For Quick Alerts
ALLOW NOTIFICATIONS  
For Daily Alerts

ಪದ್ಮಭೂಷಣ ಪಡೆದ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದೇನು?

|

ಗೂಗಲ್ ಸಿಇಒ ಸುಂದರ್ ಪಿಚೈಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಅತೀ ಶ್ರೇಷ್ಠ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಯುಎಸ್‌ಗೆ ಭಾರತದ ರಾಯಭಾರಿಯಾಗಿರುವ ತಾರಂಜೀತ್ ಸಿಂಗ್ ಸಂಧು, ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ್ದಾರೆ.

 

ಗಣರಾಜ್ಯೋತ್ಸವ ದಿನದಂದು ಭಾರತದ ಮೂರನೇ ಅತೀ ದೊಡ್ಡ ಪ್ರಶಸ್ತಿಯಾದ ಪದ್ಮ ಭೂಷಣ ವಿಜೇತರನ್ನಾಗಿ ಸುಂದರ್ ಪಿಚೈ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಟ್ರೇಡ್ ಹಾಗೂ ಇಂಡಸ್ಟ್ರೀ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತದ ಕೌನ್ಸಲ್ ಜನರಲ್ ಟಿ ವಿ ನಾಗೇಂದ್ರ, ಸುಂದರ್ ಪಿಚೈ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

 

 ಜಗತ್ತು ಬದಲಿಸಲು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ 3 ಸೂತ್ರ ಜಗತ್ತು ಬದಲಿಸಲು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ 3 ಸೂತ್ರ

ಸುಂದರ್ ಪಿಚೈಗೆ ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ ಬಳಿಕ ಟ್ವೀಟ್ ಮಾಡಿದ ತಾರಂಜೀತ್ ಸಿಂಗ್ ಸಧು, "ಗೂಗಲ್ & ಆಲ್ಫಾಬೈಟ್ ಸಿಇಒ ಸುಂದರ್ ಪಿಚೈ ಅವರಿಗೆ ಸ್ಯಾನ್ ಫ್ರಾನ್ಸಿಸ್ಕೋರದಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ಹಸ್ತಾಂತರ ಮಾಡಿರುವುದು ನನಗೆ ಸಂತೋಷವಾಗಿದೆ," ಎಂದು ತಿಳಿಸಿದ್ದಾರೆ.

 ಪದ್ಮಭೂಷಣ ಪಡೆದ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದೇನು?

ಹಾಗೆಯೇ, "ಮದುರೈನಿಂದ ಕಣಿವೆ ಎತ್ತರಕ್ಕೂ ಸುಂದರ್ ಪಿಚೈ ಅವರ ಸ್ಪೂರ್ತಿಧಾಯಕ ಜೀವನ ಸಂಚಾರವು ಆರ್ಥಿಕ ಹಾಗೂ ಟೆಕ್ ಕ್ಷೇತ್ರವನ್ನು ಬಲಗೊಳಿಸಿದೆ. ಜಾಗತಿಕವಾಗಿ ಭಾರತದ ಪ್ರತಿಭೆಯ ಕೊಡುಗೆಯನ್ನು ದೃಢೀಕರಿಸುತ್ತದೆ," ಎಂದು ಕೂಡಾ ಸಂಧು ಹೇಳಿದ್ದಾರೆ.

ಸುಂದರ್ ಪಿಚೈ ಹೇಳುವುದು ಏನು?

"ನನಗೆ ಈ ಗೌರವ ನೀಡಿದ ಭಾರತ ಸರ್ಕಾರಕ್ಕೆ ಹಾಗೂ ಭಾರತದ ಜನರಿಗೆ ನಾನು ಅಭಾರಿಯಾಗಿದ್ದೇನೆ. ನನ್ನನ್ನು ಬೆಳೆಸಿದ ದೇಶದಿಂದ ಈ ರೀತಿಯಾಗಿ ಗೌರವ ಪಡೆಯುವುದು ನನಗೆ ಸಂತೋಷವಾಗಿದೆ," ಎಂದು 50 ವರ್ಷ ಪ್ರಾಯದ ಸುಂದರ್ ಪಿಚೈ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಹೇಳಿದ್ದಾರೆ.

"ಭಾರತ ನನ್ನ ಭಾಗವಾಗಿದೆ. ನಾನು ಎಲ್ಲಿ ಹೋದರು ಭಾರತ ನನ್ನೊಂದಿಗೆ ಇದೆ. ಈ ಪ್ರಶಸ್ತಿಯನ್ನು ನಾನು ಸುರಕ್ಷಿತವಾಗಗಿ ಇರಿಸುತ್ತೇನೆ," ಎಂದು ತಿಳಿಸಿದ್ದಾರೆ. "ನನ್ನ ಕಲಿಕೆಯನ್ನು, ಜ್ಞಾನವನ್ನು ಅಭಿವೃದ್ಧಿಪಡಿಸುವ ಕುಟುಂಬದಲ್ಲಿ ಹುಟ್ಟಿರುವುದು ನನ್ನ ಅದೃಷ್ಟವಾಗಿದೆ. ನನ್ನ ಆಸಕ್ತಿಯ ಕ್ಷೇತ್ರದಲ್ಲಿ ಕಲಿಕೆ ಮಾಡಲು ನನ್ನ ಪೋಷಕರು ಹಲವಾರು ತ್ಯಾಗವನ್ನು ಮಾಡಿದ್ದಾರೆ," ಎಂದು ಕೂಡಾ ತಿಳಿಸಿದ್ದಾರೆ.

English summary

Google CEO Sundar Pichai Honoured With Padma Bhushan, What He Said?

India’s envoy to the US handed over the Padma Bhushan award to Google CEO Sundar Pichai in San Francisco. What He Said? explained here in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X