For Quick Alerts
ALLOW NOTIFICATIONS  
For Daily Alerts

1.5 ಲಕ್ಷ ಕೋಟಿ ರುಪಾಯಿ ಬಂಡವಾಳ ಎದುರು ನೋಡುತ್ತಿವೆ ಸರ್ಕಾರಿ ಬ್ಯಾಂಕ್ ಗಳು

|

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ 1.5 ಲಕ್ಷ ಕೋಟಿ ರುಪಾಯಿ ಪೂರೈಸುವ ಅಗತ್ಯ ಬರಬಹುದು. ಕೊರೊನಾ ವೈರಸ್ ವ್ಯಾಪಿಸಿರುವ ಕಾಲದಲ್ಲಿ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿಗಳ ಪ್ರಮಾಣ ದ್ವಿಗುಣ ಆಗುವ ನಿರೀಕ್ಷೆ ಇದೆ ಎಂದು ಸರ್ಕಾರದ ಹಾಗೂ ಬ್ಯಾಂಕ್ ಗಳ ಮೂಲಗಳು ಮಾಹಿತಿ ನೀಡಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರಂಭದಲ್ಲಿ ಸರ್ಕಾರವು ಬ್ಯಾಂಕ್ ಗಳ ಬಂಡವಾಳ ಪುನಶ್ಚೇತನಕ್ಕೆ 25 ಸಾವಿರ ಕೋಟಿ ರುಪಾಯಿಯ ಬಜೆಟ್ ಹಾಕಿಕೊಂಡಿತ್ತು. ಆದರೆ ಆ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಯಿತು. ಇನ್ನು ಕೊರೊನಾ ನಿಯಂತ್ರಣಕ್ಕೆ ತರುವ ಉದ್ದೇಶಕ್ಕೆ ದೇಶಾದ್ಯಂತ ಲಾಕ್ ಡೌನ್ ಮಾಡಿದ್ದರಿಂದ ವ್ಯಾಪಾರ- ವ್ಯವಹಾರಕ್ಕೆ ಇನ್ನೂ ದೊಡ್ಡ ಹೊಡೆತ ಬಿತ್ತು ಎನ್ನಲಾಗಿದೆ. ಪರಿಸ್ಥಿತಿ ವಿಷಮವಾಗಿದೆ. ಬ್ಯಾಂಕ್ ಗಳಿಗೆ ಶೀಘ್ರವೇ ಹೊಸದಾಗಿ ಹಣಕಾಸಿನ ಪೂರೈಕೆ ಆಗಬೇಕು ಎಂದು ಮೂಲಗಳು ತಿಳಿಸಿವೆ.

9.35 ಲಕ್ಷ ಕೋಟಿ ನಾನ್ ಪರ್ಫಾರ್ಮಿಂಗ್ ಅಸೆಟ್ಸ್
 

9.35 ಲಕ್ಷ ಕೋಟಿ ನಾನ್ ಪರ್ಫಾರ್ಮಿಂಗ್ ಅಸೆಟ್ಸ್

ಬಂಡವಾಳ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಿಮ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ. ಈ ಆರ್ಥಿಕ ವರ್ಷದ ಎರಡನೇ ಭಾಗದಲ್ಲಿ ಈ ಬಗ್ಗೆ ತೀರ್ಮಾನ ಕೈಹೊಳ್ಳಲಾಗುವುದು ಎಂದು ಮತ್ತೊಂದು ಮೂಲದಿಂದ ತಿಳಿದುಬಂದಿದೆ. ಭಾರತದ ಬ್ಯಾಂಕ್ ಗಳಲ್ಲಿ 9.35 ಲಕ್ಷ ಕೋಟಿ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್ ಪಿಎ) ಇವೆ. ಇದು ಸೆಪ್ಟೆಂಬರ್ 2019ರ ಲೆಕ್ಕ. ಅದನ್ನು ಬಿಡಿಸಿ ಹೇಳಬೇಕು ಅಂದರೆ, ಆ ಕಾಲಕ್ಕೆ ಅವುಗಳ ಒಟ್ಟು ಆಸ್ತಿಯ ಶೇ 9.1ರಷ್ಟು ಎನ್ ಪಿಎ ಇತ್ತು. ಮುಂದಿನ ಮಾರ್ಚ್ ಗೆ ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ ಬ್ಯಾಡ್ ಲೋನ್ ಪ್ರಮಾಣ ಬ್ಯಾಂಕ್ ಗಳ ಒಟ್ಟು ಆಸ್ತಿಯ 18- 20 ಪರ್ಸೆಂಟ್ ಆಗಬಹುದು. 20ರಿಂದ 25 ಪರ್ಸೆಂಟ್ ಬಾಕಿ ಸಾಲವು ವಾಪಸ್ ಬರುವ ಸಾಧ್ಯತೆ ಇಲ್ಲ ಎಂದು ಅಂದಾಜು ಮಾಡಲಾಗಿದೆ.

ಕೇಂದ್ರದಿಂದ ಬಂಡವಾಳ ಪೂರೈಕೆ ಸಾಧ್ಯವಿಲ್ಲ

ಕೇಂದ್ರದಿಂದ ಬಂಡವಾಳ ಪೂರೈಕೆ ಸಾಧ್ಯವಿಲ್ಲ

ದೇಶದಾದ್ಯಂತ ಲಾಕ್ ಡೌನ್ ಮೂರನೇ ತಿಂಗಳಿಗೆ ಕಾಲಿಡುತ್ತಿದೆ. ಅದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಹಿಂಜರಿತ ನಿರೀಕ್ಷೆ ಮಾಡಲಾಗಿದೆ. ಇನ್ನು ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿಗಳು ಬ್ಯಾಂಕಿಂಗ್ ವಲಯದ ಬಗ್ಗೆ ನೆಗೆಟಿವ್ ಅಭಿಪ್ರಾಯವನ್ನು ನೀಡಿದ್ದು, ಆರ್ಥಿಕತೆ ಚೇತರಿಕೆಗೆ ಬಹಳ ಸಮಯ ಬೇಕಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಇಡೀ ಬಂಡವಾಳ ಪೂರೈಕೆಯನ್ನು ಕೇಂದ್ರ ಸರ್ಕಾರ ಮಾಡುವ ಸಾಧ್ಯತೆ ಇಲ್ಲ. ಬಾಂಡ್ ವಿತರಣೆ ಸೇರಿದಂತೆ ಇತರ ಮೂಲಗಳಿಂದ ಬಂಡವಾಳ ಪೂರೈಕೆಗೆ ಪ್ರಯತ್ನಿಸಬೇಕಾಗುತ್ತದೆ. ವಿತ್ತೀಯ ಕೊರತೆ ನಗದೀಕರಣದಿಂದಲೂ ಕೇಂದ್ರ ಬ್ಯಾಂಕ್ ನಿಂದ ಸ್ವಲ್ಪ ಭಾಗ ಹಣದ ನೆರವು ದೊರೆಯಬಹುದು. ಆ ಬಗ್ಗೆ ಕೇಂದ್ರದಿಂದ ಆರ್ ಬಿಐ ಜತೆ ಮಾತುಕತೆ ನಡೆಸಬೇಕಿದೆ.

ಬಜೆಟ್ ನಲ್ಲಿ ಬಂಡವಾಳ ಪೂರೈಸಲು ಹಣ ಎತ್ತಿಟ್ಟಿಲ್ಲ

ಬಜೆಟ್ ನಲ್ಲಿ ಬಂಡವಾಳ ಪೂರೈಸಲು ಹಣ ಎತ್ತಿಟ್ಟಿಲ್ಲ

ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ಗಳಿಗೆ 3.5 ಲಕ್ಷ ಕೋಟಿ ರುಪಾಯಿಯನ್ನು ನೀಡಿದೆ. ಈ ಬಾರಿ ಬಜೆಟ್ ನಲ್ಲಿ ಇನ್ನಷ್ಟು ಬಂಡವಾಳ ಪೂರೈಕೆಗೆ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಬ್ಯಾಂಕಿಂಗ್ ವಲಯದ ಹಿರಿಯರೊಬ್ಬರು ಮಾಧ್ಯಮಗಳ ಜತೆ ಮಾತನಾಡಿ, ಸರ್ಕಾರವು ಸಾಲದ ಬೆಳವಣಿಗೆಯನ್ನು ಈ ಹಣಕಾಸಿನ ವರ್ಷದಲ್ಲಿ 6-7 ಪರ್ಸೆಂಟ್ ಆಗಬೇಕು ಎನ್ನುತ್ತದೆ. ಆದರೆ ಕ್ಯಾಪಿಟಲ್ ಮಾರ್ಕೆಟ್ ನಲ್ಲಿ ಹಣ ಸಂಗ್ರಹ ಮಾಡುವುದು ಸುಲಭ ಇಲ್ಲ ಎಂದಿದ್ದಾರೆ. ಆರ್ಥಿಕತೆಯ ನಿಧಾನಗತಿ ಪರಿಣಾಮದಿಂದಾಗಿ ಬ್ಯಾಂಕ್ ಗಳಿಗೆ ಬಂಡವಾಳ ಅಗತ್ಯ ಇದೆ. ಆಗಷ್ಟೇ ಸ್ಥಿರತೆ ಮತ್ತು ಬೆಳವಣಿಗೆ ಕಾಣಲು ಸಾಧ್ಯ ಎಂದು ಅವರು ಹೇಳಿದ್ದಾರೆ.

English summary

Government Owned Banks May Need 1.5 Lakh Crore Capital

Due to NPA and other reasons government owned banks may need 1.5 lakh crore capital infusion.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more