಡೆಂಡ್ ಘೋಷಣೆ

|

ಗುಡ್ ಇಯರ್ ಇಂಡಿಯಾ ಲಿಮಿಟೆಡ್ ಕಂಪೆನಿ ಷೇರು ಸೋಮವಾರ (ಡಿಸೆಂಬರ್ 7, 2020) 19% ಏರಿಕೆ ದಾಖಲಿಸಿ, 877.45 ರುಪಾಯಿಯಿಂದ 1035 ರುಪಾಯಿ ತನಕ ಏರಿಕೆ ಕಂಡಿತು. 2020- 21ನೇ ಸಾಲಿಗೆ ಕಂಪೆನಿಯ ಆಡಳಿತ ಮಂಡಳಿಯಿಂದ 10 ರುಪಾಯಿ ಮುಖಬೆಲೆಯ ಷೇರಿಗೆ 80 ರುಪಾಯಿ ಇಂಟರಿಮ್ ಡಿವಿಡೆಂಡ್ (ಮಧ್ಯಂತರ ಲಾಭಾಂಶ) ಘೋಷಣೆ ಮಾಡಲಾಗಿದೆ.

 

ಡಿವಿಡೆಂಡ್ ವಿತರಣೆಗೆ ಡಿಸೆಂಬರ್ 15ನೇ ತಾರೀಕು ದಿನಾಂಕ ನಿಗದಿ ಮಾಡಲಾಗಿದೆ. "ಮಧ್ಯಂತರ ಲಾಭಾಂಶವನ್ನು ನಿಗದಿತ ಕಾಲಾವಧಿಯಲ್ಲಿ ಪಾವತಿಸಲಾಗುವುದು ಮತ್ತು ಡಿವಿಡೆಂಡ್ ಪಾವತಿಗೆ ಡಿಸೆಂಬರ್ 15, 2020 ಅನ್ನು ದಿನ ನಿಗದಿ ಮಾಡಲಾಗಿದೆ. ಈ ಉದ್ದೇಶಕ್ಕಾಗಿಯೇ ಡಿಸೆಂಬರ್ 2, 2020ಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ."

 

"ವಾಣಿಜ್ಯ ಬ್ಯಾಂಕ್, ಕೋಆಪರೇಟಿವ್ ಬ್ಯಾಂಕ್ ನಿಂದ ಈ ವರ್ಷ ಡಿವಿಡೆಂಡ್ ಇಲ್ಲ"

ಯುಎಸ್ ಮೂಲದ ಟೈರ್ ಕಂಪೆನಿ ಗುಡ್ ಇಯರ್ ಈಚೆಗೆ ಭಾರತದಲ್ಲಿ ಆಟೋಮೋಟಿವ್ ಲುಬ್ರಿಕೆಂಟ್ಸ್ ಸೆಗ್ಮೆಂಟ್ ಪ್ರವೇಶಿಸಿದೆ. ಕಂಪೆನಿಯು ಅಶ್ಯುರೆನ್ಸ್ ಇಂಟರ್ ನ್ಯಾಷನಲ್ ಜತೆಗೆ ಸಹಭಾಗಿತ್ವ ವಹಿಸಿದ್ದು, ಅದು ಸತ್ಯ ಗ್ರೂಪ್ ನ ಭಾಗವಾಗಿದೆ. ಹೊಸ ಬಗೆಯ ಎಂಜಿನ್ ಆಯಿಲ್ ಗಳನ್ನು ಉತ್ಪಾದಿಸುತ್ತಿದೆ. ಗುಡ್ ಇಯರ್ ಟೈರ್ ಉತ್ಪನ್ನಗಳ ಜತೆಗೆ ಆಯಿಲ್ ಕೂಡ ಉತ್ಪಾದಿಸಿ, ವಿತರಿಸುತ್ತದೆ.

ಗುಡ್ ಇಯರ್ ನಿಂದ 80 ರುಪಾಯಿ ಡಿವಿಡೆಂಡ್ ಘೋಷಣೆ

ವಾಣಿಜ್ಯ, ಪ್ರಯಾಣಿಕರ ವಾಹನ ಮತ್ತು ದ್ವಿಚಕ್ರ ವಾಹನ ಸೇರಿ ಎಲ್ಲ ಬಗೆಯ ವಾಣಿಜ್ಯ ಮತ್ತು ಪ್ರಯಾಣಿಕರ ವಾಹನಗಳಿಗೆ ಕಂಪೆನಿಯು ಲುಬ್ರಿಕೆಂಟ್ಸ್ ಉತ್ಪನ್ನಗಳನ್ನು ಒದಗಿಸುತ್ತದೆ.

English summary

Goodyear India Announces Rs 80 Interim Dividend

US based tyre company Goodyear India announces Rs 80 interim dividend on Monday (December 7, 2020).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X