For Quick Alerts
ALLOW NOTIFICATIONS  
For Daily Alerts

ಈ ಸರಕುಗಳ ಸುಂಕ ಹೆಚ್ಚಳಕ್ಕೆ ಕೇಂದ್ರ ಚಿಂತನೆ, ಇಲ್ಲಿದೆ ವಿವರ

|

ರಫ್ತುಗಳು ಸದ್ಯ ಕಡಿಮೆಯಾಗುತ್ತಿದ್ದು ಟ್ರೇಡ್ ಮಾರುಕಟ್ಟೆಯಲ್ಲಿ ಚರ್ಚೆಯ ವಿಚಾರವಾಗಿದೆ. ಈ ನಡುವೆ ಸರ್ಕಾರವು ಅತೀ ಅಗತ್ಯವಲ್ಲದ ವಸ್ತುಗಳ (non-essential items) ಆಮದಿನ ಸುಂಕವನ್ನು ಹೆಚ್ಚಳ ಮಾಡುವ ಚಿಂತನೆ ನಡೆಸುತ್ತಿದೆ. ಸದ್ಯ ಯಾವೆಲ್ಲ ವಸ್ತುಗಳನ್ನು ಅತೀ ಅಗತ್ಯವಲ್ಲದ ವಸ್ತುಗಳ ಗುಂಪಿಗೆ ಸೇರಿಸುವುದು, ಎಷ್ಟು ಸುಂಕವನ್ನು ಅಧಿಕ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದೆ.

"ನಾವು ಸಾಕಷ್ಟ ಉತ್ಪಾದನ ಸಾಮರ್ಥ್ಯವನ್ನು ಹೊಂದಿರುವ ಅತೀ ಅಗತ್ಯವಲ್ಲದ ವಸ್ತುಗಳ ಆಮದಿನ ಬಗ್ಗೆ ಗಮನ ಹರಿಸುತ್ತಿದ್ದೇವೆ. ಅತೀ ಅಗತ್ಯವಲ್ಲದ ವಸ್ತುಗಳು ಯಾವುದು ಎಂದು ಗೊತ್ತು ಮಾಡಬೇಕಾಗಿದೆ. ಅದು ಕೂಡಾ ಮುಖ್ಯವಾಗಿ ಯಾವ ವಸ್ತುಗಳು ಉತ್ಪಾದನೆ ಬೇಕಾಷ್ಟಿದೆ ಎಂದು ನೋಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಅಧಿಕ ಆಮದಿಗೆ ಅವಕಾಶವಿದೆಯೇ ನೋಡಬೇಕಾಗುತ್ತದೆ," ಎಂದು ಮಾಧ್ಯಮವೊಂದಕ್ಕೆ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Budget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯ Budget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯ

ಇನ್ನು ಎಚ್‌ಎಸ್‌ಎನ್ ಕೋಡ್‌ಗಳನ್ನು (Harmonized System of Nomenclature) ಅನ್ನು ಯಾವುದು ಅಗತ್ಯ ವಸ್ತುಗಳು, ಯಾವುದು ತೀರಾ ಅಗತ್ಯವಲ್ಲದ ವಸ್ತುಗಳು ಎಂದು ವಿಂಗಡನೆ ಮಾಡಲು ಬಳಸಲಾಗುತ್ತದೆ. ಬೈಸಿಕಲ್ ಅನ್ನು ಉತ್ಪಾದಿಸಲು ಸ್ಟೀಲ್, ಅಲೊಮಿನಿಯ, ಸೆರಾಮಿಕ್‌ಗಳನ್ನು ಬಳಸಲಾಗುತ್ತದೆ. ಆದರೆ ಸರ್ಕಾರವು ಸ್ಟೀಲ್ ಮೇಲೆ ಮಾತ್ರ ಆಮದು ಸುಂಕ ಹೆಚ್ಚಿಸುವ ಚಿಂತನೆ ನಡೆಸುತ್ತದೆ.

ಎಲ್‌ಇಡಿ ಲೈಟ್ಸ್‌ಗಳ ಮೇಲೆ ಸುಂಕ

ಎಲ್‌ಇಡಿ ಲೈಟ್ಸ್‌ಗಳ ಮೇಲೆ ಸುಂಕ

ಎಲ್‌ಇಡಿ ಲೈಟ್ಸ್‌ಗಳಿಗೂ ನಿರ್ಬಂಧಗಳು ಇದೆ. ಎಲ್‌ಇಡಿ ಲೈಟ್ಸ್‌ಗಳ ಆಮದು ಸುಂಕವನ್ನು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಸರ್ಕಾರವು ಕೇಲವ ಸಿಂಗಲ್-ವೈರ್ ಎಲ್‌ಇಡಿ ಲೈಟ್ಸ್‌ಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ. ಬೇರೆ ಎಲ್‌ಇಡಿ ಬಲ್ಬ್‌ಗಳ ಮೇಲಿನ ದರ ಹೆಚ್ಚಳದ ಚಿಂತನೆಯನ್ನು ನಡೆಸಿಲ್ಲ. ಆದ್ದರಿಂದಾಗಿ ಸರ್ಕಾರವು ಎಲ್‌ಇಡಿ ಲೈಟ್‌ಗಳನ್ನು ಕೂಡಾ ವಿಭಾಗ ಮಾಡಬೇಕಾಗುತ್ತದೆ.

ವಹಿವಾಟಿಗೆ ಇರುವ ಸವಾಲುಗಳು

ವಹಿವಾಟಿಗೆ ಇರುವ ಸವಾಲುಗಳು

ವಹಿವಾಟಿನ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರವು ರಫ್ತನ್ನು ಅಧಿಕ ಮಾಡಿ, ಆಮದನ್ನು ಕೊಂಚ ಇಳಿಸುವ ಕಡೆ ಗಮನಹರಿಸುತ್ತಿದೆ. ಆದರೆ ಸದ್ಯದ ಪರಿಸ್ಥಿತಿಯು ಭಾರತದ ರಫ್ತು ವ್ಯವಸ್ಥೆಯು ಬೇರೆ ರಾಷ್ಟ್ರಗಳ ರಫ್ತು ವ್ಯವಸ್ಥೆಯಂತೆಯೇ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂಬಂತಿದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಆಮದಿನ ಮೇಲಿನ ಸುಂಕವನ್ನು ಕೂಡಾ ಹೆಚ್ಚಿಸುವ ಮೂಲಕ ಕೊರತೆ ಸರಿದೂಗಿಸಬಹುದು. ಮುಖ್ಯವಾಗಿ ಯಾವುದು ತೀರಾ ಅಗತ್ಯವಲ್ಲವೋ ಹಾಗೂ ಭಾರತದಲ್ಲಿ ಉತ್ಪಾದನೆ ಮಾಡಲಾಗಿದೆಯೋ ಆ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಚಿಂತನೆಯಿದೆ. ಇದರಿಂದಾಗಿ ವಹಿವಾಟಿನ ಕೊರತೆಯನ್ನು ಸರಿದೂಗಿಸಲು ಸಾಧ್ಯವಾಗಲಿದೆ.

ಈ ಹಿಂದೆ ಯಾವೆಲ್ಲ ವಸ್ತುಗಳ ಸುಂಕ ಹೆಚ್ಚಳ

ಈ ಹಿಂದೆ ಯಾವೆಲ್ಲ ವಸ್ತುಗಳ ಸುಂಕ ಹೆಚ್ಚಳ

2022-23ರ ಬಜೆಟ್‌ನಲ್ಲಿ ಹಲವಾರು ವಸ್ತುಗಳ ಆಮದು-ರಫ್ತು ಸುಂಕವನ್ನು ಅಧಿಕಗೊಳಿಸಲಾಗಿದೆ. ಕೊಡೆ (ಛತ್ರಿ), ಹೆಡ್‌ಫೋನ್, ಇಯರ್‌ಫೋನ್, ಲೌಡ್‌ಸ್ಪೀಕರ್ಸ್, ಸ್ಮಾರ್ಟ್ ಮೀಟರ್ಸ್, ಜ್ಯುವೆಲ್ಲರಿಗಳ ಸುಂಕವನ್ನು ಅಧಿಕಗೊಳಿಸಲಾಗಿದೆ. ಬಹುತೇಕ ಈ ವಸ್ತುಗಳನ್ನು ಚೀನಾದಿಂದ ಆಮದು ಮಾಡಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಹಲವಾರು ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಬಾದಾಮಿ, ಸೇಬು ಇತರೆ ಆಹಾರ ಪದಾರ್ಥಗಳ ಆಮದು ಸುಂಕವನ್ನು ಏರಿಸಲಾಗಿದೆ. ಇನ್ನು ಮೊಬೈಲ್ ಫೋನ್‌ಗಳ ತಯಾರಿಗೆ ಬೇಕಾದ ವಸ್ತುಗಳು ಹಾಗೂ ಸೋಲರ್ ಪ್ಯಾನೆಲ್‌ಗಳ ಆಮದು ಸುಂಕವನ್ನು ಕಳೆದ ಐದು ವರ್ಷಗಳಲ್ಲಿ ಅತೀ ಅಧಿಕ ಮಾಡಲಾಗಿದೆ.

English summary

Government Plans to Raise Duty on Non-essential Goods, Details in Kannada

The government is planning to regulate imports of “non-essential items” through hikes in import duties. Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X