For Quick Alerts
ALLOW NOTIFICATIONS  
For Daily Alerts

DA Hike : ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಅಸ್ತು, ಎಷ್ಟಾಗುತ್ತದೆ ಡಿಎ?

|

ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ಅಧಿಕ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರಿಂದಾಗಿ ಸರ್ಕಾರಿ ನೌಕರರು ಇನ್ನು ಮುಂದೆ ಅಧಿಕ ಡಿಎ ಪಡೆಯುವ ಅವಕಾಶ ಲಭ್ಯವಾಗಲಿದೆ.

 

ಡಿಎ ಸುಮಾರು ಶೇಕಡ 4ರಷ್ಟು ಅಧಿಕವಾಗಿ ಶೇಕಡ 38ಕ್ಕೆ ತಲುಪಿದೆ. ಈ ಹಿಂದೆ ತಜ್ಞರು ಕೂಡಾ ಇದೇ ಅಂದಾಜನ್ನು ವ್ಯಕ್ತಪಡಿಸಿದ್ದರು. ಇನ್ನು ಕಳೆದ ತಿಂಗಳು ಡಿಎ ಹೆಚ್ಚಳದ ಬಗ್ಗೆ ನಕಲಿ ಸುದ್ದಿಯೂ ಕೂಡಾ ಹರಿದಾಡಿದೆ.

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) 34 ರಿಂದ 38 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆಕೇಂದ್ರ ಸರ್ಕಾರ ಸ್ಪಷ್ಟಣೆಯನ್ನು ಕೂಡಾ ನೀಡಿದ್ದರು.

Breaking news: ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಅಸ್ತು

ಕೇಂದ್ರದ ನೋಡಲ್ ಏಜೆನ್ಸಿಯಾದ ಸಾರ್ವಜನಿಕ ಮಾಹಿತಿ ಬ್ಯೂರೋದ (ಪಿಐಬಿ) ಸತ್ಯ ಪರಿಶೀಲನಾ ವಿಭಾಗವು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) 34 ರಿಂದ 38 ರಷ್ಟು ಹೆಚ್ಚಳ ಮಾಡಲಾಗಿದೆ ಎಂಬ ಪತ್ರದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ಟ್ವಿಟರ್‌ನಲ್ಲಿ "ನಕಲಿ ಆದೇಶ" ದ ಚಿತ್ರವನ್ನು ಹಂಚಿಕೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಈ ಬಗ್ಗೆ ಮಾಹಿತಿ ನೀಡಿದೆ.

ಡಿಎ ಲೆಕ್ಕಾಚಾರದ ಹೊಸ ಸೂತ್ರ ಯಾವುದು?

7 ನೇ ವೇತನ ಆಯೋಗದ ನಿಯಮಗಳ ಪ್ರಕಾರ ಉದ್ಯೋಗಿಯ ಮೂಲ ವೇತನದ ಆಧಾರದಲ್ಲಿ ಡಿಎ ಮೊತ್ತವನ್ನು ಪ್ರಸ್ತುತ ದರದ ಅಂಶವಾಗಿ ಲೆಕ್ಕಹಾಕಲಾಗುತ್ತದೆ. ಪ್ರಸ್ತುತ ಶೇಕಡಾ 12 ರ ದರದ ಪ್ರಕಾರ, ಈ ಲೆಕ್ಕಾಚಾರವು ಈ ಕೆಳಗಿನಂತಿದೆ.

(ಮೂಲ ವೇತನ x 12)/ 100
(Basic Pay x 12)/ 100

ಡಿಎ ಶೇಕಡ=12 ತಿಂಗಳ ಸಿಪಿಐ ಸರಾಸರಿ (Consumer Price Index) - 115.76

ಇದರ ಉತ್ತರವನ್ನು 115.76ರಿಂದ ಭಾಗಾಕಾರ ಹಾಗೂ 100ರಿಂದ ಗುಣಾಕಾರ ಮಾಡಲಾಗುತ್ತದೆ.

ಈ ನಡುವೆ ಕೇಂದ್ರ ಸರ್ಕಾರಿ ನೌಕರರು ಶೇಕಡ 4ರಷ್ಟು ಡಿಎ ಹೆಚ್ಚಳ ನಿರೀಕ್ಷೆಯಲ್ಲಿ ಇದ್ದಾರೆ. ಇದರಿಂದಾಗಿ ಡಿಎ ಶೇಕಡ 38ಕ್ಕೆ ಏರಿಕೆಯಾಗಲಿದೆ.

English summary

Centre Approves 4% DA Hike For Govt Employees, Calculation Here

Government Approves DA Hike For Govt Staffs, how much da will increase, here is a details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X