For Quick Alerts
ALLOW NOTIFICATIONS  
For Daily Alerts

ಭಾರತ್ ಬಾಂಡ್ ಇಟಿಎಫ್‌ಗೆ ಚಾಲನೆ: ಕೇಂದ್ರ ಸಂಪುಟ ಒಪ್ಪಿಗೆ

|

ದೇಶದ ಮೊದಲ ಭಾರತ್ ಬಾಂಡ್ ಇಟಿಎಫ್‌ಗೆ ಚಾಲನೆ ಸಿಕ್ಕಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹೆಚ್ಚುವರಿ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಅನುಕೂಲವಾಗುವ 'ಭಾರತ್ ಬಾಂಡ್ ಇಟಿಎಫ್' ಗೆ ಚಾಲನೆ ನೀಡಲು ಸಚಿವ ಸಂಪುಟ ಒಪ್ಪಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.

ಷೇರುಪೇಟೆಯಲ್ಲಿ ಬಾಂಡ್‌ಗಳು ವಹಿವಾಟಿಗೆ ಒಳಪಡಲಿದ್ದು, ಸಣ್ಣ ಹೂಡಿಕೆದಾರರು ಸಹ ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಬಾಂಡ್ ಇಟಿಎಫ್‌ನ (ವಿನಿಮಯ-ವ್ಯಾಪಾರ ನಿಧಿ) ಪ್ರತಿ ಯೂನಿಟ್‌ಗೆ 1000 ರುಪಾಯಿ ಇರಲಿದೆ.

ಭಾರತ್ ಬಾಂಡ್ ಇಟಿಎಫ್‌ಗೆ ಚಾಲನೆ: ಕೇಂದ್ರ ಸಂಪುಟ ಒಪ್ಪಿಗೆ

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹೊರಡಿಸುವ ಹಲವು ಬಾಂಡ್‌ಗಳನ್ನು ಇಟಿಎಫ್ ಒಳಗೊಂಡಿರಲಿದೆ. ಇದರಿಂದ ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚುವರಿ ಹಣದ ಹರಿವು ಸಿಗಲಿದೆ. ಬಾಂಡ್‌ಗಳ ಇಟಿಎಫ್, ಮೆಚ್ಯುರಿಟಿ ಅವಧಿ ಹೊಂದಿರಲಿದೆ. ವಹಿವಾಟಿಗೆ ಒಳಪಡುವ ಬಾಂಡ್‌ಗಳು 3 ವರ್ಷ ಮತ್ತು 10 ವರ್ಷಗಳ ಮೆಚ್ಯುರಿಟಿ ಅವಧಿ ಹೊಂದಿರಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತ್ ಬಾಂಡ್ ಇಟಿಎಫ್ ಎಂದರೇನು?
ಇದು ದೇಶದ ಮೊದಲ ಕಾರ್ಪೋರೇಟ್ ಬಾಂಡ್ ಇಟಿಎಫ್ (ವಿನಿಮಯ-ವ್ಯಾಪಾರ ನಿಧಿ) ಆಗಿದ್ದು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಇತರೇ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ಹಣಕಾಸು ಪೂರೈಕೆ ಮಾಡುತ್ತದೆ.

English summary

Govt Clears India's First Bond Bharat Bond ETF

Finance minister nirmala sitharaman said that the cabinet has cleared India's first bond ETF- Bharat bond ETF
Story first published: Wednesday, December 4, 2019, 15:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X