For Quick Alerts
ALLOW NOTIFICATIONS  
For Daily Alerts

ವಲಸಿಗರ ಉದ್ಯೋಗ ವೀಸಾ ಅಮಾನತು ಮಾಡಿದ ಟ್ರಂಪ್ ಕ್ರಮಕ್ಕೆ ಪಿಚೈ ಬೇಸರ

|

ಎಚ್-1ಬಿ ವೀಸಾ ಸೇರಿದಂತೆ ವಿದೇಶಿ ಉದ್ಯೋಗ ವೀಸಾವನ್ನು ಈ ವರ್ಷದ ಕೊನೆ ತನಕ ಅಮಾನತು ಮಾಡಿದ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಚೆಗಿನ ಆದೇಶದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಬೇಸರ ವ್ಯಕ್ತಪಡಿಸಿದ್ದಾರೆ. "ಅಮೆರಿಕದ ಆರ್ಥಿಕ ಯಶಸ್ಸಿಗೆ ವಲಸಿಗರ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನದಲ್ಲಿ ಜಾಗತಿಕ ನಾಯಕತ್ವ ವಹಿಸಲು ಕಾರಣವಾಗಿದ್ದಾರೆ. ಆ ಕಾರಣಕ್ಕೆ ಇಂದು ಗೂಗಲ್ ಕಂಪೆನಿ ಇದೆ" ಎಂದು ಟ್ವೀಟ್ ಮಾಡಿದ್ದಾರೆ.

ಇಂದಿನ ಘೋಷಣೆಯಿಂದ ಬೇಸರವಾಗಿದೆ. ನಾವು ವಲಸಿಗರ ಪರವಾಗಿ ನಿಲ್ಲುತ್ತೇವೆ ಹಾಗೂ ಎಲ್ಲರಿಗೂ ಅವಕಾಶ ವಿಸ್ತರಿಸಲು ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ವಿಶ್ವದಲ್ಲಿ ಹೆಚ್ಚು ವೇತನ ಪಡೆಯುವ ಸಿಇಒ ಪಟ್ಟಿಯಲ್ಲಿ ಸುಂದರ್ ಪಿಚೈವಿಶ್ವದಲ್ಲಿ ಹೆಚ್ಚು ವೇತನ ಪಡೆಯುವ ಸಿಇಒ ಪಟ್ಟಿಯಲ್ಲಿ ಸುಂದರ್ ಪಿಚೈ

ಜನಾಂಗೀಯ ದ್ವೇಷವನ್ನು ಬಿತ್ತಿದ ಡೊನಾಲ್ಡ್ ಟ್ರಂಪ್ ಮತ್ತು ಸ್ಟೀಫನ್ ಮಿಲ್ಲರ್ ಮನೋಭಾವದ ಹೊಸ ಶಕೆ ಇದು ಎಂದು ಪ್ರಯಾಣ ನಿರ್ಬಂಧದ ಬಗ್ಗೆ ನಾಗರಿಕ ಹಾಗೂ ಮಾನವಹಕ್ಕುಗಳ ದ ಲೀಡರ್ ಷಿಪ್ ಕಾನ್ಫರೆನ್ಸ್ ಸಿಇಒ ಹಾಗೂ ಅಧ್ಯಕ್ಷೆ ವನಿತಾ ಗುಪ್ತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಲಸಿಗರ ಉದ್ಯೋಗ ವೀಸಾ ಅಮಾನತು ಮಾಡಿದ ಟ್ರಂಪ್ ಕ್ರಮಕ್ಕೆ ಪಿಚೈ ಬೇಸರ

ಕೊರೊನಾ ನಿಯಂತ್ರಿಸಲು ವಿಫಲರಾಗಿರುವುದೂ ಸೇರಿ ಹಲವು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ಇಂಥ ಪ್ರಯತ್ನಗಳು ಕೆಲಸಕ್ಕೆ ಬರಲ್ಲ. ವಲಸಿಗರನ್ನು ಗುರಿ ಮಾಡಿಕೊಂಡು ರೂಪಿಸುತ್ತಿರುವ ಇಂಥ ಇಂಥ ಕಾನೂನು ಬಾಹಿರ ನಿಯಮಗಳನ್ನು ಕೋರ್ಟ್ ಗಳೇ ತಡೆ ಹಿಡಿಯುತ್ತವೆ ಎಂದಿದ್ದಾರೆ.

ಅಮೆರಿಕದ ಎಲ್ಲ ಬಗೆಯ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಿ ಡೊನಾಲ್ಡ್ ಟ್ರಂಪ್ ಸೋಮವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಬೇಕು ಎಂದಿರುವವರ ಮೇಲೆ ಪರಿಣಾಮ ಆಗುತ್ತದೆ. ಇದರ ಜತೆಗೆ ಆರ್ಥಿಕತೆ ಮೇಲೂ ಪ್ರಭಾವ ಬೀರಲಿದೆ.

English summary

Google CEO Sundar Pichai Expressed Disappointment Over Donald Trump's Visa Ban Order

After U.S. president Donald Trump order for ban on all job visas, Google CEO Sundar Pichai expressed disappointment on this decision.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X